ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಯುಪಿಎ ಗಾಳಕ್ಕೆ ಸಿಕ್ಕಿಬಿದ್ದ ಜೆಎಂಎಂ, ಆರ್‌ಎಲ್‌ಡಿ
ನವದೆಹಲಿ, ಶುಕ್ರವಾರ, 18 ಜುಲೈ 2008   ( 18:17 IST )
ಕೊನೆಗೂ ಯುಪಿಎ ಗಾಳಕ್ಕೆ ಜೆಎಂಎಂ ಮತ್ತು ಆರ್‌ಎಲ್‌ಡಿಗಳು ಸಿಲುಕಿಬಿದ್ದಿವೆ. ವಿಶ್ವಾಸ ಮತ ಗೊತ್ತುವಳಿಯಲ್ಲಿ ಸಾಕಷ್ಟು ಬೆಂಬಲ ಕ್ರೋಢೀಕರಿಸುವ ಯುಪಿಎನ ಇನ್ನಿಲ್ಲದ ಪ್ರಯತ್ನ ಫಲಪ್ರದವಾಗುವಂತೆ ಕಾಣುತ್ತಿದ್ದು, ಜೆಎಂಎಂ ಮತ್ತು ಆರ್‌ಎಲ್‌ಡಿಯನ್ನು ಅಂತಿಮವಾಗಿ ಭಾರೀ ಬೆಲೆ ತೆತ್ತು ಯುಪಿಎ ಖರೀದಿಸಿದೆ ಎನ್ನುವುದನ್ನು ಶುಕ್ರವಾರ ಉನ್ನತಮ‌ೂಲಗಳು ಬಹಿರಂಗಪಡಿಸಿದೆ.

ಕಾಂಗ್ರೆಸ್ ವ್ಯವಸ್ಥಾಪಕರು ಕುದುರಿಸಿದ ಒಪ್ಪಂದದ ಪ್ರಕಾರ ಸರ್ಕಾರ ವಿಶ್ವಾಸಮತದಲ್ಲಿ ಜಯಗಳಿಸಿದರೆ ಶಿಬು ಸೊರೇನ್ ಮತ್ತು ಆರ್‌ಎಲ್‌ಡಿ ಮುಖಂಡ ಅಜಿತ್ ಸಿಂಗ್ ಅವರಿಗೆ ಕ್ಯಾಬಿನೆಟ್ ಹುದ್ದೆ ಕಟ್ಟಿಟ್ಟ ಬುತ್ತಿ. ಆದರೆ ಶಿಬು ಸೊರೇನ್ ಕ್ಯಾಬಿನೆಟ್ ಬರ್ತ್ ಪಡೆಯುವುದರಲ್ಲಿ ಮಾತ್ರ ಒಪ್ಪಂದ ಅಂತ್ಯವಾಗಿಲ್ಲ. ತಮ್ಮ ಪುತ್ರರತ್ನನಿಗೆ ಜಾರ್ಖಂಡ್ ಉಪ ಮುಖ್ಯಮಂತ್ರಿ ಪಟ್ಟ ನೀಡಬೇಕೆಂಬ ಷರತ್ತು ಒಡ್ಡಿದ್ದಾರೆ.

ಇನ್ನು ಆರ್‌ಎಲ್‌ಡಿ ಮುಖಂಡ ಅಜಿತ್ ಸಿಂಗ್ ಅವರಿಗೆ ಕೂಡ ಸಂಪುಟ ದರ್ಜೆಯ ಸ್ಥಾನಮಾನದ ಆಮಿಷ ಒಡ್ಡಲಾಗಿದೆ. ಆದರೆ ತಮ್ಮ ಪಕ್ಷದ ಅನುರಾಧಾ ಸಿಂಗ್ ಅವರಿಗೆ ರಾಜ್ಯ ಸಚಿವ ಪದವಿ ನೀಡಬೇಕೆನ್ನುವುದು ಅಜಿತ್ ಸಿಂಗ್ ಬೇಡಿಕೆಯಾಗಿದೆ. ಇದಲ್ಲದೇ ಅಜಿತ್ ಸಿಂಗ್ ಅವರ ಪುತ್ರ ಮಥುರಾ ಲೋಕಸಭೆ ಕ್ಷೇತ್ರದಿಂದ ನಿಲ್ಲುವುದಕ್ಕೆ ಬೆಂಬಲಿಸುವುದಾಗಿ ಕಾಂಗ್ರೆಸ್ ಆಶ್ವಾಸನೆ ನೀಡಿದೆ.

ಪಶ್ಚಿಮ ಉತ್ತರಪ್ರದೇಶದಿಂದ ಹರಿತ್ ಪ್ರದೇಶ್ ರೂಪಿಸಬೇಕೆಂಬ ಅಜಿತ್ ಬೇಡಿಕೆ ಪರಿಶೀಲನೆಗೆ ಸಮಿತಿ ರಚಿಸಲು ಸಹ ಕಾಂಗ್ರೆಸ್ ಒಪ್ಪಿದೆಯೆಂದು ಹೇಳಲಾಗಿದೆ. ಆದರೆ ಮಥುರಾದ ಕಾಂಗ್ರೆಸ್ ಎಂಪಿ ಮನ್ವೀಂದರ್ ಸಿಂಗ್ ಮುನಿಸಿಕೊಂಡಿದ್ದು, ಬಂಡಾಯವೆದ್ದಿದ್ದಾರೆಂದು ತಿಳಿದುಬಂದಿದೆ. ಅವರೀಗ ಬಿಎಸ್‌ಪಿಯತ್ತ ವಾಲುವಂತೆ ಕಂಡುಬಂದಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಎದೆಗೆ ಹೊಕ್ಕ ಕಬ್ಬಿಣದ ಸಲಾಕೆ: ಜೀವವುಳಿಸಿದ ವೈದ್ಯರು
39 ಎಸ್‌ಪಿ ಸಂಸದರಲ್ಲಿ ಹಾಜರಾಗಿದ್ದು ಕೇವಲ 16
ಬಿಹಾರ ಸರ್ಕಾರದಿಂದ ಮಕ್ಕಳ ಪತ್ರಿಕೆ
ಅಹಮದಾಬಾದ್ ಬಂದ್ ಬೆಂಬಲಿಸಿದ ಕಾಂಗ್ರೆಸ್
ವಿಶ್ವಾಸಮತದಲ್ಲಿ ಪಪ್ಪುಯಾದವ್
ಯುಪಿಎ ಬೆಂಬಲಕ್ಕೆ ಲಾಭದ ಲೆಕ್ಕ ಹಾಕಿರುವ ಸಣ್ಣಪಕ್ಷಗಳು
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಅಧಿಕಾರದ ನೆಲೆ ಸ್ಥಾಪಿಸಿರುವ ಮುಖ್ಯಮಂತ್ರಿ ಯುಡಿಯ‌ೂರಪ್ಪ ....
ಚಿತ್ರೋದ್ಯಮ ಸಮಸ್ಯೆಗಳಿಗೆ ಸ್ಪಂದನ
ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...