|
| ಓಲೈಕಾ ತಂತ್ರದಲ್ಲಿ ತೊಡಗಿಲ್ಲ: ಕಾಂಗ್ರೆಸ್ |
| ನವದೆಹಲಿ, ಶುಕ್ರವಾರ, 18 ಜುಲೈ 2008 ( 09:01 IST ) | |
ಲೋಕಸಭೆಯಲ್ಲಿ ಜುಲೈ 22ರಂದು ನಡೆಯಲಿರುವ ವಿಶ್ವಾಸಮತದ ಹಿನ್ನೆಲೆಯಲ್ಲಿ ಸಣ್ಣ ಪಕ್ಷಗಳನ್ನು ಪುಸಲಾಯಿಸಲು ಪಕ್ಷ ಓಲೈಕಾ ತಂತ್ರದಲ್ಲಿ ತೊಡಗಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ.
ಲಕ್ನೋ ವಿಮಾನ ನಿಲ್ದಾಣವನ್ನು ಚೌಧರಿ ಚರನ್ ಸಿಂಗ್ ವಿಮಾನ ನಿಲ್ದಾಣವಾಗಿ ಮರು ನಾಮಕರಣ ಮಾಡುವಾಗಿನ ಕೇಂದ್ರ ಸಂಪುಟದ ನಿರ್ಧಾರದ ಬಗ್ಗೆ ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ, ಅವರು ಮಾಜಿ ಪ್ರಧಾನ ಮಂತ್ರಿಯಾಗಿದ್ದು, ಅವರ ಹೆಸರನ್ನು ಇದಕ್ಕೆ ಇಟ್ಟಿರುವುದು ಒಂದು ಒಳ್ಳೆಯ ವಿಷಯವಾಗಿದೆ ಎಂದು ಉತ್ತರಿಸಿದರು.
ಈ ಬಗ್ಗೆ ಹೆಚ್ಚು ತಲೆ ಕೆಡಿಸುವ ಅಗತ್ಯವಿಲ್ಲ ಎಂದು ಹೇಳಿದ ತಿವಾರಿ, ಈ ಮರುನಾಮಕರಣ ನಿರ್ಧಾರಗಾಗಿನ ಸಮಯದ ಬಗ್ಗೆ ಕೇಳಿದ ಪ್ರಶ್ನೆಗೆ ಇದು ಕೆಲ ದಿನಗಳಿಂದ ಬಾಕಿ ಉಳಿದುಕೊಂಡಿತ್ತು ಎಂದು ಉತ್ತರಿಸಿದರು.
ಯುಪಿಎ ಸರಕಾರಕ್ಕೆ ಬೆಂಬಲ ನೀಡುವುದಕ್ಕೆ ಪ್ರತಿಯಾಗಿ ಕಲ್ಲಿದ್ದಲು ಸಚಿವ ಸ್ಥಾನದ ಬೇಡಿಕೆ ಇಟ್ಟಿರುವ ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರು ಎಂಪಿಯಾಗಿದ್ದು, ಸಚಿವರಾಗಲು ಕಾನೂನು ಪ್ರಕಾರ ಅರ್ಹರಾಗುತ್ತಾರೆ ಎಂದು ಉತ್ತರಿಸಿದರು. ಈ ಬಗೆಗಿನ ನಿರ್ಧಾರ ಕೈಗೊಳ್ಳುವುದು ಪ್ರಧಾನ ಮಂತ್ರಿಗೆ ಬಿಟ್ಟ ವಿಚಾರ ಎಂದು ತಿಳಿಸಿದರು.
ವಿಶ್ವಾಸಮತ ಯಾಚನೆಗಾಗಿನ ಬೆಂಬಲವನ್ನು ಕಲೆ ಹಾಕಲು ಪಕ್ಷ ರಾಜಿ ಮಾಡಿಕೊಂಡಿದೆ ಎಂಬ ಮತ್ತೊಂದು ಪ್ರಶ್ನೆಗೆ, ತಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ 'ಜೈಲುಹಕ್ಕಿ' ಮತ್ತು ಕಳಂಕಿತ ಎಂಪಿಗಳ ಬೆಂಬಲವನ್ನು ಕೋರುತ್ತಿದೆ ಎಂಬ ಎಡಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ತಿವಾರಿ, ಬಂಗಾಳ ಮತ್ತು ಕೇರಳದಲ್ಲಿ ಯಾವುದೇ ಸಿಪಿಐ-ಎಂ ನಾಯಕರ ವಿರುದ್ಧ ಅಪರಾಧ ಆರೋಪ ಇಲ್ಲದಿರುವುದು ಬೆರಳೆಣಿಕೆಯಷ್ಟು ಎಂದು ತಿರುಗೇಟು ನೀಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|