ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಸೋಮನಾಥ್ ಬಂಡಾಯ: ಕಠಿಣ ಕ್ರಮ ಸಂಭವ
ನವದೆಹಲಿ, 23 ಜುಲೈ 2008   ( 16:16 IST )
pti
ಪಕ್ಷವನ್ನು ವಿರೋಧಿಸಿ ಲೋಕಸಭೆ ಸ್ಪೀಕರ್ ಆಗಿ ಮುಂದುವರಿದ ಮತ್ತು ಜುಲೈ 22ರ ವಿಶ್ವಾಸ ಮತದ ಅಧ್ಯಕ್ಷತೆ ವಹಿಸಿದ ಸೋಮನಾಥ್ ಚಟರ್ಜಿಯವರ ವಿರುದ್ಧ ಸಿಪಿಐ-ಎಂ ಕಠಿಣ ಕ್ರಮ ಕೈಗೊಳ್ಳುವ ಸಂಭವವಿದೆ.

ಮೂಲಗಳ ಪ್ರಕಾರ ಶಿಸ್ತು ಕ್ರಮ ಬಹು ಬೇಗ ಬರುವ ಸಾಧ್ಯತೆ ಇದ್ದು, ಇಂದು ಸಂಜೆ ನಡೆಯಲಿರುವ ಸಿಪಿಐ-ಎಂ ಪೊಲಿಟ್ ಬ್ಯೂರೋ ಸಭೆಯಲ್ಲಿ ಶಿಸ್ತು ಕ್ರಮದ ನಿರ್ಣಯ ತೆಗೆದು ಕೊಳ್ಳುವ ಸಂಭವವಿದೆ.

ಈ ಕಡೆ ಸ್ಪೀಕರ್ ಸೋಮನಾಥ್ ಚಟರ್ಜಿ ತಾವು ಸದ್ಯಕ್ಕೆ ಸಂವಿಧಾನಿಕ ಹುದ್ದೆಯಿಂದ ಕೆಳಕ್ಕಿಳಿಯುವುದಿಲ್ಲ ಎಂದು ಹೇಳುವ ಮೂಲಕ ಪಕ್ಷದ ವಿರುದ್ಧವಾಗಿನ ತಮ್ಮ ಬಂಡಾಯವನ್ನು ಮುಂದುವರಿಸಿದ್ದಾರೆ.

ತಾವು ಸ್ಪೀಕರ್ ಹುದ್ಧೆಯಲ್ಲಿ ಮುಂದುವರಿಯಲು ಇಚ್ಚಿಸುವುದಾಗಿ, ಒಂದು ವೇಳೆ ಈ ನಿಟ್ಟಿನಲ್ಲಿ ಒತ್ತಾಯ ಪಡಿಸಿದರೆ, ತಾನು ಪಕ್ಷವನ್ನು ತೊರೆಯುವುದಾಗಿ ಸೋಮನಾಥ್ ಚಟರ್ಜಿ ದೂರವಾಣಿ ಮೂಲಕ ಪಶ್ಚಿಮ ಬಂಗಾಳ ಎಡಪಕ್ಷ ಅಧ್ಯಕ್ಷ ಬಿಮನ್ ಬೋಸ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಸಿಪಿಐ-ಎಂ ಕೇಂದ್ರ ಸಮಿತಿ ದಿಲ್ಲಿಯಲ್ಲಿ ಸಭೆ ನಡೆಸುತ್ತಿದ್ದು, ಈ ವಿಷಯವಾಗಿ ಮುಂದಿನ ಕ್ರಮಗಳ ಬಗ್ಗೆ ವಿಚಾರ ನಡೆಸುವ ನಿರೀಕ್ಷೆ ಇದೆ. ಸೋಮನಾಥ್ ಪಕ್ಷದ ಒಬ್ಬ ಹಿರಿಯ ಸದಸ್ಯನಾಗಿದ್ದು, ಅವರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳುವುದು ಎಂಬುದರ ಬಗ್ಗೆ ಪಕ್ಷದ ನಾಯಕರು ಗೊಂದಲದಲ್ಲಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬಿಜೆಪಿ ವಿಪ್ ಉಲ್ಲಂಘನೆ: 8 ಸದಸ್ಯರ ಉಚ್ಚಾಟನೆ
ವಿಶ್ವಾಸಮತ-ಇಬ್ಬರು ಎನ್‌ಡಿಎ ಸಂಸದರು ನಾಪತ್ತೆ
ಎನ್‌ಡಿಎ, ಯುಪಿಎ ಕೈಗೂಡಿಸುವಿಕೆ: ಮಾಯಾವತಿ
ಪ್ರಜಾತಂತ್ರದ ದುಃಖಕರ ದಿನ: ಸಿಪಿಎಂ ಟೀಕೆ
ಆರ್ಥಿಕ ಸುಧಾರಣೆ ಮುನ್ನಡೆ: ಚಿದಂಬರಂ
ಪ್ರಧಾನಿಯಿಂದ ಸೂಕ್ತವಾದ ನಿರ್ಧಾರ: ರಾಹುಲ್ ಗಾಂಧಿ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...