ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
275-256: ವಿಶ್ವಾಸ ಮತ ಯಾಚನೆಯಲ್ಲಿ ಯುಪಿಎ ಜಯಭೇರಿ
ನವದೆಹಲಿ, ಮಂಗಳವಾರ, 22 ಜುಲೈ 2008   ( 21:16 IST )
PTI
ಯುಪಿಎ ಸರ್ಕಾರ ವಿಶ್ವಾಸ ಮತ ಯಾಚನೆಯಲ್ಲಿ ಮಂಗಳವಾರ ಜಯಗಳಿಸುವ ಮ‌ೂಲಕ ಭಾರತ-ಅಮೆರಿಕ ಅಣು ಒಪ್ಪಂದಕ್ಕೆ ಹಸಿರು ನಿಶಾನೆ ಸಿಕ್ಕಿದೆ. ವಿಶ್ವಾಸ ಮತದ ಪರವಾಗಿ 275 ಮತಗಳು ಬಿದ್ದಿದ್ದು, ವಿಶ್ವಾಸಮತದ ವಿರುದ್ಧವಾಗಿ 256 ಮತಗಳು ಸಿಕ್ಕಿದವು. ಆದರೆ ಇದಕ್ಕೂ ಮುಂಚೆ ನಡೆದ ನಾಟಕೀಯ ಬೆಳವಣಿಗೆಗಳಿಂದ ಲೋಕಸಭೆ ಗೊಂದಲದಲ್ಲಿ ಮುಳುಗುವಂತಾಯಿತು.

ಬಿಜೆಪಿ ಸಂಸದರು ನೋಟುಗಳ ಕಂತೆಗಳನ್ನು ಝುಳುಪಿಸಿ ಸಮಾಜವಾದಿ ಪಕ್ಷದ ವಿರುದ್ಧ ಲಂಚದ ಆರೋಪ ಮಾಡಿದಾಗ ಇಡೀ ಸದನ ಗದ್ದಲದಲ್ಲಿ ಮುಳುಗಿತು. ಬಳಿಕ ನಡೆದ ಎಲೆಕ್ಟ್ರಾನಿಕ್ ಮತದಾನದಲ್ಲಿ ಸರ್ಕಾರದ ಪರವಾಗಿ 253 ಮತಗಳು ಮತ್ತು ವಿರುದ್ಧವಾಗಿ 232 ಮತಗಳು ಬಿದ್ದಿದ್ದವು. ಪ್ರಧಾನಮಂತ್ರಿ ವಿಶ್ವಾಸ ಮತಯಾಚನೆಯಲ್ಲಿ ಗೆದ್ದಿದ್ದಾರೆಂದು ಎಲೆಕ್ಟ್ರಾನಿಕ್ ಮತದಾನದ ಫಲಿತಾಂಶ ತೋರಿಸಿತು.

ಆದಾಗ್ಯೂ, ಅನೇಕ ಸದಸ್ಯರು ಸರಿಯಾಗಿ ಮತ ಚಲಾಯಿಸಿರಲಿಲ್ಲ ಅಥವಾ ಮ್ಯಾನುಯಲ್ ಮತದಾನಕ್ಕಾಗಿ ಕಾದಿದ್ದರು. ಬಳಿಕ ಒಳಮೊಗಸಾಲೆಯಲ್ಲಿ ಮತ ಚಲಾಯಿಸಿದ ನಾಲ್ವರು ಸದಸ್ಯರು ಸೇರಿದಂತೆ 54 ಮತಗಳು ಇನ್ನೂ ಬಾಕಿವುಳಿದಿದ್ದು ಅದರ ಎಣಿಕೆ ಮಾಡಬೇಕೆಂದು ಪ್ರಕಟಿಸಲಾಯಿತು. ಮೊಗಸಾಲೆಯಲ್ಲಿ ಮತ ಚಲಾಯಿಸಿದವರಲ್ಲಿ ಅನಾರೋಗ್ಯಕ್ಕೆ ಒಳಗಾಗಿರುವ ಮಾಜಿ ಪ್ರಧಾನಿ ವಾಜಪೇಯಿ ಕೂಡ ಸೇರಿದ್ದಾರೆ.

ಅಂತಿಮ ಫಲಿತಾಂಶ ಇನ್ನೂ ಪ್ರಕಟಿಸಬೇಕಾಗಿದೆ ಎಂದು ಚಟರ್ಜಿ ಘೋಷಿಸಿದರು. ಅಷ್ಟರಲ್ಲೇ ಕಾಂಗ್ರೆಸ್ ಸಂಸದರು ಗುಂಪು ಸೇರಿ ಮುಗುಳುನಗುತ್ತಿದ್ದ ಪ್ರಧಾನಮಂತ್ರಿ ಮತ್ತು ಸೋನಿಯಾ ಅವರನ್ನು ಅಭಿನಂದಿಸಿದರು. 54 ಸದಸ್ಯರು ಚೀಟಿಗಳ ಮ‌ೂಲಕ ಮತದಾನ ಮಾಡಿದ ಬಳಿಕ ಅಂತಿಮವಾಗಿ ಯುಪಿಎ 275-256 ಮತಗಳ ಅಂತರದಿಂದ ಜಯಗಳಿಸಿದೆಯೆಂದು ಘೋಷಿಸಲಾಯಿತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ತಪ್ಪಿತಸ್ಥರನ್ನು ಸುಮ್ಮನೇ ಬಿಡುವುದಿಲ್ಲ: ಚಟರ್ಜಿ
ಶ್ರದ್ಧಾನಂದನಿಗೆ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆ
ಲೋಕಸಭೆಯಲ್ಲಿ ನೋಟಿನ ಕಂತೆಗಳ ಝಣಝಣ
ಭಾರತ ಆರ್ಥಿಕ ಬಲಾಢ್ಯಶಕ್ತಿಯಾಗಲು ಚಿದಂಬರಂ ಬಯಕೆ
ಗೈರುಹಾಜರಿ ಮೇಲೆ ನಿಂತಿರುವ ಯುಪಿಎ ಭವಿಷ್ಯ
ಹೈಡ್ ಕಾಯ್ದೆ ಭಾರತವನ್ನು ನಿರ್ಬಂಧಿಸುವುದಿಲ್ಲ: ಚಿದು
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...