|
| ಕಾಂಗ್ರೆಸ್ ನಂಬುವುದು ತಪ್ಪು: ಕಾರಟ್ |
| ನವದೆಹಲಿ, ಶುಕ್ರವಾರ, 18 ಜುಲೈ 2008 ( 09:43 IST ) | |
ಅಣು ಒಪ್ಪಂದವಾಗಿ ಕಾಂಗ್ರೆಸ್‌ನ್ನು ನಂಬುವುದು ತಪ್ಪು ಆಯ್ಕೆಯಾಗುತ್ತದೆ ಎಂದು ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ತಿಳಿಸಿದ್ದಾರೆ.
ಸುದ್ಧಿ ಪತ್ರಿಕೆಯೊಂದರಲ್ಲಿ ಮಾತನಾಡಿದ ಕಾರಟ್, ಯುಪಿಎ-ಎಡಪಕ್ಷ ಸಹಕಾರ ಸಮಿತಿಯಲ್ಲಿ ಅಖೈರುಗೊಳಿಸದೆ ಐಎಇಎಗೆ ಹೋಗುವುದಿಲ್ಲ ಎಂಬ ಸರಕಾರ ಮತ್ತು ಎಡಪಕ್ಷಗಳ ನಡುವೆ ಬರಲಾದ ತಿಳುವಳಿಕೆಯನ್ನು ಉಲ್ಲೇಖಿಸಿದ್ದಾರೆ.
ಪ್ರಧಾನ ಮಂತ್ರಿ ಸರಿದಂತೆ ಕಾಂಗ್ರೆಸ್ ನಾಯಕತ್ವ ನೀಡಿದ ಮಾತನ್ನು ನಂಬಿದ್ದು ತಪ್ಪು ಗ್ರಹಿಕೆಯಾಗಿತ್ತು. ನವಂಬರ್ 10, 2007ರಲ್ಲಿ ಪಿಎಂ ನಿವಾಸದಲ್ಲಿ ಸಭೆ ನಡೆಸಲಾಗಿತ್ತು ಮತ್ತು ಅಲ್ಲಿ ಒಂದು ತಿಳುವಳಿಕೆಗೆ ಬರಲಾಗಿತ್ತು ಎಂದು ಹೇಳಿದ್ದಾರೆ.
ಲೋಕಸಭೆ ಸ್ಪೀಕರ್ ಸೋಮನಾಥ್ ಚಟರ್ಜಿ ಒಳಗೊಂಡ ವಿವಾದದ ಬಗ್ಗೆ ಮೊದಲ ಭಾರಿಗೆ ಮಾತನಾಡಿದ ಅವರು, ಪಕ್ಷ ಮತ್ತು ರಾಜಕೀಯವನ್ನು ದೂರವಿಟ್ಟು ಸ್ಪೀಕರ್ ಮೇಲಿನ ಈ ಎಲ್ಲಾ ಮಾತುಗಳು ಒಂದು ಸಂಚಾಗಿದೆ ಎಂದು ತಿಳಿಸಿದ್ದಾರೆ.
ಸ್ಪೀಕರ್ ಸ್ಥಾನವನ್ನು ಅಲಂಕರಿಸುವುದರಿಂದ ಒಬ್ಬ ವ್ಯಕ್ತಿ ರಾಜಕೀಯ ಭಾಗವಾಗಿರುವುದನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಸ್ಪೀಕರ್ ಹುದ್ದೆಯ ನಂತರ ಅವರು ರಾಜಕೀಯ ಚಟುವಟಿಕೆಗಳನ್ನು ಪುನರಾರಂಭಿಸಬಹುದು ಎಂದು ವಿವರಿಸಿದರು. ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ನಿರ್ಧಾರ ಕೈಗೊಳ್ಳುವುದ ಸ್ಪೀಕರ್‌ಗೆ ಬಿಟ್ಟ ವಿಚಾರ ಎಂದು ಕಾರಟ್ ತಿಳಿಸಿದ್ದಾರೆ.
ವಿಶ್ವಾಸಮತದಲ್ಲಿ ಸರಕಾರದ ಉಳಿವಿಕೆಯನ್ನು ಖಚಿತ ಪಡಿಸಲು ಕಳಂಕಿತ ಎಂಪಿಗಳನ್ನು ಜೈಲಿನಿಂದ ಹೊರತರುವಾಗಿನ ನೀತಿತತ್ವವನ್ನು ಇದೇ ವೇಳೆ ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಪ್ರಶ್ನಿಸಿದರು.
ತನಗೆ 1993ರ ಸನ್ನಿವೇಶ ನೆನಪಿಗೆ ಬರುವುದು. ಆವತ್ತು ತಮ್ಮ ಪಕ್ಷ ನರಸಿಂಹ ರಾವ್ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿತ್ತು. ಈಗ ಇದ್ದಂತೆ ಕಾಂಗ್ರೆಸ್ ಪಕ್ಷ ಆವಾಗ ಅಲ್ಪಮತಕ್ಕೆ ಕುಸಿದಿತ್ತು. ಆದರೆ ಅವರು ವಿಶ್ವಾಸ ಮತದಲ್ಲಿ ಬಹುಮತ ಗಳಿಸುವಲ್ಲಿ ಸಫಲರಾದರು. ಇದು ಪ್ರಖ್ಯಾತ ಜೆಎಂಎಂ ಲಂಚ ಪ್ರಕರಣಕ್ಕೆ ಕಾರಣವಾಯಿತು. ಮೊದಲ ಬಾರಿಗೆ ಒಬ್ಬ ಪಿಎಂ ಮತ್ತು ಮಾಜಿ ಗೃಹ ಸಚಿವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಯಿತು. ಇತಿಹಾಸ ಮರುಕಳಿಸುವುದನ್ನು ತಾವು ಇಚ್ಚಿಸುವುದಿಲ್ಲ ಎಂದು ಕಾರಟ್ ವಿವರಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|