|
| ರಾಷ್ಟ್ರಪತಿಗೆ ಎಸ್‌ಪಿ ಬೆಂಬಲ ಪತ್ರ |
| ನವದೆಹಲಿ, 9 ಜುಲೈ 2008 ( 15:50 IST ) | |
ಎಡಪಕ್ಷಗಳು ಯುಪಿಎ ಸರಕಾರಕ್ಕೆ ತಮ್ಮ ಬೆಂಬಲವನ್ನು ಅಧಿಕೃತವಾಗಿ ಹಿಂಪಡೆದುಕೊಂಡ ಕೆಲವೇ ನಿಮಿಷಗಳಲ್ಲಿ ಸಮಾಜವಾದಿ ಪಕ್ಷ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ಮನ್‌ಮೋಹನ್ ಸಿಂಗ್‌ಸರ್ಕಾರದ ಪರವಾಗಿ ಬೆಂಬಲ ಪತ್ರವನ್ನು ನೀಡಿದೆ.
ಕಳೆದ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ವೇಳೆ ಯುಪಿಎ ಮತ್ತು ಸಮಾಜವಾದಿ ಪಕ್ಷಗಳ ನಡುವೆ ನಿರ್ದಿಷ್ಟ ರಾಜಕೀಯ ಭಿನ್ನತೆ ಇದ್ದ ಕಾರಣ ಸಾರ್ವಜನಿಕರ ಮನದಲ್ಲಿ ಕೆಲ ಗೊಂದಲಗಳಿತ್ತು. ಈ ಗೊಂದಲವನ್ನು ನಿವಾರಿಸಲು, ತಾವು ರಾಷ್ಟ್ರಾಧ್ಯಕ್ಷೆಯನ್ನು ಭೇಟಿಯಾಗಿ, ಯುಪಿಎ ಸರಕಾರದ ಪರವಾಗಿ ಸಮಾಜವಾದಿ ಪಕ್ಷದ ಬೆಂಬಲವನ್ನು ಪುನರುಚ್ಚರಿಸಿದೆವು ಎಂದು ಎಸ್‌ಪಿ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ವರದಿಗಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜವಾದಿ ಎಂಪಿ ರಾಂ ಗೋಪಾಲ್ ವರ್ಮಾ ಅಮರ್ ಸಿಂಗ್‌ರನ್ನು ಜತೆಗೂಡಿದ್ದರು. ತಾವು ತಮ್ಮ ಈ ಮುಂಚಿನ ನಿಲುವು ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಪರವಾಗಿ ತಮ್ಮ ಬೆಂಬಲವನ್ನು ಪುನರುಚ್ಚರಿಸಿದ್ದೇವೆ ಎಂದು ಅಮರ್ ಸಿಂಗ್ ತಿಳಿಸಿದರು.
ರಾಷ್ಟ್ರಪತಿಗೆ ನೀಡಿದ ಬೆಂಬಲಿಗರ ಹೆಸರಿನ ಪಟ್ಟಿಯಲ್ಲಿ ಸಮಾಜವಾದಿ ಪಕ್ಷದ ಎಲ್ಲಾ 39 ಎಂಪಿಗಳ ಹೆಸರನ್ನು ಒಳಗೊಂಡಿದೆಯೋ ಎಂದು ಕೇಳಿದ ಪ್ರಶ್ನೆಗೆ ಅವರು, ಎಸ್‌ಪಿ ಚಿಹ್ನೆಯಡಿ ಕಣಕ್ಕಿಳಿದು ಗೆದ್ದ ಎಲ್ಲಾ ಎಂಪಿಗಳ ಹೆಸರು ಅದರಲ್ಲಿದೆ ಮತ್ತು ಅವರು ಪಕ್ಷದ ವಿಪ್‌ಗೆ ಬದ್ಧರಾಗಿದ್ದಾರೆ ಎಂದು ಹೇಳಿದ ಅಮರ್ ಸಿಂಗ್, ಬಂಡಾಯ ಸಮಾಜವಾದಿ ಪಕ್ಷದ ಎಂಪಿಗಳಾದ ಬೆನಿ ಪ್ರಸಾದ್ ವರ್ಮಾ ಮತ್ತು ಅತಿಕ್ ಅಹ್ಮದ್ ಕೂಡ ತಮ್ಮ ಬೆಂಬಲದ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು. |
| |
|
|
|
|
|
|
|