|
| ಅಸ್ಸಾಂ ಪ್ರವಾಹ ಗಂಭೀರ: ಸತ್ತವರ ಸಂಖ್ಯೆ 16 |
| ಗುವಾಹಟಿ, ಶುಕ್ರವಾರ, 5 ಸೆಪ್ಟೆಂಬರ್ 2008 ( 11:48 IST ) | |
ಬ್ರಹ್ಮಪುತ್ರ ಮತ್ತು ಅದರ ಉಪನದಿಗಳ ಏರಿ ಒಡೆದು ಅಸ್ಸಾಂ ಪ್ರವಾಹ ಪರಿಸ್ಥಿತಿ ಬಿಗಡಾಯಿಸಿದೆ.ವಿಶ್ವದ ಅತೀದೊಡ್ಡ ನದಿ ದ್ವೀಪವಾದ ತೀವ್ರ ಪ್ರವಾಹಪೀಡಿತ ಮಾಜುಲಿಯಲ್ಲಿ ಒಬ್ಬ ವ್ಯಕ್ತಿ ನೀರಿನಲ್ಲಿ ಮುಳುಗಿದ್ದು, ಸತ್ತವರ ಸಂಖ್ಯೆ 16ಕ್ಕೇರಿದೆ.
ಮಾಜುಲಿಯ ದಾಂಗ್‌ದೋರಾ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ನೀರುಪಾಲಾಗಿದ್ದರಿಂದ ದ್ವೀಪದಲ್ಲಿ ಸತ್ತವರ ಸಂಖ್ಯೆ 8ಕ್ಕೇರಿದ್ದು, ರಾಜ್ಯದಲ್ಲಿ ಪ್ರಸಕ್ತ ಪ್ರವಾಹದ ಪ್ರಕೋಪದಿಂದ ಸತ್ತವರ ಸಂಖ್ಯೆ 16ಕ್ಕೇರಿದೆ.ದ್ವೀಪದ ಎರಡು ಮುಖ್ಯ ಪಿಡಬ್ಲ್ಯುಡಿ ರಸ್ತೆಗಳು ಥಾಕುರ್ ಕೋಟೆ ಮತ್ತು ಟೊಯೋಟಾ ಬಳಿ ಬಿರುಕು ಬಿಟ್ಟಿದೆ.
ದ್ವೀಪದ ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿ ತರುಣ್ ಗೊಗೋಯಿ, ಪ್ರವಾಹಪೀಡಿತರಿಗೆ ಸೂಕ್ತ ಪರಿಹಾರ ನೀಡುವುದಾಗಿ ಗುರುವಾರ ಪ್ರಕಟಿಸಿದ್ದಾರೆ.ದ್ವೀಪದ ಸುಮಾರು 2 ಲಕ್ಷ ಜನರು ಸಂತ್ರಸ್ತರಾಗಿದ್ದು, ಇಡೀ ದ್ವೀಪವು ಬ್ರಹ್ಮಪುತ್ರ ನದಿಯ ಉಕ್ಕೇರುವ ಪ್ರವಾಹದಲ್ಲಿ ಸಿಕ್ಕಿಬಿದ್ದಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ. |
| |
|
|
|
|
|
|
|