ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಕಾಂಜಿಪೀಂಜಿ ಪಕ್ಷಗಳ ಬೆಂಬಲ ನೆಚ್ಚಿಕೊಂಡಿರುವ ಯುಪಿಎ
ನವದೆಹಲಿ, 9 ಜುಲೈ 2008   ( 15:22 IST )
ಎಡಪಕ್ಷಗಳ ಬೆಂಬಲ ಹಿಂತೆಗೆತದಿಂದ ಆಡಳಿತ ಸಮ್ಮಿಶ್ರ ಕೂಟದ ಬಲವು 230ಕ್ಕೆ ಕುಸಿದಿದ್ದು, ಅದು ಸಮಾಜವಾದಿ ಪಕ್ಷದ ಬೆಂಬಲವನ್ನು ನೆಚ್ಚಿಕೊಂಡಿದೆ. ಲೋಕಸಭೆಯಲ್ಲಿ 39 ಸದಸ್ಯಬಲವಿರುವ ಸಮಾಜವಾದಿ ಪಕ್ಷ, ಸರ್ಕಾರಕ್ಕೆ ಬೆಂಬಲವನ್ನು ಘೋಷಿಸಿದೆ. ಲೋಕಸಭೆಯಲ್ಲಿ ಪ್ರಸಕ್ತ 543 ಸದಸ್ಯರಿದ್ದು, ಯುಪಿಎಗೆ 273 ಸದಸ್ಯರ ಬೆಂಬಲ ಎಣಿಸಲು ಸಾಧ್ಯವೆಂದು ಯುಪಿಎ ವ್ಯವಸ್ಥಾಪಕರ ಅಂಬೋಣ.

ಎಡಪಕ್ಷಗಳು ಯುಪಿಎಗೆ ವಿಚ್ಛೇದನ ನೀಡಲು ಶೀಘ್ರದಲ್ಲೇ ಭಾರತ ಐಎಇಎಯನ್ನು ಸಂಪರ್ಕಿಸುತ್ತದೆ ಎಂದು ಮನಮೋಹನ್ ಸಿಂಗ್ ಹೇಳಿಕೆ ಕಾರಣವಾಗಿದೆ. ಆದರೆ ಎಡಪಕ್ಷಗಳ ವಿಚ್ಛೇದನದಿಂದ ಸರ್ಕಾರದ ಸುಭದ್ರತೆಗೆ ಧಕ್ಕೆಯಿಲ್ಲ ಎಂದು ಸಿಂಗ್ ಹೇಳಿದ್ದಾರೆ. ಕಾಂಗ್ರೆಸ್ ಜತೆ ಕೈಗೂಡಿಸುವ ಬಗ್ಗೆ ಸಮಾಜವಾದಿ ಪಕ್ಷದ ಕೆಲ ಸದಸ್ಯರು ಉಪೇಕ್ಷೆ ತಾಳಿದ್ದಾರೆ ಎಂಬ ವದಂತಿಯಿಂದ ಪಕ್ಷಕ್ಕೆ ಎಲ್ಲ 39 ಸದಸ್ಯರ ಬೆಂಬಲವಿಲ್ಲ ಎನ್ನುವ ಊಹಾಪೋಹ ಕೂಡ ಸ್ಫೋಟಿಸಿದೆ.

ಆದರೆ ಎಸ್‌ಪಿ ನಾಯಕ ಅಮರ್ ಸಿಂಗ್ ಎಲ್ಲ ಸದಸ್ಯರು ಸರ್ಕಾರಕ್ಕೆ ಮತ ನೀಡುತ್ತಾರೆಂದು ವಾದ ಮಂಡಿಸಿದ್ದಾರೆ. ವಿಶ್ವಾಸ ಮತದಲ್ಲಿ ಗೆಲ್ಲಲು ಯುಪಿಎಗೆ ಅಗತ್ಯಸಂಖ್ಯಾಬಲವಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಆರ್‌ಜೆಡಿ ಧುರೀಣ ಲಾಲು ಪ್ರಸಾದ್ ಪ್ರತಿಪಾದಿಸಿದ್ದಾರೆ.ಆಡಳಿತ ಪಕ್ಷವೀಗ ಮ‌ೂವರು ಪಕ್ಷೇತರರ ಬೆಂಬಲವನ್ನು ನೆಚ್ಚಿಕೊಂಡಿದೆ.

ಜಮ್ಮು ಕಾಶ್ಮೀರದ ತುಪ್‌ಸ್ತಾನ್ ಚೆವಾಂಗ್, ಉ.ಪ್ರ.ದ ಹರೀಶ್ ನಾಗಪಾಲ್ ಮತ್ತು ಮಣಿಪುರದ ಚರೇನಮೈ ಮಣಿ ಮ‌ೂವರು ಪಕ್ಷೇತರ ಸದಸ್ಯರು.ಕೆಲವು ಸಮಯದ ಹಿಂದೆ ಅಜಿತ್ ಸಿಂಗ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಭೇಟಿ ಮಾಡಿದ್ದು, ಮ‌ೂವರು ಸದಸ್ಯಬಲವಿರುವ ಆರ್‌ಎಲ್‌ಡಿ ಕೂಡ ಅಜಿತ್ ಸಿಂಗ್ ಜತೆ ಬೆಂಬಲಿಸುತ್ತದೆಂದು ತಿಳಿದುಬಂದಿದೆ. ಜಿಡಿಎಸ್‌ನ ಮ‌ೂವರು ಸದಸ್ಯರು ಸರ್ಕಾರವನ್ನು ಬೆಂಬಲಿಸುವುದೆಂದು ಕೂಡ ಕಾಂಗ್ರೆಸ್ ಆಶಿಸಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ರಾಷ್ಟ್ರಪತಿಗೆ ಎಡಪಕ್ಷಗಳಿಂದ ಬೆಂಬಲ ವಾಪಸ್ ಪತ್ರ
ಯುಪಿಎ ಸರಕಾರ ಭದ್ರವಾಗಿದೆ-ಪ್ರಧಾನಿ
ಅಣು ಒಪ್ಪಂದಕ್ಕೆ 7 ಬಿಎಸ್‌ಪಿ ಸಂಸದರ ಬೆಂಬಲ-ಅಮರ್‌
ಅಣು ಒಪ್ಪಂದ: ಎನ್‌ಡಿಎ ಮೈತ್ರಿಕೂಟದ ಸಭೆ
ಜಮ್ಮು : ಶಾಂತಿ ಕಾಪಾಡಲು ರಾಜ್ಯಪಾಲರ ಕರೆ
ರಾಜಕೀಯ ಬಿಕ್ಕಟ್ಟಿನಿಂದ ಯುಪಿಎ ಸರಕಾರಕ್ಕೆ ಧಕ್ಕೆಯಿಲ್ಲ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗಣಿಗಾರಿಗೆ ರಾಷ್ಟ್ರೀಕರಣವಾಗಲಿ: ಯಡಿಯ‌ೂರಪ್ಪ
ಗಣಿಗಾರಿಕೆ ರಾಷ್ಟ್ರೀಕರಣ ನಿರ್ಧಾರವನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಯಡಿಯ‌ೂರಪ್ಪ ...
ಪೈರಸಿ ತಡೆಗೆ ಕಠಿಣ ಕ್ರಮಕ್ಕೆ ಮನವಿ
ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ದ್ರೋಹ: ಸಿಂಧ್ಯಾ
ಮನರಂಜನೆ
ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು.
ಮುಂದೆ ಓದಿ|ಮತ್ತಷ್ಟು...