|
| ಸಿಪಿಎಂನಿಂದ ಸೋಮನಾಥ್ ಚಟರ್ಜಿ ಉಚ್ಚಾಟನೆ |
| ನವದೆಹಲಿ, 23 ಜುಲೈ 2008 ( 17:54 IST ) | |
ಸಂಸತ್ತಿನಲ್ಲಿ ವಿಶ್ವಾಸಮತ ಗೊತ್ತುವಳಿಯಲ್ಲಿ ಪಕ್ಷದ ಆದೇಶವನ್ನು ಉಲ್ಲಂಘಿಸಿ ಲೋಕಸಭೆ ಅಧ್ಯಕ್ಷರಾಗಿ ಮುಂದುವರಿದ ಸಿಪಿಎಂ ಹಿರಿಯ ನಾಯಕ ಸೋಮನಾಥ ಚಟರ್ಜಿ ಅವರನ್ನು ಸಿಪಿಎಂ ಬುಧವಾರ ಉಚ್ಚಾಟಿಸಿದೆ. ನವದೆಹಲಿಯಲ್ಲಿ ಸಿಪಿಎಂ ಪಾಲಿಟ್‌ಬ್ಯೂರೊ ಸಭೆಯಲ್ಲಿ ಸೋಮನಾಥ್ ಅವರನ್ನು ಉಚ್ಚಾಟಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಸೋಮನಾಥ್ ಅವರನ್ನು ಉಚ್ಚಾಟಿಸಿದ ಔಪಚಾರಿಕ ಪ್ರಕಟಣೆ ಸದ್ಯದಲ್ಲೇ ನಿರೀಕ್ಷಿಸಲಾಗಿದೆ. ಸೋಮನಾಥ್ ಸಂವಿಧಾನದ 10 ಪರಿಚ್ಛೇದದ ಅನ್ವಯ ಪಕ್ಷದಿಂದ ಉಚ್ಚಾಟಿಸಲಾಗಿದ್ದರೂ ಲೋಕಸಭೆ ಅಧ್ಯಕ್ಷರಾಗಿ ಮುಂದುವರಿಯಬಹುದು.
ಲೋಕಸಭೆಯ 100 ಸದಸ್ಯರು ನೋಟಿಸ್ ನೀಡಿ ಮತದಾನದ ಮೂಲಕ ಮೂರನೇ ಎರಡರಷ್ಟು ಸದಸ್ಯರು ಅನುಮೋದನೆ ನೀಡಿದ ನಂತರವೇ ಅವರ ಪದಚ್ಯುತಿ ಸಾಧ್ಯವಾಗುತ್ತದೆ. ಸೋಮನಾಥ್ ಬುಧವಾರ ಹಠ ಹಿಡಿದು ತಾವು ಸಂವಿಧಾನಿಕ ಹುದ್ದೆಯಿಂದ ಕೆಳಕ್ಕಿಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಎಡರಂಗದ ಅಧ್ಯಕ್ಷ ಬಿಮನ್ ಬೋಸ್ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದ ಸೋಮನಾಥ್ ತಾವು ಸ್ಪೀಕರ್ ಹುದ್ದೆಯಲ್ಲಿ ಮುಂದುವರಿಯಲು ಬಯಸುವುದಾಗಿ ತಿಳಿಸಿದ್ದರು. ತಮ್ಮನ್ನು ಹುದ್ದೆ ತ್ಯಜಿಸುವಂತೆ ಅತಿಯಾದ ಬಲವಂತ ಮಾಡಿದರೆ, ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಅವರು ತಿಳಿಸಿದ್ದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|