|
| ಭಾರತ,ಚೀನಾ,ಅಮೇರಿಕ ವಿಶ್ವದ ಆರ್ಥಿಕ ತ್ರಿಶಕ್ತಿಗಳು |
| ನವದೆಹಲಿ, ಮಂಗಳವಾರ, 22 ಜುಲೈ 2008 ( 12:20 IST ) | |
ಮುಂಬರುವ ದಿನಗಳಲ್ಲಿ ಹೊಸ ಆರ್ಥಿಕ ತ್ರಿಶಕ್ತಿಯ ಉಗಮವಾಗಲಿದೆ. ಅದು ಈಗಿರುವ ಅಮೆರಿಕ-ಕೆನಡಾ, ಯುರೋಪಿಯನ್ ಯುನಿಯನ್ ಮತ್ತು ಜಪಾನ್ ದೇಶಗಳನ್ನು ಸ್ಥಾನಪಲ್ಲಟಗೊಳಿಸಲಿವೆ. "ಚಿಂಡಿಯಾ ರೈಸಿಂಗ್" ಪುಸ್ತಕದ ಲೇಖಕರಾದ ಜಗದೀಶ್ ಶೇಥ್, ಈ ಬಗ್ಗೆ ಮಾತನಾಡುತ್ತಾ, ಈಗ ಇರುವ ಬಲಿಷ್ಟ ಆರ್ಥಿಕ ಶಕ್ತಿಗಳಾದ ಅಮೆರಿಕ-ಕೆನಡಾ, ಯುರೋಪಿಯನ್ ಯುನಿಯನ್ ಮತ್ತು ಜಪಾನ್ ದೇಶಗಳನ್ನು ಸ್ಥಾನಪಲ್ಲಟಗೊಳಿಸಿ, ಚೀನಾ, ಭಾರತ ಮತ್ತು ಅಮೆರಿಕ ಆ ಸ್ಥಾನದಲ್ಲಿ ಕೂರಲಿವೆ ಎಂದು ತಿಳಿಸಿದರು.
ಅಬ್ಸರ್ವರ್ ರೀಸರ್ಚ್ ಫೌಂಡೇಷನ್ ಏರ್ಪಡಿಸಿದ್ದ, ಹೊಸ ಆರ್ಥಿಕ ಸತ್ಯತೆಗಳು ಎನ್ನುವ ವಿಷಯದ ಬಗ್ಗೆ ಮಾತನಾಡುತ್ತಿದ್ದ ಶೇಥ್ ಅವರು, ಮುಂಬರುವ ದಿನಗಳಲ್ಲಿ ಅಭಿವೃದ್ಧಿಯನ್ನು ಸಾಧಿಸುತ್ತಿರುವಂತಹ ರಾಷ್ಟ್ರಗಳು ಮಹತ್ವದ ಸ್ಥಾನವನ್ನು ಹೊಂದಲಿವೆ ಎಂದು ತಿಳಿಸಿದರು.
ಅಟ್ಲಾಂಟಾದ ಗೋಯ್ಜುಯೇಟಾ ಬಿಸಿನೆಸ್ ಸ್ಕೂಲ್‌ನಲ್ಲಿ ಪ್ರೊಫೆಸರ್ ಆಗಿರುವ ಜಗದೀಶ್ ಶೇಥ್, ಭಾರತ,ಚೀನಾ,ರಷ್ಯಾ ಮತ್ತು ಬ್ರೆಸಿಲ್ ರೀತಿಯ ದೇಶಗಳು ಮಹತ್ವದ ಸ್ಥಾನಗಳನ್ನು ವಹಿಸಲಿವೆ. ಈ ದೇಶಗಳು ಜಾಗತಿಕ ವಿಸ್ತಾರವನ್ನು ಮತ್ತು ಹೆಚ್ಚಿನ ಸ್ವಾಧೀನ ಪ್ರಕ್ರಿಯೆಗಳನ್ನು ನಡೆಸಲಿವೆ ಎಂದು ತಿಳಿಸಿದರು.
ಪ್ರಸ್ತುತ ಜಪಾನ್ ವಿಶ್ವದ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವಾಗಿದೆ.ಮುಂಬರುವ ದಿನಗಳಲ್ಲಿ ಬಾರತದ ಬಿಪಿಒ ಕೇಂದ್ರಗಳು ನೂತನ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳಾಗಲಿವೆ ಎಂದು ಸಹ ಶೇಥ್ ತಿಳಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|