ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ತಪ್ಪಿತಸ್ಥರನ್ನು ಸುಮ್ಮನೇ ಬಿಡುವುದಿಲ್ಲ: ಚಟರ್ಜಿ
ನವದೆಹಲಿ, ಮಂಗಳವಾರ, 22 ಜುಲೈ 2008   ( 19:16 IST )
PTI
ವಿಶ್ವಾಸಮತ ಅಧಿವೇಶನದ ಚರ್ಚೆಯಲ್ಲಿ ಬಿಜೆಪಿ ಸಂಸದರು ಝಳುಪಿಸಿದ ನೋಟುಗಳ ಕಂತೆಯಿಂದ ಲೋಕಸಭೆ ಗದ್ದಲದಲ್ಲಿ ಮುಳುಗಿ ಸ್ಪೀಕರ್ ಸದನವನ್ನು ಸಂಜೆ 6 ಗಂಟೆವರೆಗೆ ಮುಂದೂಡಿದರು. ಸಮಾವೇಶ ಪುನಃ ಸೇರಿದಾಗ ಮಾತನಾಡಿದ ಸ್ಪೀಕರ್, ಕುದುರೆ ವ್ಯಾಪಾರದ ಘಟನೆಗಳ ಆರೋಪ ತೀವ್ರ ದುರದೃಷ್ಟಕರ ಎಂದು ವರ್ಣಿಸಿದರು. ಭಾರತದ ಸಂಸದೀಯ ಇತಿಹಾಸದಲ್ಲಿ ಇದು ಅತ್ಯಂತ ದುಃಖಕರ ದಿನ ಎಂದು ಅವರು ಹೇಳಿದರು.

ತಾವು ಬಿಜೆಪಿ ಅಧ್ಯಕ್ಷ ಆಡ್ವಾಣಿ ಸೇರಿದಂತೆ ಎಲ್ಲ ಪಕ್ಷಗಳ ನಾಯಕರ ಸಭೆಯನ್ನು ಕರೆದಿದ್ದಾಗಿ ಚಟರ್ಜಿ ತಿಳಿಸಿದರು. ಪ್ರತ್ಯೇಕ ಚರ್ಚೆ ಸಲುವಾಗಿ ತಾವು ದೆಹಲಿ ಪೊಲೀಸ್ ಆಯುಕ್ತರನ್ನು ಕರೆದಿದ್ದಾಗಿ ಅವರು ಹೇಳಿದರು. ಸದನದ ರಕ್ಷಕನಾಗಿ ಎಲ್ಲ ಸಂಭವನೀಯ ಕ್ರಮಗಳನ್ನು ಕೈಗೊಂಡಿರುವುದಾಗಿ ಸ್ಪೀಕರ್ ಭರವಸೆ ನೀಡಿದರು. ತಪ್ಪಿತಸ್ಥರು ಯಾರೇ ಆದರೂ ಅವರನ್ನು ಬಿಡುವುದಿಲ್ಲ ಎಂದು ಹೇಳಿದ ಅವರು , ಈ ವಿಷಯವನ್ನು ತಮಗೆ ಬಿಡುವಂತೆ ದೃಢವಾದ ಮನವಿಯನ್ನು ಸದಸ್ಯರಲ್ಲಿ ಮಾಡಿದರು.

ಆದರೆ ಲಂಚದ ಆಮಿಷದ ಬಗ್ಗೆ ಅಭಿಪ್ರಾಯ ತಿಳಿಸಲು ಅವಕಾಶ ನೀಡಬೇಕೆಂಬ ಪ್ರತಿಪಕ್ಷದ ಬೇಡಿಕೆಗಳನ್ನು ಅವರು ನಿರಾಕರಿಸಿದರು. ಪ್ರತಿಪಕ್ಷದ ಸದಸ್ಯರು ಸುಮ್ಮನಾಗದೇ ಪ್ರಧಾನಮಂತ್ರಿಗಳ ರಾಜೀನಾಮೆಗೆ ಒಕ್ಕೊರಲ ಬೇಡಿಕೆ ಮಂಡಿಸಿದಾಗ, ಕೋಲಾಹಲದ ವಾತಾವರಣ ಉಂಟಾಗಿ, ಇನ್ನೊಂದು ಬಾರಿ ಸದನವನ್ನು ಮುಂದೂಡಲಾಯಿತು. ಪ್ರಧಾನಮಂತ್ರಿಗಳು 6.30ಕ್ಕೆ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದು, ಮತದಾನವನ್ನು ರಾತ್ರಿ 7.15ಕ್ಕೆ ನಡೆಸಲು ನಿಶ್ಚಯಿಸಲಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಶ್ರದ್ಧಾನಂದನಿಗೆ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆ
ಲೋಕಸಭೆಯಲ್ಲಿ ನೋಟಿನ ಕಂತೆಗಳ ಝಣಝಣ
ಭಾರತ ಆರ್ಥಿಕ ಬಲಾಢ್ಯಶಕ್ತಿಯಾಗಲು ಚಿದಂಬರಂ ಬಯಕೆ
ಗೈರುಹಾಜರಿ ಮೇಲೆ ನಿಂತಿರುವ ಯುಪಿಎ ಭವಿಷ್ಯ
ಹೈಡ್ ಕಾಯ್ದೆ ಭಾರತವನ್ನು ನಿರ್ಬಂಧಿಸುವುದಿಲ್ಲ: ಚಿದು
ಸಂಖ್ಯೆ ಸಮನಾದರೆ, ಸ್ಪೀಕರ್ ಮತ ಸರ್ಕಾರಕ್ಕೆ ನಿರ್ಣಾಯಕವಾಗಲಿದೆ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...