ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಒರಿಸ್ಸಾ ಹಿಂಸಾಚಾರ ರಾಷ್ಟ್ರೀಯ ಅಪಮಾನ: ಪಿಎಂ
ನವದೆಹಲಿ, ಶುಕ್ರವಾರ, 29 ಆಗಸ್ಟ್ 2008   ( 09:10 IST )
ಒರಿಸ್ಸಾದಲ್ಲಿನ ಕ್ರೈಸ್ತರ ಮೇಲಿನ ಹಿಂಸಾಚಾರ ಒಂದು ರಾಷ್ಟ್ರೀಯ ಅಪಮಾನ ಎಂಬುದಾಗಿ ಕರೆದಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಬಾಧಿತ ಕುಟುಂಬಗಳಿಗೆ ಪರಿಹಾರವನ್ನು ನೀಡಲಾಗುವುದು ಎಂದು ಸಮುದಾಯದ ಮುಖಂಡರಿಗೆ ಭರವಸೆ ನೀಡಿದ್ದಾರೆ.

ಒರಿಸ್ಸಾದಲ್ಲಿ ಪ್ರಸಕ್ತ ನಡೆಯುತ್ತಿರುವ ಕ್ರೈಸ್ತರ ವಿರುದ್ಧದ ಹಿಂಸಾಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೋರಲು ಕ್ರೈಸ್ತ ನಾಯಕರುಗಳು ಪ್ರಧಾನ ಮಂತ್ರಿಯನ್ನು ಭೇಟಿಯಾದರು ಎಂದು ಭಾರತದ ಕ್ಯಾಥೋಲಿಕ್ ಬಿಶಪ್ ಒಕ್ಕೂಟ (ಸಿಬಿಲಿಐ) ವಕ್ತಾರ ಪಾದರ್ ಬಾಬು ಜೋಸೆಪ್ ತಿಳಿಸಿದ್ದಾರೆ.

ಒರಿಸ್ಸಾ ಹಿಂಸಾಚಾರ ಒಂದು ರಾಷ್ಟ್ರೀಯ ನಾಚಿಕೆ ಎಂಬುವಾಗಿನ ಪ್ರಧಾನ ಮಂತ್ರಿಯವರ ಹೇಳಿಕೆಯನ್ನು ಅವರು ಉಲ್ಲೇಖಿಸಿದ್ದಾರೆ. ದೊಂಬಿಯಲ್ಲಿ ಪ್ರಾಣ ಕಳೆದುಕೊಂಡ ಪರಿವಾರದ ಸದಸ್ಯರಿಗೆ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ 300,000 ಪರಿಹಾರ ನೀಡುವ ಬಗ್ಗೆಯೂ ಸಿಂಗ್ ಭರವಸೆ ನೀಡಿದ್ದಾರೆ ಎಂದು ಕ್ರೈಸ್ತ ನಾಯಕರು ತಿಳಿಸಿದ್ದಾರೆ.

ತಮ್ಮ ಸಮುದಾಯದ ವಿರುದ್ಧದ ಹಿಂಸಾಚಾರವನ್ನು ಪ್ರತಿಭಟಿಸಿ 40,000 ಕ್ರೈಸ್ತ ಶಾಲೆ ಮತ್ತು ಕಾಲೇಜುಗಳನ್ನು ಶುಕ್ರವಾರದಂದು ಮುಚ್ಚಲಾಗುವುದು ಎಂದು ಸಿಬಿಸಿಐ ಮತ್ತು ಇತರ ಕ್ರೈಸ್ತ ಸಂಘಟನೆಗಳು ಘೋಷಿಸಿವೆ.

ಇದೇ ವೇಳೆ ಮನಮೋಹನ್ ಸಿಂಗ್ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ರಲ್ಲಿ ಮಾತನಾಡಿದ್ದು, ಹಿಂಸಾಚಾರ ತಡೆಕಟ್ಟಿ, ಸಹಜತೆ ತರಲು ಶೀಘ್ರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ಪ್ರಧಾನ ಮಂತ್ರಿ ಕಛೇರಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿದ್ಯುತ್ ನ್ಯಾಯಾಧಿಕರಣ ಪೀಠದ ಸದಸ್ಯರ ನೇಮಕ
ಒರಿಸ್ಸಾದಲ್ಲಿ ಭುಗಿಲೆದ್ದ ಕೋಮುಹಿಂಸಾಚಾರ
ಅಮರನಾಥ ಬಗ್ಗೆ ಕಾಂಗ್ರೆಸ್ ನಿರ್ಧಾರ ಕೈಗೊಳ್ಳಲಿ-ಬಿಜೆಪಿ
1000 ಕೋಟಿ ಪ್ರವಾಹ ಪರಿಹಾರ ನಿಧಿ ಘೋಷಣೆ
ಪುದುಚೇರಿ ಮುಖ್ಯಮಂತ್ರಿ ರಂಗಸ್ವಾಮಿ ರಾಜೀನಾಮೆ
ಜಮ್ಮುವಿನಲ್ಲಿ ಕಟ್ಟೆಚ್ಚರ ಘೋಷಣೆ
ಗ್ರಹ ಗತಿ
ದೈನಿಕ - ಸೌಂದರ್ಯದತ್ತ ನೀವು ಆಕರ್ಷಿತರಾಗುತ್ತೀರಿ. ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ಸನ್ನಿವೇಶಗಳು ನಿಮ್ಮ ವಿಶ್ವಾಸವನ್ನು ವೃದ್ಧಿಸುತ್ತವೆ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸಗಳಲ್ಲಿ ಸಫಲತೆ ಕಾಣುತ್ತಾರೆ. ನಿಮ್ಮ ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಜನಸ್ಪಂದನ ಕಾರ್ಯಕ್ರಮ: ಸದಾನಂದಗೌಡ
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಶತದಿನಗಳತ್ತ ....
ಬರಗಾಲದಲ್ಲಿ ಮುಖ್ಯಮಂತ್ರಿಗಳ ಪ್ರವಾಸ: ಖರ್ಗೆ ಲೇವಡಿ
ದಸರಾ ಕ್ರೀಡೆಗೆ ಅಭಿನವ್ ಬಿಂದ್ರಾ ಚಾಲನೆ
ಮನರಂಜನೆ
ಚಿತ್ರ ಸುದ್ದಿ - ಮರುಜನ್ಮ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾಯಕಿ ಪ್ರಿಯಾಂಕಾ. ಆದರೆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಿತು. ಆಗ ಈಕೆಯ ಕತೆ ಮುಗಿಯಿತು ಎಂದಿತ್ತು ಗಾಂಧಿನಗರ.
ಮುಂದೆ ಓದಿ|ಮತ್ತಷ್ಟು...