|
| ಒರಿಸ್ಸಾ ದೊಂಬಿ ಪ್ರತಿಭಟಿಸಿ ಕ್ರೈಸ್ತ ಸಂಸ್ಥೆಗಳು ಬಂದ್ |
| ನವದೆಹಲಿ, ಶನಿವಾರ, 30 ಆಗಸ್ಟ್ 2008 ( 09:09 IST ) | |
ಒರಿಸ್ಸಾದಲ್ಲಿ ಮುಂದುವರಿದಿರುವ ಕ್ರೈಸ್ತರ ವಿರುದ್ಧದ ಹಿಂಸಾಚಾರವನ್ನು ಪ್ರತಿಭಟಿಸಿ ದೇಶದಾದ್ಯಂತ ಸಮುದಾಯದಿಂದ ನಡೆಸಲ್ಪಡುತ್ತಿರುವ ಸುಮಾರು 45,000 ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು.
ಕೇರಳದಿಂದ ಹಿಡಿದು ಉತ್ತರಪ್ರದೇಶ, ದಿಲ್ಲಿ, ಹಿಮಾಚಲ ಪ್ರದೇಶ ಮತ್ತು ಕಲಹ ಪೀಡಿತ ಒರಿಸ್ಸಾ ಸೇರಿದಂತೆ ಎಲ್ಲಾ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಶಾಂತಿಯುತ ಪ್ರತಿಭಟನೆ ಆಚರಿಸಿದವು. ಮಧ್ಯ ಪ್ರದೇಶದಲ್ಲಿ ಶಾಲೆಗಳ ಮೇಲೆ ಕಲ್ಲು ತೂರಾಟ ವಾಗಿರುವ ಬಗ್ಗೆ ವರದಿಯಾಗಿವೆ.
ತಮ್ಮ ಎಲ್ಲಾ ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟಿದ್ದು, ಜೀವಿಸುವುದು ಶಿಕ್ಷಣಕ್ಕಿಂತ ಅಗತ್ಯವಾದುದು ಎಂದು ಭಾರತದ ಕ್ಯಾಥೊಲಿಕ್ ಬಿಶಪ್ ಒಕ್ಕೂಟ (ಸಿಬಿಸಿ) ವಕ್ತಾರ ಬಾಬು ಜೋಸೆಪ್ ತಿಳಿಸಿದ್ದಾರೆ. ಒರಿಸ್ಸಾದಲ್ಲಿ ಸಮುದಾಯದ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ವಿರೋಧವಾಗಿ ಅವರು ಶಾಂತಿಯುತ ರ‌್ಯಾಲಿ ನಡೆಸಿದರು ಎಂದು ಹೇಳಿದ ಜೋಸೆಪ್, ಈ 45,000 ಸಂಸ್ಥೆಗಳಲ್ಲಿ ಸುಮಾರು 5 ದಶಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಈ ಪ್ರತಿಭಟನೆ ಖಂಡಿತವಾಗಿಯೂ ಈ ವಿಷಯವಾಗಿ ಗಮನ ಸೆಳೆಯುವುದು ಎಂದು ತಿಳಿಸಿದ್ದಾರೆ.
ದಿಲ್ಲಿಯಲ್ಲಿ ಹಲವು ಮಂದಿ ಕ್ರಿಶ್ಚಿಯನ್ನರು ಹಿಂಸಾಚಾರವನ್ನು ಪ್ರತಿಭಟಿಸಿ ಒರಿಸಾ ಭವನ್‌ನತ್ತ ಮೆರವಣಿಗೆ ನಡೆಸಿದರು. ಈ ರ‌್ಯಾಲಿಯಲ್ಲಿ ದೇಶದಾದ್ಯಂತದ ಕನಿಷ್ಠ 30 ಚರ್ಚ್‌ಗಳ ಕ್ರೈಸ್ತರು ಪಾಲ್ಗೊಂಡರು ಮತ್ತು ಒರಿಸ್ಸಾದಲ್ಲಿನ ಮಾನವ ಹಕ್ಕು ಉಲ್ಲಂಘನೆ ವಿರುದ್ಧ ಘೋಷಣೆ ಕೂಗಿದರು ಎಂದು ಜೋಸೆಫ್ ತಿಳಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಪ್ರೀತಿಸಿದವರ ಮೇಲೆ ಪ್ರೋತ್ಸಾಹ ಮತ್ತು ಗಮನ ನೀಡಬೇಕಾದ ಅವಶ್ಯಕತೆ ಇದೆ.ಸರಿಯಾದ ವ್ಯಕ್ತಿಗಳು ನಿಮ್ಮ ಹಾದಿಗೆ ಬರುವುದರಿಂದ ಅಪೂರ್ಣ ಯೋಜನೆಯೊಂದರಲ್ಲಿ ಪ್ರಗತಿ ಸಾಧಿಸುತ್ತೀರಿ. ನೀವು ಹಿಂದೆ ಕಾರ್ಯಕ್ಷಮತೆಯಿಂದ ನಿರ್ವಹಿಸಿದ್ದ ಕೆಲಸಗಳು ಒಳ್ಳೆಯ ಫಲ ನೀಡಲಿವೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಶಾಸಕರು ಸಚಿವರುಗಳು ಅಮೆರಿಕಾಕ್ಕೆ ಅಕ್ಕಾ ಸಮ್ಮೇಳನಕ್ಕಾಗಿ ಹಾರಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಕನ್ನಡ ಚಿತ್ರರಂಗದಿಂದ ಒಂದಷ್ಟು ಮಂದಿ ಗುರುವಾರ ರಾತ್ರಿ ಅಮೆರಿಕಾಕ್ಕೆ ಹೋಗಿದ್ದಾರೆ. ಅಕ್ಕಾ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಲು ಗುರುಕಿರಣ್ ಹತ್ತು |
| |
|
|
|
|
|
|
|