ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಕರ್ನಾಟಕದ ಇಬ್ಬರು ಬಿಜೆಪಿ ಸಂಸದರಿಂದ ಯುಪಿಎಗೆ ಮತ
ನವದೆಹಲಿ, 22 ಜುಲೈ 2008   ( 22:11 IST )
ವಿಶ್ವಾಸಮತ ಯಾಚನೆಯಲ್ಲಿ ಯುಪಿಎ ಸರ್ಕಾರ ಜಯಗಳಿಸುವ ಮ‌ೂಲಕ ಭಾರತ-ಅಮೆರಿಕ ಅಣುಒಪ್ಪಂದಕ್ಕಿದ್ದ ಅಡ್ಡಿಆತಂಕಗಳು ನಿವಾರಣೆಯಾಗಿದೆ. ಅನೇಕ ನಾಟಕೀಯ ಬೆಳವಣಿಗೆ, ಗೊಂದಲ, ಗೌಜುಗಳಿಗೆ ಸಾಕ್ಷಿಯಾದ ವಿಶ್ವಾಸ ಮತ ಯಾಚನೆ ಕೊನೆಗೂ ಯುಪಿಎ ಸರ್ಕಾರಕ್ಕೆ ಜಯವನ್ನು ದಕ್ಕಿಸಿಕೊಟ್ಟಿದ್ದು, ಮುಳುಗುತ್ತಿದ್ದ ಯುಪಿಎ ನೌಕೆಯನ್ನು ಮೇಲೆತ್ತಿದೆ.

ಲೋಕಸಭೆಯಲ್ಲಿ ವಿಶ್ವಾಸಮತವನ್ನು ಮತದಾನಕ್ಕೆ ಹಾಕುವ ಸಂದರ್ಭದಲ್ಲಿ ಒಟ್ಟು 10 ಸಂಸತ್ ಸದಸ್ಯರು ಗೈರುಹಾಜರಿಯಾಗಿದ್ದು, ಒಟ್ಟು 531 ಸಂಸದರು ಮತಚಲಾಯಿಸಿದ್ದಾರೆ. 4 ಬಿಜೆಪಿ ಸಂಸತ್ ಸದಸ್ಯರು, ತೆಲುಗುದೇಶಂ ಪಕ್ಷದ ಇಬ್ಬರು ಮತ್ತು ಬಿಜೆಡಿ ಮತ್ತು ಜೆಡಿಎಸ್‌ನ ತಲಾ ಒಬ್ಬರು ಎಂಪಿ ಅಡ್ಡಮತದಾನ ಮಾಡಿದ್ದಾರೆ. ಕರ್ನಾಟಕದ ಜೆಡಿಎಸ್ ಸಂಸದ ಶಿವಣ್ಣ ತಾವು ಯುಪಿಎಗೆ ಮತ ಹಾಕಿದ್ದಾರೆಂದು ತಿಳಿದುಬಂದಿದೆ.

ಬಿಜೆಡಿಯ ಸಂಸದ ಹರಿಹರ್ ಸ್ವೈನ್ ಯುಪಿಎ ಪರವಾಗಿ ಮತ ಚಲಾಯಿಸಿದ್ದಾರೆ. ಕರ್ನಾಟಕದ ಇಬ್ಬರು ಬಿಜೆಪಿ ಸಂಸತ್ ಸದಸ್ಯರು ಯುಪಿಎ ಪರವಾಗಿ ಮತಚಲಾಯಿಸುವ ಮ‌ೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ. ಕರ್ನಾಟಕದ ಒಬ್ಬರು ಸಂಸತ್ ಸದಸ್ಯರು ಮತದಾನಕ್ಕೆ ಗೈರುಹಾಜರಿಯಾಗಿದ್ದಾರೆ.

ಅನೇಕ ನಾಟಕೀಯ ಬೆಳವಣಿಗೆಯಿಂದ ಕೂಡಿದ ಈ ಸಲದ ವಿಶ್ವಾಸಮತ ಯಾಚನೆ, ಗೊಂದಲ, ಗೋಜಲಿನಲ್ಲಿ ಮುಳುಗಿತು. ಯುಪಿಎ ಪರವಾಗಿ ಮತ ಚಲಾಯಿಸಲು ತಲಾ ಮ‌ೂರು ಕೋಟಿ ರೂ. ಹಣದ ಆಮಿಷ ಒಡ್ಡಲಾಗಿದೆಯೆಂದು ಮ‌ೂವರು ಬಿಜೆಪಿ ಸಂಸದರು ಆರೋಪಿಸಿದರು. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸದೇ ಬಿಡುವುದಿಲ್ಲ ಎಂದು ಸೋಮನಾಥ ಚಟರ್ಜಿ ಆಶ್ವಾಸನೆ ನೀಡಿದ ಬಳಿಕ ಚರ್ಚೆ ಮುಂದುವರಿಯಿತು.

