|
| ಲೋಕಸಭೆಯಲ್ಲಿ ನೋಟಿನ ಕಂತೆಗಳ ಝಣಝಣ |
| ನವದೆಹಲಿ, ಮಂಗಳವಾರ, 22 ಜುಲೈ 2008 ( 16:58 IST ) | |
ವಿಶ್ವಾಸ ಮತ ಯಾಚನೆಯ ಚರ್ಚೆಯ ನಡುವೆ ಪ್ರತಿಪಕ್ಷದ ಸಂಸತ್ ಸದಸ್ಯರು ಸಭ್ಯಾಧ್ಯಕ್ಷರ ಪೀಠದತ್ತ ನೋಟುಗಳ ಕಂತೆಗಳು ತುಂಬಿದ ಚೀಲಗಳೊಂದಿಗೆ ಧಾವಿಸಿ ಕಂತೆಗಳನ್ನು ಚೀಲದಿಂದ ಹೊರಕ್ಕೆ ತೆಗೆದು ಝಳುಪಿಸಿದಾಗ ಲೋಕಸಭೆ ನಾಟಕೀಯ ದೃಶ್ಯಕ್ಕೆ ಸಾಕ್ಷಿಯಾಯಿತು. ವಿಶ್ವಾಸ ಮತಕ್ಕೆ ಗೈರುಹಾಜರಿಯಾಗುವಂತೆ ತಮಗೆ ಸಮಾಜವಾದಿ ಪಕ್ಷ 9 ಕೋಟಿ ರೂ. ಲಂಚದ ಆಮಿಷವೊಡ್ಡಿದೆ ಎಂದು ಬಿಜೆಪಿಯ ಮೂವರು ಸಂಸತ್ ಸದಸ್ಯರು ಆರೋಪಿಸಿದರು.
ಕೆಲವೇ ನಿಮಿಷಗಳಲ್ಲಿ ಸದನದ ಎಲ್ಲ ಸದಸ್ಯರು ಬಾವಿಯತ್ತ ತೆರಳಿ ಆರೋಪ, ಪ್ರತ್ಯಾರೋಪಗಳಲ್ಲಿ ಮುಳುಗಿದರು.ಸದನದ ಬಾವಿಗೆ ಧಾವಿಸಿ ಗಲಾಟೆ ಮಾಡಿದ ಬಿಜೆಪಿ ಸಂಸದರು ಮಧ್ಯಪ್ರದೇಶದ ಅಶೋಕ್ ಸಿಂಗ್ ಅರ್ಗಾಲ್ ಮತ್ತು ಫಾಗನ್ ಸಿಂಗ್ ಕುಲಾಸ್ತೆ ಮತ್ತು ರಾಜಸ್ತಾನದ ಮಹಾವೀರ್ ಭಾಗೋಡ. ಸಮಾಜವಾದಿ ಪಕ್ಷದ ನಾಯಕ ತಮಗೆ ಆರಂಭದಲ್ಲಿ 1 ಕೋಟಿ ರೂ.ನೀಡಿ ಉಳಿದ ಹಣವನ್ನು ಮತದಾನದ ನಂತರ ನೀಡುವುದಾಗಿ ಭರವಸೆ ನೀಡಿದ್ದಾರೆಂದು ಅವರು ಆರೋಪಿಸಿದರು.
1000 ರೂ. ಮುಖಬೆಲೆಯ 100 ನೋಟುಗಳ ಕಂತೆಗಳನ್ನು ತಮಗೆ ನೀಡಲಾಯಿತೆಂದು ಅವರು ಆರೋಪಿಸಿದ್ದಾರೆ.ಸ್ಪೀಕರ್ ಈ ಕುರಿತು ಪರಿಶೀಲನೆ ನಡೆಸುತ್ತಿದ್ದು, ತನಿಖೆಗೆ ಆದೇಶಿಸಬಹುದು.ಆದಾಗ್ಯೂ, ಈ ಆರೋಪವನ್ನು ರುಜುವಾತು ಮಾಡಲು ಇದುವರೆಗೆ ಸಾಧ್ಯವಾಗಿಲ್ಲ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|