ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ವಿಶ್ವಾಸ ಮತದಲ್ಲಿ ಗೆದ್ದ ಬಳಿಕ ಐಎಇಎ ಸಂಪರ್ಕ: ಮುಖರ್ಜಿ
ನವದೆಹಲಿ, ಮಂಗಳವಾರ, 8 ಜುಲೈ 2008   ( 19:56 IST )
ಎಡಪಕ್ಷಗಳು ಸರ್ಕಾರಕ್ಕೆ ಬೆಂಬಲ ಹಿಂದೆಗೆದುಕೊಂಡ ನಿರ್ಧಾರ ಪ್ರಕಟಿಸಿದ ಬಳಿಕ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಮಂಗಳವಾರ ಪತ್ರಿಕಾಗೋಷ್ಠಿ ಕರೆದು ವಿಶ್ವಾಸ ಮತ ಯಾಚನೆಗೆ ಸರ್ಕಾರ ಶೀಘ್ರದಲ್ಲೇ ವಿಶೇಷ ಅಧಿವೇಶನವನ್ನು ಕರೆಯಲಿದೆ ಎಂದು ಪ್ರಕಟಿಸಿದ್ದಾರೆ. ವಿಶ್ವಾಸ ಮತ ಯಾಚನೆಯ ಅಗ್ನಿಪರೀಕ್ಷೆಯಲ್ಲಿ ಗೆದ್ದ ಬಳಿಕವೇ ಅಣು ಒಪ್ಪಂದ ಕುರಿತು ಸರ್ಕಾರ ಐಎಇಎಯನ್ನು ಸಂಪರ್ಕಿಸಲಿದೆ ಎಂದು ಅವರು ಹೇಳಿದರು.

ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಔಪಚಾರಿಕ ಸೂಚನೆ ಸ್ವೀಕರಿಸಿದ ತಕ್ಷಣ ಸರ್ಕಾರ ವಿಶ್ವಾಸ ಮತ ಕೋರಲಿದೆ ಎಂದು ಮುಖರ್ಜಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಜಿ-8 ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್‌ಗೆ ತೆರಳಿರುವ ಮನಮೋಹನ್ ಸಿಂಗ್ ಜತೆ ಮಾತುಕತೆ ನಡೆಸಿದ ಬಳಿಕ ಅವರ ಪ್ರಕಟಣೆ ಹೊರಬಿದ್ದಿದೆ. ಸಂಸತ್ತಿನ ಮುಂಗಾರು ಅಧಿವೇಶನವು ಆ.112ರಿಂದ ನಡೆಯಲಿರುವ ವಿಷಯವನ್ನು ಮುಖರ್ಜಿ ಪ್ರಕಟಿಸಿದರು.

ಬೆಂಬಲ ಹಿಂತೆಗೆದುಕೊಂಡ ಬಳಿಕ ಸಿಪಿಎಂ ಪ್ರಧಾನಕಾರ್ಯದರ್ಶಿ ಪ್ರಕಾಶ್ ಕಾರಟ್ ಕಳಿಸಿದ ಪತ್ರಕ್ಕೆ ಉತ್ತರಿಸುತ್ತಾ, ಐಎಇಎ ಜತೆ ಯಾವುದೇ ಸುರಕ್ಷಿತ ಒಪ್ಪಂದದ ಕರಡು ಪಠ್ಯವನ್ನು ಸರ್ಕಾರ ಮುಚ್ಚಿಟ್ಟಿಲ್ಲ ಎಂದು ಮುಖರ್ಜಿ ಹೇಳಿದರು. ಸುರಕ್ಷತೆ ಒಪ್ಪಂದದ ಸಾರಾಂಶವನ್ನು ಕಮ್ಯುನಿಸ್ಟರಿಗೆ ಈಗಾಗಲೇ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬುಧವಾರ ರಾಷ್ಟ್ರಪತಿಗೆ ಎಡಪಕ್ಷಗಳ ಬೆಂಬಲ ವಾಪಸ್ ಪತ್ರ
ಸರಕಾರದ ಸ್ಥಿರತೆಗೆ ಧಕ್ಕೆ ಇಲ್ಲ: ಪಿಎಂ
ಎಲ್ಲ ಸದಸ್ಯರು ಸರ್ಕಾರದ ಪರ: ಅಮರ್ ಸಿಂಗ್
ವಿಶ್ವಾಸ ಮತ ಯಾಚನೆ: ಸರ್ಕಾರಕ್ಕೆ ಅಗ್ನಿಪರೀಕ್ಷೆ
ಜಮ್ಮು: 6 ತಾಸು ಕರ್ಪ್ಯೂ ತೆರವು
ಯುಪಿಎ ಸರಕಾರಕ್ಕೆ ಆಪತ್ತು ಇಲ್ಲ: ಕಾಂಗ್ರೆಸ್
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗಣಿಗಾರಿಗೆ ರಾಷ್ಟ್ರೀಕರಣವಾಗಲಿ: ಯಡಿಯ‌ೂರಪ್ಪ
ಗಣಿಗಾರಿಕೆ ರಾಷ್ಟ್ರೀಕರಣ ನಿರ್ಧಾರವನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಯಡಿಯ‌ೂರಪ್ಪ ...
ಪೈರಸಿ ತಡೆಗೆ ಕಠಿಣ ಕ್ರಮಕ್ಕೆ ಮನವಿ
ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ದ್ರೋಹ: ಸಿಂಧ್ಯಾ
ಮನರಂಜನೆ
ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು.
ಮುಂದೆ ಓದಿ|ಮತ್ತಷ್ಟು...