ಎಲೆಕ್ಟ್ರಾನಿಕ್ ಮತದಾನದಲ್ಲಿ ಸರ್ಕಾರದ ಪರವಾಗಿ 253 ಮತ್ತು ಮತ್ತು ವಿರುದ್ಧವಾಗಿ 232 ಮತಗಳು ಬಿದ್ದಿದ್ದು ಯುಪಿಎ ಸರ್ಕಾರ ವಿಜಯಿಯೆಂದು ತೋರಿಸಿದಾಗ ಒಂದು ಕ್ಷಣ ಗಲಿಬಿಲಿ ಉಂಟಾಯಿತು. ಉಳಿದ 54 ಸದಸ್ಯರು ಮತಚಲಾಯಿಸದೇ ಸ್ತಬ್ಧರಾಗಿ ಉಳಿದಿದ್ದು ಇದಕ್ಕೆ ಕಾರಣವಾಗಿತ್ತು. ಬಳಿಕ ಚೀಟಿಯ ಮ‌ೂಲಕ 54 ಸದಸ್ಯರು ಮತದಾನ ಮಾಡಿದ ಬಳಿಕ ಅಂತಿಮ ಫಲಿತಾಂಶ ಹೊರಬಿತ್ತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸಿಪಿಎಂನಿಂದ ಸೋಮನಾಥ್ ಚಟರ್ಜಿ ಉಚ್ಚಾಟನೆ
ಬಿಜೆಪಿ ವಿಪ್ ಉಲ್ಲಂಘನೆ: 8 ಸದಸ್ಯರ ಉಚ್ಚಾಟನೆ
ಸೋಮನಾಥ್ ಬಂಡಾಯ: ಕಠಿಣ ಕ್ರಮ ಸಂಭವ
ವಿಶ್ವಾಸಮತ-ಇಬ್ಬರು ಎನ್‌ಡಿಎ ಸಂಸದರು ನಾಪತ್ತೆ
ಎನ್‌ಡಿಎ, ಯುಪಿಎ ಕೈಗೂಡಿಸುವಿಕೆ: ಮಾಯಾವತಿ
ಪ್ರಜಾತಂತ್ರದ ದುಃಖಕರ ದಿನ: ಸಿಪಿಎಂ ಟೀಕೆ
ಗ್ರಹ ಗತಿ
ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
pti
 
ಸಿಪಿಎಂನಿಂದ ಸೋಮನಾಥ್ ಚಟರ್ಜಿ ಉಚ್ಚಾಟನೆ
ಸಂಸತ್ತಿನಲ್ಲಿ ವಿಶ್ವಾಸಮತ ಗೊತ್ತುವಳಿಯಲ್ಲಿ ಪಕ್ಷದ ಆದೇಶವನ್ನು....
ವಿಶ್ವಾಸಮತ-ಇಬ್ಬರು ಎನ್‌ಡಿಎ ಸಂಸದರು ನಾಪತ್ತೆ
ಬಿಜೆಪಿ ವಿಪ್ ಉಲ್ಲಂಘನೆ: 8 ಸದಸ್ಯರ ಉಚ್ಚಾಟನೆ
ಮನರಂಜನೆ
ಚಿತ್ರ ಸುದ್ದಿ - ಆಕೆ ರಿಯಲ್ ಲೈಫ್‌ನಲ್ಲಿ ತುಂಬಾ ಮಾಡರ್ನ್ ಹುಡುಗಿ. ಆದರೆ ರೀಲಿನಲ್ಲಿ ಮಾತ್ರ ಲಂಗಧಾವಣಿ ಹಾಕುವಂತಹ ಬೆಡಗಿ. ಈ ಹಿಂದೆ ಯಾವತ್ತೂ ಲಂಗಧಾವಣಿ ಹಾಕದ ರಮ್ಯಾ ಬಾರ್ನಾ 'ನನ್ನೆದಯ ಹಾಡು' ಚಿತ್ರಕ್ಕಾಗಿ ಲಂಗಧಾವಣಿ ತೊಟ್ಟಿದ್ದಾರೆ.
ಮುಂದೆ ಓದಿ|ಮತ್ತಷ್ಟು...