|
| ರಾಷ್ಟ್ರಪತಿಗೆ ಎಡಪಕ್ಷಗಳಿಂದ ಬೆಂಬಲ ವಾಪಸ್ ಪತ್ರ |
| ನವದೆಹಲಿ, ಬುಧವಾರ, 9 ಜುಲೈ 2008 ( 14:02 IST ) | |
ಯುಪಿಎ ಸರ್ಕಾರಕ್ಕೆ ಮಂಗಳವಾರ ಬೆಂಬಲ ಹಿಂತೆಗೆತದ ನಿರ್ಧಾರವನ್ನು ಪ್ರಕಟಿಸಿದ್ದ ಎಡಪಕ್ಷಗಳ ಧುರೀಣರು ಬುಧವಾರ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ಪ್ರತಿಭಾಪಾಟೀಲ್ ಅವರಿಗೆ ಬೆಂಬಲ ಹಿಂತೆಗೆದುಕೊಳ್ಳುವ ಪತ್ರವನ್ನು ಹಸ್ತಾಂತರಿಸಿದರು. ನಾವು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ, ಯುಪಿಎ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುವ ಬಗ್ಗೆ ನಾಲ್ಕು ಪಕ್ಷಗಳ ಪರವಾಗಿ ಪತ್ರವನ್ನು ನೀಡಿದ್ದೇವೆ ಎಂದು ರಾಷ್ಟ್ರಪತಿ ಭವನದ ಹೊರಗೆ ಸಿಪಿಎಂ ಪ್ರಧಾನಕಾರ್ಯದರ್ಶಿ ಪ್ರಕಾಶ್ ಕಾರಟ್ ವರದಿಗಾರರಿಗೆ ತಿಳಿಸಿದರು.
ಬೆಂಬಲ ವಾಪಸಾತಿ ಪತ್ರದ ಜತೆಗೆ ನಾಲ್ಕು ಎಡಪಕ್ಷಗಳ ಕೂಟವು ಪ್ರತ್ಯೇಕ ಪತ್ರವೊಂದನ್ನು ಕೂಡ ರಾಷ್ಟ್ರಪತಿಯವರಿಗೆ ನೀಡಿದ್ದು, ಲೋಕಸಭೆ ವಿಶೇಷ ಅಧಿವೇಶನ ಕರೆದು ವಿಶ್ವಾಸ ಮತ ಕೋರುವಂತೆ ಪ್ರಧಾನಮಂತ್ರಿಯವರಿಗೆ ಸೂಚನೆ ನೀಡಬೇಕೆಂದು ಆ ಪತ್ರದಲ್ಲಿ ತಿಳಿಸಿರುವುದಾಗಿ ಹೇಳಿದರು. ಇದಾದ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾರಟ್, ಪರಮಾಣು ಒಪ್ಪಂದದ ಬಗ್ಗೆ ಯುಪಿಎ ಸರ್ಕಾರ ಸಂಸತ್ತನ್ನು ಉಪೇಕ್ಷಿಸಿದೆ ಎಂದು ನುಡಿದರು.
ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕತ್ವ ಸದಾ ಅಮೆರಿಕದ ಕಡೆಗೆ ದೃಷ್ಟಿಹರಿಸಿದೆ ಎಂದು ಅವರು ಕಿಡಿಕಾರಿದರು. ಸರ್ಕಾರ ಪರಮಾಣು ಒಪ್ಪಂದದ ಬಗ್ಗೆ ಪಾರದರ್ಶಕ ನೀತಿಯನ್ನು ಹೊಂದಿಲ್ಲ ಎಂದು ಟೀಕಿಸಿದ ಅವರು ಕರಡು ಸುರಕ್ಷತೆ ಒಪ್ಪಂದವನ್ನು ಬಹಿರಂಗ ಮಾಡಬೇಕೆಂದು ತಿಳಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು. |
| |
|
|
|
|
|
|
|