ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಅಹಮದಾಬಾದ್ ಬಂದ್ ಬೆಂಬಲಿಸಿದ ಕಾಂಗ್ರೆಸ್
ಅಹಮದಾಬಾದ್, ಶುಕ್ರವಾರ, 18 ಜುಲೈ 2008   ( 13:48 IST )
ಅಹಮದಾಬಾದ್‌ನ ಅನೇಕ ಭಾಗಗಳಲ್ಲಿ ಇನ್ನೂ ಬಿಗುವಿನ ವಾತಾವರಣ ಮುಂದುವರೆದಿದೆ.ಆಸರಾಮ್ ಬಾಪೂ ಆಶ್ರಮದಲ್ಲಿ ನಿಗೂಢವಾಗಿ ಸಂಭವಿಸಿರುವ ಇಬ್ಬರು ಬಾಲಕರ ಸಾವು ಬಂದ್‌ಗೆ ಕಾರಣವಾಗಿದೆ.

ಜವಳಿ ನಗರವೆಂದೇ ಹೆಸರಾಗಿರುವ ಅಹಮದಾಬಾದ್‌ನ ನಾಗರೀಕರು ಈ ಕೃತ್ಯವನ್ನು ಖಂಡಿಸಿ ನೀಡಿರುವ ಬಂದ್ ಕರೆಗೆ ಕಾಂಗ್ರೆಸ್ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.

ಸಬರಮತಿಯ ಬಾಪೂ ಆಶ್ರಮ ಗುರುಕುಲದಲ್ಲಿ ಸಂಭವಿಸಿರುವ ಇಬ್ಬರು ವಿದ್ಯಾರ್ಥಿಗಳ ಸಾವು ಅಹಮದಾಬಾದ್‌ನಲ್ಲಿ ಪ್ರತಿಭಟನೆಗೆ ಕಾರಣವಾಗಿದ್ದು, ಪೊಲೀಸ್ ಮತ್ತು ಪ್ರತಿಭಟನೆಕಾರರ ನಡುವೆ ಘರ್ಷಣೆ ನಡೆದಿದೆ.

ಆಶ್ರಮದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಮಾರು 11 ವರ್ಷದ ಆಸುಪಾಸಿನ ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ಕಾಣೆಯಾದರು. ಆ ನಂತರ ಆ ವಿದ್ಯಾರ್ಥಿಗಳ ಮೃತದೇಹವು ಸಬರಮತಿ ನದಿ ದಡದಲ್ಲಿ ಕಾಣಿಸಿಕೊಂಡಿತ್ತು.

ವಿದ್ಯಾರ್ಥಿಗಳ ಪೋಷಕರು ಮತ್ತು ಇತರ ಅನೇಕ ಮಂದಿ, ಆಶ್ರಮದಲ್ಲಿ ಈ ಮಕ್ಕಳನ್ನು ಧಾರ್ಮಿಕ ಕಾರಣಗಳಿಗಾಗಿ ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಈ ಬಗ್ಗೆ ತಿಳಿಸಿ, ಗುಜರಾತ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಶ್ವಾಸಮತದಲ್ಲಿ ಪಪ್ಪುಯಾದವ್
ಯುಪಿಎ ಬೆಂಬಲಕ್ಕೆ ಲಾಭದ ಲೆಕ್ಕ ಹಾಕಿರುವ ಸಣ್ಣಪಕ್ಷಗಳು
ಯುಪಿಎ ವಿಶ್ವಾಸಮತ ಗೆಲ್ಲಲಿದೆ-ಡಿಎಂಕೆ
ವಿದರ್ಭದಲ್ಲಿ ರಾಹುಲ್ ಸಂಚಾರ
ಕಾಂಗ್ರೆಸ್ ನಂಬುವುದು ತಪ್ಪು: ಕಾರಟ್
ಓಲೈಕಾ ತಂತ್ರದಲ್ಲಿ ತೊಡಗಿಲ್ಲ: ಕಾಂಗ್ರೆಸ್
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಅಧಿಕಾರದ ನೆಲೆ ಸ್ಥಾಪಿಸಿರುವ ಮುಖ್ಯಮಂತ್ರಿ ಯುಡಿಯ‌ೂರಪ್ಪ ....
ಚಿತ್ರೋದ್ಯಮ ಸಮಸ್ಯೆಗಳಿಗೆ ಸ್ಪಂದನ
ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...