|
| ಚಟರ್ಜಿಗೆ ವಿಪ್ ಅನ್ವಯಿಸುವುದಿಲ್ಲ: ಸಿಪಿಐ-ಎಂ |
| ಕೋಲ್ಕತಾ, ಶನಿವಾರ, 19 ಜುಲೈ 2008 ( 08:32 IST ) | |
ಜುಲೈ 22ರಂದು ನಡೆಯಲಿರುವ ವಿಶ್ವಾಸಮತದಲ್ಲಿ ಯುಪಿಎ ಸರಕಾರದ ವಿರುದ್ಧ ಮತ ಹಾಕುವಂತೆ ತನ್ನ ಎಂಪಿಗಳಿಗೆ ಬಿಡುಗಡೆ ಮಾಡಲಾದ ವಿಪ್ ಸ್ಪೀಕರ್ ಸೋಮನಾಥ್ ಚಟರ್ಜಿಗೆ ಅನ್ವಯವಾಗುವುದಿಲ್ಲ ಎಂದು ಸಿಪಿಐ-ಎಂ ತಿಳಿಸಿದೆ.
ಸ್ಪೀಕರ್ ಯಾವುದೇ ವಿಪ್‌ಗಿಂತ ಎತ್ತರದ ಸ್ಥಾನದಲ್ಲಿ ಇದ್ದಾರೆ ಎಂದು ಸಿಪಿಐ-ಎಂ ಪೊಲಿಟ್‌ಬ್ಯೂರೊ ಸದಸ್ಯ ಬಿಮಾನ್ ಬೋಸ್ ಪಕ್ಷ ಕಾರ್ಯದರ್ಶಿಗಳ ಸಭೆಯ ಬಳಿಕ ವರದಿಗಾರರಿಗೆ ತಿಳಿಸಿದ್ದಾರೆ.
ಸಭೆಯಲ್ಲಿ ನಡೆದ ಚರ್ಚೆಗಳ ಕುರಿತು ಪಕ್ಷದಿಂದ ಯಾವುದೇ ಅಧಿಕೃತ ಹೇಳಿಕೆ ಬರದಿದ್ದರೂ, ಬೋಸ್ ಮತ್ತು ಮುಖ್ಯಮಂತ್ರಿ ಬುದ್ದದೇವ್ ಬಟ್ಟಾಚಾರ್ಯ ಸೇರಿದಂತೆ ಪಕ್ಷದ ನಾಯಕರು ವಿಶ್ವಾಸಮತ ಹಿನ್ನೆಲೆಯಲ್ಲಿನ ಪರಿಸ್ಥಿತಿ ಮತ್ತು ಸೋಮನಾಥ್ ಚಟರ್ಜಿಯವರ ಮೇಲಿನ ವಿವಾದದ ಬಗ್ಗೆ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.
ವಿಶ್ವಾಸಮತದಲ್ಲಿ ಬಿಜೆಪಿ ಜತೆಗೂಡಿ ಸರಕಾರದ ವಿರುದ್ಧ ಮತ ಹಾಕುವ ಬಗ್ಗೆ ಪಕ್ಷದ ನಾಯಕ ಮತ್ತು ಪ.ಬಂಗಾಳ ಸಾರಿಗೆ ಸಚಿವ ಸುಭಾಶ್ ಚಕ್ರವರ್ತಿಯವರು ವ್ಯಕ್ತಪಡಿಸಿದ್ದ ಅಸಮಾಧಾನದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಬೋಸ್ ತಿಳಿಸಿದರು.
ಅನಾರೋಗ್ಯದಿಂದ ಬಳಲುತ್ತಿರುವ 95 ವರ್ಷದ ಸಿಪಿಐ-ಎಂ ಹಿರಿಯ ಜ್ಯೋತಿ ಬಸು ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|