|
| ರಾಮ ಸೇತು ಅಸ್ತಿತ್ವದಲ್ಲಿಲ್ಲ: ಕೇಂದ್ರ |
| ನವದೆಹಲಿ, ಗುರುವಾರ, 24 ಜುಲೈ 2008 ( 09:17 IST ) | |
ವಿವಾದಿತ ಸೇತು ಸಮುದ್ರಂ ಯೋಜನೆಯತ್ತ ಕೈಗೊಳ್ಳುವುದಾಗಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿದವಿತ್‌ನಲ್ಲಿ ತಿಳಿಸಿದೆ.
ರಾಮ ಸೇತು ಎಂಬ ಸೇತುವೆ ಇಲ್ಲದ ಕಾರಣ ತಾವು ಅದನ್ನು ಧ್ವಂಸ ಮಾಡುವುದಿಲ್ಲ. ವಾಸ್ತವಾಗಿ ರಾಮ ದೇವರೆ ತಮ್ಮ ಮಂತ್ರವಿದ್ಯೆಯ ಬಾಣದಿಂದ ಅದನ್ನು ಧ್ವಂಸ ಮಾಡಿದ್ದಾರೆ ಎಂದು ಕೇಂದ್ರ ಸರಕಾರ ತಮಿಳಿನ 'ಕಂಬನ್ ರಾಮಾಯಣ'ವನ್ನು ಉಲ್ಲೇಖಿಸುತ್ತಾ ತನ್ನ ಅಫಿದವಿತ್‌ನಲ್ಲಿ ತಿಳಿಸಿದೆ.
ತಾವು ಈ ಮಾರ್ಗವಾಗಿ ಕೇವಲ ಜಲಮಾರ್ಗವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದೇವೆ. ಇದರಿಂದ ಹಡಗುಗಳು ಶ್ರೀಲಂಕಾವನ್ನು ಸುತ್ತು ಬರುವ ಬದಲಾಗಿ ನೇರವಾಗಿ ಪಶ್ಚಿಮ ಕರಾವಳಿಯಿಂದ ಪೂರ್ವ ಕರಾವಳಿಗೆ ಕ್ರಮಿಸಬಹುದು ಎಂದು ಕೇಂದ್ರ ಸರಕಾರ ಹೇಳಿದೆ.
ಜುಲೈ 2004ರಲ್ಲಿ ಪ್ರಾರಂಭವಾದ ಈ ಯೋಜನೆ, ಸೇತು ಸಮುದ್ರಂ ಕಾಲುವೆ ಸುತ್ತಮುತ್ತ ಹೂಳೆತ್ತುವಿಕೆಯ ವಿರುದ್ಧ ಹಿಂದೂ ಸಂಘಟನೆಗಳು ತೀವ್ರ ರೀತಿಯ ಪ್ರತಿಭಟನೆ ಮಾಡಿದ್ದರಿಂದ ಸಂಕಷ್ಟಕ್ಕೊಳಗಾಯಿತು. ಈ ಯೋಜನೆ ರಾಮ ದೇವರು ಕಟ್ಟಿದರೆನ್ನಲಾದ ರಾಮ ಸೇತುವನ್ನು ನಾಶಗೊಳಿಸುವುದು ಎಂಬುದು ಹಿಂದೂ ಸಂಘಟನೆಗಳ ವಾದ.
ಕೇಂದ್ರದ ಅಫಿದವಿತ್‌ಗೆ ಬಿಜೆಪಿ ವಿರೋಧ: ಸೇತು ಸಮುದ್ರಂ ಯೋಜನೆ ಮೇಲಿನ ಕೇಂದ್ರ ಸರಕಾರದ ಅಫಿದವಿತ್‌ನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ವಿಶ್ವಾಸ ಮತದ ವೇಳೆ ಡಿಎಂಕೆ ನೀಡಿದ ಬೆಂಬಲಕ್ಕೆ ಪ್ರತಿಯಾಗಿ ಯುಪಿಎ ಸರಕಾರ ಬೆಲೆ ತೆರುತ್ತಿದೆ ಎಂದು ಪ್ರದಿಪಾದಿಸಿದೆ.
ವಿಶ್ವಾಸಮತದ ವೇಳೆ ಡಿಎಂಕೆಯಿಂದ ಪಡೆದ ಬೆಂಬಲಕ್ಕಾಗಿ ಯುಪಿಎ ಸರಕಾರ ಈ ಪ್ರತಿಫಲ ನೀಡುತ್ತಿದೆ. ಈ ಅಪಿದವಿತ್ ದೇಶದ ಮಿಲಿಯಗಟ್ಟಲೆ ಹಿಂದೂಗಳ ನಂಬಿಕೆಗೆ ಮತ್ತೊಂದು ದೊಡ್ಡ ಆಘಾತವಾಗಿದೆ ಎಂದು ಬಿಜೆಪಿ ನಾಯಕ ವಿಜಯ್ ಮಲ್ಹೋತ್ರ ತಿಳಿಸಿದ್ದಾರೆ.
ಇದೇ ವಿಷಯವಾಗಿ ದೇಶದಾದ್ಯಂತ ಯುಪಿಎ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸುವ ಬಿಜೆಪಿ, ಶೀಘ್ರದಲ್ಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿದೆ ಎಂದು ತಿಳಿಸಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು. |
| |
|
|
|
|
 | | pti |
| | |
| |
|
|
|
|
|
| ಚಿತ್ರ ಸುದ್ದಿ - ಆಕೆ ರಿಯಲ್ ಲೈಫ್‌ನಲ್ಲಿ ತುಂಬಾ ಮಾಡರ್ನ್ ಹುಡುಗಿ. ಆದರೆ ರೀಲಿನಲ್ಲಿ ಮಾತ್ರ ಲಂಗಧಾವಣಿ ಹಾಕುವಂತಹ ಬೆಡಗಿ. ಈ ಹಿಂದೆ ಯಾವತ್ತೂ ಲಂಗಧಾವಣಿ ಹಾಕದ ರಮ್ಯಾ ಬಾರ್ನಾ 'ನನ್ನೆದಯ ಹಾಡು' ಚಿತ್ರಕ್ಕಾಗಿ ಲಂಗಧಾವಣಿ ತೊಟ್ಟಿದ್ದಾರೆ. |
| |
|
|
|
|
|
|
|