ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಒಪ್ಪಂದದ ಹಿಂದೆ ಒಪ್ಪಂದ: ಆಡ್ವಾಣಿ
ನವದೆಹಲಿ, 9 ಜುಲೈ 2008   ( 08:55 IST )
ಹೊಸ ಮೈತ್ರಿಗಳ ನಾಯಕರನ್ನು ರಕ್ಷಿಸುವುದರೊಂದಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅವುಗಳತ್ತ ನೋಡುತ್ತಿದ್ದು, ಅಣು ಒಪ್ಪಂದದ ಹಿಂದೆ ಒಪ್ಪಂದವಾಗಿದೆ ಎಂಬ ಶಂಕೆ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಎಲ್ ಕೆ ಆಡ್ವಾಣಿ, ಈ ವಿಷಯವಾಗಿ ಸ್ಪಷ್ಟನೆ ನೀಡುವಂತೆ ಪ್ರಧಾನಿಗೆ ಕರೆ ನೀಡಿದರು.

ಯಾವುದೋ ನಾಚಿಕೆಗೇಡಿನ ಅಂಶ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ನಡುವಿನ ಗತಕಾಲದ ಕಹಿ ಸಂಬಂಧವನ್ನು ಒಮ್ಮಿಂದೊಮ್ಮೆಗೆ ಸಿಹಿಯಾಗಿ ಪರಿವರ್ತಿಸಿರುವ ಬಗ್ಗೆ ಊಹಾಪೋಹಗಳು ವಿಸ್ತೃತವಾಗಿ ಹಬ್ಬಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಷಯವಾಗಿ ಯಾವುದೇ ಕೊಡು ಕೊಳ್ಳುವಿಕೆ ನಡೆದಿಲ್ಲ ಎಂಬುದರ ಬಗ್ಗೆ ಪ್ರಧಾನ ಮಂತ್ರಿಯವರು ರಾಷ್ಟ್ರಕ್ಕೆ ಭರವಸೆ ನೀಡಬೇಕು. ಆರ್ಥಿಕ ಅಪರಾಧ ಮತ್ತು ಹಣಕಾಸು ಅವ್ಯನಸ್ಥೆಯ ಪ್ರಕರಣಗಳಲ್ಲಿ ನಿರ್ಧಿಷ್ಟ ವ್ಯಕ್ತಿಯನ್ನು ರಕ್ಷಿಸಲು ಸರಕಾರಿ ಸಂಸ್ಥೆಯನ್ನು ದುರ್ಬಳಕೆ ಮಾಡಲಾಗುತ್ತಿಲ್ಲ ಎಂಬುದನ್ನು ಪ್ರಧಾನಿ ಖಚಿತ ಪಡಿಸಬೇಕು ಎಂದು ಆಗ್ರಹಿಸಿದರು.

ಅಣು ಒಪ್ಪಂದ ಹಿಂದೆ ಯಾವುದೇ ಒಪ್ಪಂದ ಇಲ್ಲ ಎಂದು ಸ್ಪಷ್ಟ ಪಡಿಸಿರುವ ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್, ಪಕ್ಷ ಯಾವುದೇ ಸಚಿವ ಸ್ಥಾನದತ್ತ ಒಲವು ಹೊಂದಿಲ್ಲ ಎಂದು ತಿಳಿಸಿದ್ದಾರೆ. ತನ್ನ ನಾಯಕರನ್ನು ಭ್ರಷ್ಟಾಚಾರ ಪ್ರಕರಣದಿಂದ ರಕ್ಷಿಸಲುಸಮಾಜವಾದಿ ಪಕ್ಷ ಕಾಂಗ್ರೆಸ್ ಜತೆ ಹೊಂದಾಣಿಗೆ ಮಾಡಿಕೊಂಡಿದೆ ಎಂಬ ಶಂಕೆ ರಾಜಕೀಯ ವರ್ತುಲದಲ್ಲಿ ವ್ಯಾಪಕವಾಗಿ ಹಬ್ಬಿದೆ.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಶ್ವಾಸ ಮತದಲ್ಲಿ ಗೆದ್ದ ಬಳಿಕ ಐಎಇಎ ಸಂಪರ್ಕ: ಮುಖರ್ಜಿ
ಬುಧವಾರ ರಾಷ್ಟ್ರಪತಿಗೆ ಎಡಪಕ್ಷಗಳ ಬೆಂಬಲ ವಾಪಸ್ ಪತ್ರ
ಸರಕಾರದ ಸ್ಥಿರತೆಗೆ ಧಕ್ಕೆ ಇಲ್ಲ: ಪಿಎಂ
ಎಲ್ಲ ಸದಸ್ಯರು ಸರ್ಕಾರದ ಪರ: ಅಮರ್ ಸಿಂಗ್
ವಿಶ್ವಾಸ ಮತ ಯಾಚನೆ: ಸರ್ಕಾರಕ್ಕೆ ಅಗ್ನಿಪರೀಕ್ಷೆ
ಜಮ್ಮು: 6 ತಾಸು ಕರ್ಪ್ಯೂ ತೆರವು
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗಣಿಗಾರಿಗೆ ರಾಷ್ಟ್ರೀಕರಣವಾಗಲಿ: ಯಡಿಯ‌ೂರಪ್ಪ
ಗಣಿಗಾರಿಕೆ ರಾಷ್ಟ್ರೀಕರಣ ನಿರ್ಧಾರವನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಯಡಿಯ‌ೂರಪ್ಪ ...
ಪೈರಸಿ ತಡೆಗೆ ಕಠಿಣ ಕ್ರಮಕ್ಕೆ ಮನವಿ
ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ದ್ರೋಹ: ಸಿಂಧ್ಯಾ
ಮನರಂಜನೆ
ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು.
ಮುಂದೆ ಓದಿ|ಮತ್ತಷ್ಟು...