|
| ಬಿಹಾರ ಸರ್ಕಾರದಿಂದ ಮಕ್ಕಳ ಪತ್ರಿಕೆ |
| ಪಾಟ್ನಾ, ಶುಕ್ರವಾರ, 18 ಜುಲೈ 2008 ( 14:53 IST ) | |
ಗಣಿತವನ್ನು ಸರಳವಾಗಿ ಹೇಳಿಕೊಡುವ, ವಿಜ್ಞಾನದ ಕುತೂಹಲ ತಣಿಸುವ, ಸಾಹಿತ್ಯದ ರುಚಿ ಹತ್ತಿಸುವ ಮಕ್ಕಳ ಪತ್ರಿಕೆಯೊಂದನ್ನು ಬಿಹಾರ ಸರ್ಕಾರ, ತನ್ನ ರಾಜ್ಯ ಸರ್ಕಾರದ ಶಾಲೆಗಳಲ್ಲಿ ತರಲು ಉದ್ದೇಶಿಸಿದೆ.
ಹಿಂದಿ ಭಾಷೆಯಲ್ಲಿ ಬರಲಿರುವ ಬಚಪನ್ (ಬಾಲ್ಯ) ಹೆಸರಿನ ಪಾಕ್ಷಿಕ ಪತ್ರಿಕೆಯನ್ನು ಬಿಹಾರ ಶಿಕ್ಷಣ ಯೋಜನಾ ಸಮಿತಿ ಮತ್ತು ಸರ್ಕಾರೇತರ ಸಂಸ್ಥೆಯಾದ ಪ್ರಥಮ್, ಒಂದುಗೂಡಿ ಹೊರತರಲಿದ್ದು, ಇದರ ಉದ್ದೇಶ 1ರಿಂದ 5ನೇ ತರಗತಿ ಮಕ್ಕಳ ಅಗತ್ಯಗಳನ್ನು ಪೂರೈಸುವುದಾಗಿದೆ.
ಇದನ್ನು ಪಠ್ಯೇತರ ಅಧ್ಯಯನಾ ಸಲಕರಣೆಯಾಗಿ ಬಳಸಲಾಗುವುದು ಎಂದು ಸರ್ವಶಿಕ್ಷಣ ಅಭಿಯಾನದ ರಾಜ್ಯ ಸಹಕಾರದ ಮುಖ್ಯಸ್ಥ ಎ.ಕೆ.ಪಾಂಡೆ ಸುದ್ಧಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನು ರಾಜ್ಯ ಸರ್ಕಾರವು ನಡೆಸುತ್ತಿರುವ,ಏಳು ಜಿಲ್ಲೆಗಳ ಸುಮಾರು 10 ಸಾವಿರ ಶಾಲೆಗಳಲ್ಲಿ ವಿತರಣೆಯನ್ನು ಮಾಡಲಾಗುವುದು. ಸುಮಾರು ಐದು ಲಕ್ಷ ಪತ್ರಿಕೆಯ ಪ್ರತಿಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಪ್ರಥಮ್‌ನ ಸಂಜಯ್ ಕುಮಾರ್ ತಿಳಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|