|
| ಅಣು ಒಪ್ಪಂದಕ್ಕೆ 7 ಬಿಎಸ್‌ಪಿ ಸಂಸದರ ಬೆಂಬಲ-ಅಮರ್ |
| ನವದೆಹಲಿ, ಬುಧವಾರ, 9 ಜುಲೈ 2008 ( 12:39 IST ) | |
ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಮುಸ್ಲಿಂ ವಿರೋಧಿಯಾಗಿದೆ ಎಂದು ಸಮಾಜವಾದಿ ಪಕ್ಷದ ಮುಸ್ಲಿಂ ಸಂಸದರನ್ನು ಸೆಳೆಯುವ ಬಿಎಸ್‌ಪಿ ಪ್ರಯತ್ನವನ್ನು ವ್ಯರ್ಥ ಎಂದು ಬಣ್ಣಿಸಿದ ಅಮರ್‌ಸಿಂಗ್ ಬಿಎಸ್‌ಪಿ ಏಳು ಸಂಸದ್ ಸದಸ್ಯರು ನಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಹುಜನ ಸಮಾಜ ಪಕ್ಷಕ್ಕೆ ಸೇರಿದ ಏಳು ಮಂದಿ ಸಂಸತ್ ಸದಸ್ಯರು ತಮ್ಮ ಜೊತೆ ಸಂಪರ್ಕದಲ್ಲಿದ್ದು ಅವರ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್‌ಸಿಂಗ್ ಹೇಳಿದ್ದಾರೆ.
ಅಣು ಒಪ್ಪಂದ ಬಗ್ಗೆ ಮಹತ್ವದ ಇಸ್ಲಾಮಿಕ್ ಕೇಂದ್ರಗಳಾದ ಬರೇಲಿ,ಶಹರಣ್‌ಪುರ್ ಹಾಗೂ ಬಹಾರೈಚ್‌ಗಳು ಬೆಂಬಲಿಸಿದ್ದು, ಬಿಎಸ್‌ಪಿ ನಾಯಕಿ ಮಾಯಾವತಿಯವರ ಹಣದ ವ್ಯಾಮೋಹದಿಂದಾಗಿ ಬೇಸತ್ತು ಏಳು ಮಂದಿ ಬಿಎಸ್‌ಪಿ ಸದಸ್ಯರು ನಮ್ಮನ್ನು ಸಂಪರ್ಕಿಸಿದ್ದಾರೆ.
ಬಹುಜನ ಸಮಾಜ ಪಕ್ಷ ಅಣು ಒಪ್ಪಂದವನ್ನು ಕೋಮವಾದಿಕರಣಗೊಳಿಸುತ್ತಿದೆ ಎಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್‌ಸಿಂಗ್ ಆರೋಪಿಸಿದ್ದಾರೆ.
ಸಮಾಜವಾದಿ ಪಕ್ಷದ ಸಂಸದರು ಬಹುಜನ ಸಮಾಜ ಪಕ್ಷವನ್ನು ಸಂಪರ್ಕಿಸಿದ್ದಾರೆ ಎನ್ನುವುದನ್ನು ಅಮರ್‌ಸಿಂಗ್ ತಳ್ಳಿಹಾಕಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು. |
| |
|
|
|
|
|
|
|