ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಭಾರತ ಆರ್ಥಿಕ ಬಲಾಢ್ಯಶಕ್ತಿಯಾಗಲು ಚಿದಂಬರಂ ಬಯಕೆ
ನವದೆಹಲಿ, ಮಂಗಳವಾರ, 22 ಜುಲೈ 2008   ( 15:26 IST )
2007-08ನೇ ಸಾಲಿನ ರಾಷ್ಟ್ರದ ಬೆಳವಣಿಗೆ ದರ ಶೇ.9.1ರಷ್ಟಿದ್ದು, 11ನೇ ಪಂಚವಾರ್ಷಿಕ ಯೋಜನೆಗೆ ಉತ್ತಮ ಆರಂಭ ನೀಡಿದೆ ಎಂದು ವಿತ್ತಸಚಿವ ಪಿ.ಚಿದಂಬರಂ ಮಂಗಳವಾರ ಪ್ರತಿಪಾದಿಸಿದರು. ಯುಪಿಎ ಸರ್ಕಾರದ ವಿಶ್ವಾಸ ಮತ ಯಾಚನೆಯ ಚರ್ಚೆಯಲ್ಲಿ ಪಾಲ್ಗೊಂಡ ಚಿದಂಬರಂ ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರ ಶೇ.8-9 ಬೆಳವಣಿಗೆ ದರದಲ್ಲಿ ಸ್ಥಿರವಾಗಿದೆ ಎಂದು ಹೇಳಿದರು.

ಇಷ್ಟೊಂದು ಸಾಧನೆ ಮಾಡಿರುವ ನಾಲ್ಕು ವರ್ಷಗಳ ಅವಧಿಯನ್ನು ತೋರಿಸಿ ಎಂದು ಪ್ರತಿಪಕ್ಷಕ್ಕೆ ಚಿದಂಬರಂ ಸವಾಲು ಹಾಕಿದರು. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಬೆಳವಣಿಗೆ ದರ ಶೇ.5-6ರಷ್ಟು ಇದ್ದಿದ್ದನ್ನು ಉಲ್ಲೇಖಿಸಿ ಅವರು ಹೇಳಿದರು.2007-08 ನಮ್ಮ ಬೆಳವಣಿಗೆ ದರ ಮತ್ತು ಗೋಧಿ, ಅಕ್ಕಿ ಮತ್ತಿತರ ಆಹಾರಧಾನ್ಯಗಳ ಉತ್ಪಾದನೆಯಲ್ಲಿ ದಾಖಲೆ ನಿರ್ಮಿಸಿದ್ದು, ಹೊಸ ತಿರುವು ನೀಡಿದೆ ಎಂದು ಅವರು ಹೇಳಿದರು.

ರೈತರ ಆತ್ಮಹತ್ಯೆ ಆತಂಕಕ್ಕೀಡು ಮಾಡುತ್ತದೆ. ರೈತರ ಆತ್ಮಹತ್ಯೆ ನಡೆದಾಗಲೆಲ್ಲ ನಾವು ನಮ್ಮ ತಲೆಯನ್ನು ನಾಚಿಕೆಯಿಂದ ತಗ್ಗಿಸಿದ್ದೇವೆ ಎಂದು ಚಿದಂಬರಂ ಅದೇ ಧ್ವನಿಯಲ್ಲಿ ಹೇಳಿದರು. ಎಡಪಕ್ಷಗಳ ವಿರುದ್ಧ ಕಿಡಿಕಾರಿದ ಅವರು, ಚೀನಾದ ಮಹತ್ವಾಕಾಂಕ್ಷೆಯ ಪರಮಾಣು ಶಕ್ತಿ ಯೋಜನೆಗಳನ್ನು ಉದಾಹರಿಸಿ, ಚೀನಾವನ್ನು ಸರಿಗಟ್ಟಲು ಭಾರತದಲ್ಲಿರುವ ಕೆಲವು ಜನರು ಬಯಸುತ್ತಿಲ್ಲ ಎಂದರು.

ಭಾರತ ತನ್ನ ಅಣು ಶಕ್ತಿ ಉತ್ಪಾದನೆ ಹೆಚ್ಚಿಸಲು ಬಲವಾಗಿ ಪ್ರತಿಪಾದಿಸಿದ ಅವರು, ಚೀನಾ ತನ್ನ ಪರಮಾಣು ಶಕ್ತಿ ಉತ್ಪಾದನೆಯನ್ನು 2020ರೊಳಗೆ 6 ಪಟ್ಟಿನಷ್ಟು,50,000 ಮೆಗಾವಾಟ್‌ಗೆ ಹೆಚ್ಚಿಸುವ ಯೋಜನೆ ಬಗ್ಗೆ ಗಮನಸೆಳೆದರು. ಚೀನಾ ತನ್ನ ಇಂಧನ ಅಗತ್ಯಗಳಿಗೆ ಶೇ.2ರಷ್ಟು ಪರಮಾಣು ಶಕ್ತಿಯ ಮೇಲೆ ಅವಲಂಬಿತವಾಗಿದ್ದು, 2030ರೊಳಗೆ ಪರಮಾಣು ಶಕ್ತಿ ಉತ್ಪಾದನೆ ಸಾಮರ್ಥ್ಯವನ್ನು 160,000 ಮೆಗಾವಾಟ್‌ಗೆ ಏರುಮುಖಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಯಿದೆ ಎಂದು ನುಡಿದರು.

ಚೀನಾದ ಬಗ್ಗೆ ನಮಗೆ ಅಸೂಯೆ ಇಲ್ಲ. ಚೀನಾವನ್ನು ಅನುಕರಿಸಲು ನಾನು ಬಯಸುತ್ತೇನೆ. ಭಾರತ ಆರ್ಥಿಕ ಬಲಾಢ್ಯಶಕ್ತಿಯಾಗಿ ಮಹೋನ್ನತ ಸಾಧನೆಯನ್ನು ನಾವು ಬಯಸುತ್ತೇವ ಎಂದು ಚಿದಂಬರಂ ನುಡಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಗೈರುಹಾಜರಿ ಮೇಲೆ ನಿಂತಿರುವ ಯುಪಿಎ ಭವಿಷ್ಯ
ಹೈಡ್ ಕಾಯ್ದೆ ಭಾರತವನ್ನು ನಿರ್ಬಂಧಿಸುವುದಿಲ್ಲ: ಚಿದು
ಸಂಖ್ಯೆ ಸಮನಾದರೆ, ಸ್ಪೀಕರ್ ಮತ ಸರ್ಕಾರಕ್ಕೆ ನಿರ್ಣಾಯಕವಾಗಲಿದೆ
ಪುನರಾರಂಭಗೊಂಡ ಅಮರನಾಥ ಯಾತ್ರೆ
ಭಾರತ,ಚೀನಾ,ಅಮೇರಿಕ ವಿಶ್ವದ ಆರ್ಥಿಕ ತ್ರಿಶಕ್ತಿಗಳು
ವಿಶ್ವಾಸಮತದಿಂದ ದೂರ ಉಳಿಯಲಿರುವ ಸಂಸದ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...