ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಸಿಂಗ್‌ರಿಂದ ಶುದ್ಧ ಸುಳ್ಳುಗಳ ಪ್ರಲಾಪ: ಎಡರಂಗ ದೂರು
ನವದೆಹಲಿ, ಸೋಮವಾರ, 21 ಜುಲೈ 2008   ( 17:13 IST )
ಸಂಸತ್ತಿನ ವಿಶ್ವಾಸ ಮತ ಕುರಿತ ಚರ್ಚೆಯಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಶುದ್ಧ ಸುಳ್ಳುಗಳನ್ನು ಹೇಳಿದ್ದಾರೆ ಎಂದು ಎಡಪಕ್ಷಗಳು ಆರೋಪಿಸಿವೆ. ಅವರ ಮೊಟಕಾದ ಮತ್ತು ಮಂಕಾದ ಭಾಷಣವು ಅವರ ವಿಶ್ವಾಸ ಮಟ್ಟ ಕುಂದಿರುವುದರ ದ್ಯೋತಕವಾಗಿದೆ ಎಂದು ಅವು ಹೇಳಿವೆ.

ಸಿಂಗ್ ಅವರ ಹೇಳಿಕೆಯು ಏಕಪಕ್ಷೀಯ ಆಡಳಿತದಲ್ಲಿ ಅವರ ನಂಬಿಕೆಯ ಪುನರುಚ್ಚಾರವಾಗಿದೆ. ಅಣು ಒಪ್ಪಂದದಲ್ಲಿ ಒಮ್ಮತ ಇಲ್ಲದಿರುವಾಗ ಅದನ್ನು ಮುಂದುವರಿಸುವ ಮ‌ೂಲಕ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ತಿಳಿವಳಿಕೆಯನ್ನು ಉಲ್ಲಂಘಿಸಿದ್ದಾರೆ ಎಂದು ಹಿರಿಯ ಸಿಪಿಎಂ ನಾಯಕ ನೀಲೋತ್ಪಲ್ ಬಸು ತಿಳಿಸಿದರು.ಅಲ್ಪಸಂಖ್ಯಾತ ಸರ್ಕಾರ ಒಪ್ಪಂದವನ್ನು ಏಕಪಕ್ಷೀಯವಾಗಿ ಮುಂದುವರಿಸುವ ಮ‌ೂಲಕ ಸಿಎಂಪಿಯನ್ನು ಉಲ್ಲಂಘಿಸಿದೆ ಎಂದು ಆರ್‌ಎಸ್‌ಪಿ ಪ್ರಧಾನಕಾರ್ಯದರ್ಶಿ ಟಿ.ಜೆ.ಚಂದ್ರಚೂಡನ್ ತಿಳಿಸಿದರು.

ಹಿರಿಯ ಮಾರ್ಕ್ಸ್‌ವಾದಿ ನಾಯಕರು ತೋರಿಸಿದ ಮುನ್ನೋಟವನ್ನು ಸಿಂಗ್ ಸ್ಪಷ್ಟವಾಗಿ ಉಲ್ಲಂಘಿಸಿದ್ದರಿಂದ ಎಡಪಕ್ಷಗಳು ಬೆಂಬಲ ವಾಪಸ್ ಪಡೆಯುವುದು ಅನಿವಾರ್ಯವಾಯಿತು ಎಂದು ಅವರು ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸರ್ಕಾರಕ್ಕೆ 291 ಸದಸ್ಯರಿಗಿಂತ ಹೆಚ್ಚು ಬೆಂಬಲ: ಆರ್‌ಜೆಡಿ
ಪ್ರತೀ ಕ್ರಮವೂ ರಾಷ್ಟ್ರಹಿತಾಸಕ್ತಿ ಪರ: ಪ್ರಧಾನಿ
ವಿಶ್ವಾಸ ಮತದಲ್ಲಿ ಸಿಂಗ್ ಜಯಗಳಿಸುವ ವಿಶ್ವಾಸ
ಸಿಂಗ್ ವಿಶ್ವಾಸ ಮತ ಎದುರಿಸಲಿರುವ 6ನೇ ಪ್ರಧಾನಿ
ವಿಶ್ವಾಸಮತ: ಇಂದಿನಿಂದ ಸಂಸತ್‌ನಲ್ಲಿ ಭಾರಿ ಚರ್ಚೆ
ಯುಪಿಎ ವಿರುದ್ಧ ದೇವೇಗೌಡ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...