|
| ಅಣುಬಂಧ: ಎನ್ಎಸ್‌ಜಿಯಲ್ಲಿ ಭಾರತ ಪರ ನಿರ್ಣಯ ಸಂಭವ |
| ವಿಯೆನ್ನಾ, ಶುಕ್ರವಾರ, 5 ಸೆಪ್ಟೆಂಬರ್ 2008 ( 09:19 IST ) | |
ಪರಮಾಣು ಸರಬರಾಜು ಸಮೂಹ (ಎನ್ಎಸ್‌ಜಿ) ಗುರುವಾರ ರಾತ್ರಿ ಪರಮಾಣು ವ್ಯಾಪಾರಕ್ಕಾಗಿನ ಭಾರತ ವಿನಾಯಿತಿಗಾಗಿ ಒಮ್ಮತ ಮೂಡಿಸುವತ್ತ ಮುನ್ನಡೆಯುತ್ತಿದೆ. ಸಭೆಯಲ್ಲಿ ಪಾಲ್ಗೊಂಡ ಮೂಲಗಳು ಹೊರಗೆಡವಿದಂತೆ ಅಂತಿಮ ನಿರ್ಧಾರ ಭಾರತದ ಪರವಾಗಿರುವ ಸಾಧ್ಯತೆ ಇದೆ.
ದಿನ ಪೂರ್ತಿ ನಡೆದ ಸಭೆಯಲ್ಲಿ 45 ಸದಸ್ಯ ರಾಷ್ಟ್ರಗಳ ನಿಯೋಗಿಗಳು ದೇಶದ ಮೂರು ದಶಕಗಳ ಪರಮಾಣು ಪ್ರತ್ಯೇಕತೆಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಒಮ್ಮತಕ್ಕೆ ಬರುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ತಾವು ಒಮ್ಮತಕ್ಕೆ ಬರುವ ಸನಿಹದಲ್ಲಿದ್ದು, ನಾಳೆ ಪತ್ರಿಕಾ ಹೇಳಿಕೆ ನೀಡುವ ಸಂಭಾವ್ಯತೆ ಎಂದು ಪಾಶ್ಚಿಮಾತ್ಯ ರಾಜತಾಂತ್ರಿಕರೊಬ್ಬರು ತಿಳಿಸಿದ್ದಾರೆ. ಎನ್ಎಸ್‌ಜಿಯ ಎರಡನೇ ಸೆಶನ್‌ನ ಎರಡು ದಿನಗಳ ಸಭೆಯ ಆರಂಭಿಕ ದಿನದ ಭೇಟಿಯಲ್ಲಿ ನಿಯೋಗಿಗಳು ಅಮೆರಿಕದ ಪರಿಷ್ಕೃತ ವಿನಾಯಿತಿ ಕರಡನ್ನು ಕೂಲಂಕಷವಾಗಿ ಪರಿಗಣಿಸಿದವು.
ಅನೇಕ ಸಂಖ್ಯೆಯ ದೇಶಗಳು ಭಾರತಕ್ಕೆ ವಿನಾಯಿತಿ ನೀಡುವ ಬಗ್ಗೆ ಪರಮಾಣು ಸರಬರಾಜು ಸಮೂಹದ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದವು. ಈ ಕಡೆ ಅಮೆರಿಕ ಇದರ ಪರವಾಗಿ ಒತ್ತು ನೀಡಿದ್ದು, ಈ ವಿಷಯವಾಗಿ ಶೀಘ್ರ ಒಮ್ಮತ ಮೂಡುವ ನಿರೀಕ್ಷೆ ವ್ಯಕ್ತವಾಗಿದೆ.
ಭಾರತಕ್ಕೆ ಪೂರ್ಣ ವಿನಾಯಿತಿ ನೀಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ದೇಳಗಳ ಬಗ್ಗೆ ಕೇಳಿದ ಪ್ರಶ್ನೆಗೆ ರಾಜತಾಂತ್ರಿಕ ಅವರು ಸಕಾರಾತ್ಮಕವಾಗಿ ಹಾಗೂ ಸೌಮ್ಯರಾಗಿದ್ದಾರೆ ಎಂದು ಉತ್ತರಿಸಿದರು.
ನ್ಯೂಜಿಲ್ಯಾಂಡ್, ಆಸ್ಟ್ರಿಯಾ, ನಾರ್ವೆ, ಐರ್ಲ್ಯಾಂಡ್, ನೆದರ್ಲ್ಯಾಂಡ್ ಸೇರಿದಂತೆ ಹಲವು ದೇಶಗಳು ಈ ಪರಿಷ್ಕೃತ ಕರಡು ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದವು. ಈ ಕಡೆ ಅಮೆರಿಕ ಭಾರತ ಪರ ವಾದ ನಡೆಸಿದ್ದು, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಮತ್ತು ಬೃಹತ್ ಆರ್ಥಿಕತೆಯನ್ನು ಜಾಗತಿಕ ಪರಮಾಣು ಮುಖ್ಯವಾಹಿನಿಗೆ ತರುವಲ್ಲಿ ಈ ವಿನಾಯಿತಿ ಒಂದು ಐತಿಹಾಸಿಕ ಅವಕಾಶವಾಗಲಿದೆ ಎಂದು ಪ್ರತಿಪಾದಿಸಿತು.
ಈ ಪ್ರಕ್ರಿಯೆಯಲ್ಲಿ ತಾವು ಸ್ಥಿರತೆಯ ಪ್ರಗತಿ ಕಾಣುತ್ತಿದ್ದು, ಈ ಪ್ರಗತಿಯನ್ನು ತಾವು ಮುಂದುವರಿಸಲಿದ್ದೇವೆ ಎಂದು ಅಮೆರಿಕ ವಿದೇಶಾಂಗ ಉಪಕಾರ್ಯದರ್ಶಿ ವಿಲ್ಲಿಯಮ್ ಬರ್ನ್ಸ್ ಸಭೆಯ ಬಳಿಕ ವರದಿಗಾರರಿಗೆ ತಿಳಿಸಿದ್ದಾರೆ.
ವಿದೇಶಿ ಕಾರ್ಯದರ್ಶಿ ಶಿವಶಂಕರ್ ಮೆನನ್ ಮತ್ತು ಪ್ರಧಾನ ಮಂತ್ರಿಯ ವಿಶೇಷ ನಿಯೋಗಿ ಶ್ಯಾಮ್ ಸರನ್ ದಿನದಾದ್ಯಂತ ಅಮೆರಿಕ ಅಧಿಕಾರಿಗಳ ಸಂಪರ್ಕದಲ್ಲಿದ್ದರು. ಮೊದಲ ದಿನದ ಸಭೆಯಲ್ಲಿ ಪ್ರಗತಿಯನ್ನು ಕಾಣಲಾಗಿದ್ದರೂ, ಕೆಲ ವಿಷಯಗಳು ವಿಶೇಷವಾಗಿ ಭಾರತ ಅಣು ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ಅನಿಶ್ಚಿತತೆ ಮುಂದುವರಿದಿದೆ. ಆದರೆ ನಿರ್ದಿಷ್ಟ ದೇಶಗಳು ಈ ಬಗ್ಗೆ ಸೌಮ್ಯಗೊಂಡಿರುವುದು ಕಂಡಬಂದಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ. |
| |
|
|
|
|
|
|
|