|
| 39 ಎಸ್‌ಪಿ ಸಂಸದರಲ್ಲಿ ಹಾಜರಾಗಿದ್ದು ಕೇವಲ 16 |
| ಲಕ್ನೊ, ಶುಕ್ರವಾರ, 18 ಜುಲೈ 2008 ( 15:09 IST ) | |
ಜು.22ರ ವಿಶ್ವಾಸಮತ ಯಾಚನೆಗೆ ಮುನ್ನ ಶುಕ್ರವಾರ ನಡೆದ ಸಮಾಜವಾದಿ ಪಕ್ಷದ ಸಂಸತ್ ಸದಸ್ಯರ ಸಭೆಯಲ್ಲಿ ಹಾಜರಾಗಿದ್ದು 39 ಎಸ್‌ಪಿ ಎಂಪಿಗಳಲ್ಲಿ ಕೇವಲ 16 ಮಂದಿ ಮಾತ್ರ. ಎಸ್‌ಪಿ ಯುಪಿಎನ ನಿರ್ಣಾಯಕ ಮಿತ್ರಪಕ್ಷವಾಗಿರುವುದರಿಂದ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಮತ್ತು ಪ್ರಧಾನಕಾರ್ಯದರ್ಶಿ ಅಮರ್ ಸಿಂಗ್ ಉದ್ದೇಶಿಸಿ ಮಾತನಾಡುವ ಸಭೆ ಮಹತ್ವ ಪಡೆದಿದೆ.
ಸಂಸತ್ ಸದಸ್ಯರಾದ ಅತೀಕ್ ಅಹ್ಮದ್ ಮತ್ತು ಅಫ್ಜಲ್ ಅನ್ಸಾರಿ ಜೈಲಿನಲ್ಲಿದ್ದರೆ, ರಾಜ್ ಬಬ್ಬರ್ ಮತ್ತು ಬೇನಿ ಪ್ರಸಾದ್ ವರ್ಮಾರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಮುನ್ನಾವರ್ ಹಸನ್ ಬಂಡಾಯ ಸದಸ್ಯನೆಂಬುದು ತಿಳಿದಿರುವ ಸಂಗತಿಯಾಗಿದ್ದು, ವಿಶ್ವಾಸ ಮತ ನಿರ್ಣಯದ ವಿರುದ್ಧ ಮತ ಚಲಾಯಿಸುವುದಾಗಿ ಹೇಳಿದ್ದಾರೆ.
ಹಮೀರಿಪುರ ಸಂಸದ ರಾಜನಾರಾಯಣ್ ಬುಧೋಲಿಯ ಮತ್ತು ಮೊಹಾಲ್‌ಗಂಜ್ ಎಂಪಿ ಜೈಪ್ರಕಾಶ್ ಕೂಡ ಬಂಡಾಯ ಸದಸ್ಯರೆನಿಸಿದ್ದಾರೆ. ಏತನ್ಮಧ್ಯೆ, ಪಕ್ಷವು ಮೂರು ಸಾಲಿನ ವಿಪ್ ನೀಡಿದ್ದು, ಜು.21. 22ರಂದು ಲೋಕಸಭೆಯಲ್ಲಿ ಹಾಜರಾಗಿ ವಿಶ್ವಾಸಮತ ಗೊತ್ತುವಳಿ ಪರವಾಗಿ ಮತಹಾಕಬೇಕೆಂದು ಸದಸ್ಯರಿಗೆ ತಿಳಿಸಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|