ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಅತೀ ಸಂತೋಷ, ಅತೀ ದುಃಖದ ದಿನ: ಅಮರ್‌ಸಿಂಗ್
ನವದೆಹಲಿ, 23 ಜುಲೈ 2008   ( 11:40 IST )
ಯುಪಿಎ 275 ಮತಗಳ ಬಹುಮತದಿಂದ ವಿಶ್ವಾಸಮತಯಾಚನೆಯಲ್ಲಿ ಜಯಗಳಿಸುವ ಮ‌ೂಲಕ ಅನೇಕ ದಿನಗಳ ರಾಜಕೀಯ ಊಹಾಪೋಹ ಮತ್ತು ನಾಟಕಕ್ಕೆ ನಿರ್ಣಾಯಕ ತೆರೆಬಿದ್ದಿದೆ. ವಿಶ್ವಾಸ ಮತವನ್ನು ಮತಕ್ಕೆ ಹಾಕುವ ದಿನದ ಬೆಳವಣಿಗೆಗಳಿಂದ ಕೆಲವರಿಗೆ ಆಘಾತ ಉಂಟಾದರೆ, ಇನ್ನೂ ಕೆಲವರು ನಿಟ್ಟುಸಿರು ಬಿಟ್ಟರು. ಅನೇಕ ಮಂದಿಯ ಮುಖದಲ್ಲಿ ಮುಗುಳುನಗೆ ಮ‌ೂಡಿದರೆ, ಇನ್ನೂ ಕೆಲವರ ಮುಖ ಕಳಾಹೀನವಾಗಿತ್ತು.

ಸರ್ಕಾರ ಐತಿಹಾಸಿಕ ಗೆಲುವು ಗಳಿಸಿದ ಬಳಿಕ ಅನೇಕ ರಾಜಕಾರಣಿಗಳು ನಾನಾ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಯುಪಿಎ ವಿಶ್ವಾಸ ಮತದಲ್ಲಿ ಗೆಲುವಿನೊಂದಿಗೆ, ಎಸ್‌ಪಿ ಪ್ರಧಾನಕಾರ್ಯದರ್ಶಿ ಅಮರ್‌ಸಿಂಗ್ ಎಡ, ಬಿಜೆಪಿ ಮತ್ತು ಬಿಎಸ್‌ಪಿಯ ಅಪವಿತ್ರ ಮೈತ್ರಿಯಿಂದ ರಾಷ್ಟ್ರವನ್ನು ಅಭದ್ರ ಸ್ಥಿತಿಗೆ ದೂಡಿದ್ದಕ್ಕಾಗಿ ಕಿಡಿಕಾರಿದರು. ಇಂದು ನನ್ನ ರಾಜಕೀಯ ಜೀವನದ ಅತ್ಯಂತ ಸಂತೋಷದ ಮತ್ತು ದುಃಖದ ದಿನ.

ಎಡಪಕ್ಷ ಮತ್ತು ಆಡ್ವಾಣಿ ನಿಂದನೆಗೆ ಗುರಿಯಾಗಿದ್ದಾರೆ. ಅವರೀಗ ರಾಷ್ಟ್ರಕ್ಕೆ ಉತ್ತರ ನೀಡಬೇಕಾಗಿದೆ. ಆದರೆ ಅವರು ನನ್ನ ವರ್ಚಸ್ಸಿಗೆ ಮಸಿ ಬಳಿದಿದ್ದರಿಂದ ದುಃಖವಾಗಿದೆ ಎಂದು ಅವರು ಹೇಳಿದ್ದಾರೆ.ಅಡ್ವಾಣಿ ವಿರುದ್ಧ ವಾಗ್ದಾಳಿ ಮಾಡಿದ ಅವರು, ನಿಮಗೆ ಮತಗಳ ಮ‌ೂಲಕ ಗೆಲುವು ಗಳಿಸಲು ಸಾಧ್ಯವಾಗದಿದ್ದರಿಂದ ಹಣವನ್ನು ಬಳಸಲು ಪ್ರಯತ್ನಿಸಿದಿರಿ. ನಾನು ಸಹ ಹಾಗೆ ಆರೋಪ ಮಾಡಬಲ್ಲೆ ಎಂದು ಅಮರ್ ಸಿಂಗ್ ಟೀಕಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಎನ್‌ಡಿಎ, ಯುಪಿಎ ಕೈಗೂಡಿಸುವಿಕೆ: ಮಾಯಾವತಿ
ಪ್ರಜಾತಂತ್ರದ ದುಃಖಕರ ದಿನ: ಸಿಪಿಎಂ ಟೀಕೆ
ಆರ್ಥಿಕ ಸುಧಾರಣೆ ಮುನ್ನಡೆ: ಚಿದಂಬರಂ
ಪ್ರಧಾನಿಂದ ಸೂಕ್ತವಾದ ನಿರ್ಧಾರ: ರಾಹುಲ್ ಗಾಂಧಿ
ಯುಪಿಎಗೆ ಸಂಖ್ಯಾ ಜಯ, ಆದರೆ ನೈತಿಕ ಜಯವಲ್ಲ: ಆಡ್ವಾಣಿ
ಕರ್ನಾಟಕದ ಇಬ್ಬರು ಬಿಜೆಪಿ ಸಂಸದರಿಂದ ಯುಪಿಎಗೆ ಮತ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...