ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಗೈರುಹಾಜರಿ ಮೇಲೆ ನಿಂತಿರುವ ಯುಪಿಎ ಭವಿಷ್ಯ
ನವದೆಹಲಿ, ಮಂಗಳವಾರ, 22 ಜುಲೈ 2008   ( 14:34 IST )
ವಿಶ್ವಾಸಮತದಲ್ಲಿ ಯುಪಿಎ ಸರ್ಕಾರದ ಭವಿಷ್ಯವನ್ನು ನಿರ್ಧರಿಸುವ ಸಂಖ್ಯಾಬಲದ ಸಮರ ಕೊನೆಯ ಹಂತವನ್ನು ಮುಟ್ಟಿದೆ. ಸರ್ಕಾರದ ಆಶಾಭಾವನೆಯು ವೈರಿಪಡೆಗಳಿಂದ ಕೊನೆ ಗಳಿಗೆಯ ಪಕ್ಷಾಂತರ ಮತ್ತು ಗೈರುಹಾಜರಿ ಮೇಲೆ ಅವಲಂಬಿಸಿದೆ.

ವಿಶ್ವಾಸ ಮತಕ್ಕೆ ಕೆಲವೇ ಗಂಟೆಗಳ ಮುಂಚೆ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಹಿತಕರ ಸುದ್ದಿಯೇನೆಂದರೆ, ಆಡಳಿತಾರೂಢ ಸಮ್ಮಿಶ್ರಕೂಟಕ್ಕೆ ಮತ ನೀಡುವುದಾಗಿ ನ್ಯಾಷನಲ್ ಕಾನ್ಫರೆನ್ಸ್ ಪ್ರಕಟಣೆ ಮತ್ತು ಏಕೈಕ ಮಿಜೊ ನ್ಯಾಷನಲ್ ಫ್ರಂಟ್ ಸದಸ್ಯ ವಂಜಾಲ್‌ಜ್ವಾಮಾ ಮತದಾನಕ್ಕೆ ಗೈರುಹಾಜರಾಗುವ ನಿರ್ಧಾರ.

ಯಾವ ದಾರಿಯಲ್ಲಿ ಸಾಗುತ್ತದೆಂಬ ನಿಗೂಢತೆಗೆ ತೆರೆಎಳೆದಿರುವ ನ್ಯಾಷನಲ್ ಕಾನ್ಫರೆನ್ಸ್, ಯುಪಿಎ ಸರ್ಕಾರದ ಪರವಾಗಿ ಮತಹಾಕುವುದಾಗಿ ಪಕ್ಷದ ಮುಖಂಡ ಓಮರ್ ಅಬ್ದುಲ್ಲಾ ಮಂಗಳವಾರ ಬೆಳಿಗ್ಗೆ ಪ್ರಕಟಿಸಿದರು.ಎನ್‌ಡಿಎನ 8ರಿಂದ 10 ಸಂಸದರು ಮತದಾನಕ್ಕೆ ಗೈರುಹಾಜರಿ ಅಥವಾ ಪಕ್ಷದ ವಿಪ್ ಉಲ್ಲಂಘಿಸುವುದರಿಂದ ಆಡಳಿತಾರೂಢ ಸಮ್ಮಿಶ್ರ ಸರ್ಕಾರ ಅಗ್ನಿಪರೀಕ್ಷೆಯಲ್ಲಿ ವಿಜಯ ಸಾಧಿಸುತ್ತದೆಂಬ ವರದಿಗಳ ನಡುವೆ ಸರ್ಕಾರದ ಪರ ಮತ್ತು ವಿರೋಧ ಪಕ್ಷಗಳು ಸಂಖ್ಯಾಬಲ ಸಾಧಿಸುವ ಆಟದಲ್ಲಿ ನಿರತವಾಗಿವೆ.

ಮತದಾನಕ್ಕೆ ಗೈರುಹಾಜರಿಯಿಂದ ಬಹುಮತಕ್ಕೆ ಬೇಕಾದ 271 ಸಂಖ್ಯಾಬಲ ಇಳಿಮುಖವಾಗಿ ಫೋಟೊ ಫಿನಿಷ್ ಅಂತ್ಯ ಕಾಣಬಹುದೆಂದು ಊಹಿಸಲಾಗಿದೆ. 6 ಸಂಸದರು ಗೈರುಹಾಜರಾಗುವುದಾಗಿ ಕೋರಿದ್ದು, ಅದಕ್ಕೆ ಅನುಮತಿಸಲಾಗಿದೆ ಎಂದು ಸ್ಪೀಕರ್ ಸೋಮನಾಥ ಚಟರ್ಜಿ ತಿಳಿಸಿದರು. ಆದರೆ ಅವರು ಯಾವ ಪಕ್ಷಕ್ಕೆ ಸೇರಿದವರೆನ್ನುವುದನ್ನು ಬಹಿರಂಗಪಡಿಸಿಲ್ಲ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹೈಡ್ ಕಾಯ್ದೆ ಭಾರತವನ್ನು ನಿರ್ಬಂಧಿಸುವುದಿಲ್ಲ: ಚಿದು
ಸಂಖ್ಯೆ ಸಮನಾದರೆ, ಸ್ಪೀಕರ್ ಮತ ಸರ್ಕಾರಕ್ಕೆ ನಿರ್ಣಾಯಕವಾಗಲಿದೆ
ಪುನರಾರಂಭಗೊಂಡ ಅಮರನಾಥ ಯಾತ್ರೆ
ಭಾರತ,ಚೀನಾ,ಅಮೇರಿಕ ವಿಶ್ವದ ಆರ್ಥಿಕ ತ್ರಿಶಕ್ತಿಗಳು
ವಿಶ್ವಾಸಮತದಿಂದ ದೂರ ಉಳಿಯಲಿರುವ ಸಂಸದ
ಕೊನೆ ಹಂತಕ್ಕೆ ಸಂಸತ್ ಕದನ, ಗೈರುಹಾಜರನ್ನು ನೆಚ್ಚಿದ ಯುಪಿಎ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...