ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಬುಧವಾರ ರಾಷ್ಟ್ರಪತಿಗೆ ಎಡಪಕ್ಷಗಳ ಬೆಂಬಲ ವಾಪಸ್ ಪತ್ರ
ನವದೆಹಲಿ, ಮಂಗಳವಾರ, 8 ಜುಲೈ 2008   ( 17:27 IST )
ಅನೇಕ ವಾರಗಳ ಸಸ್ಪೆನ್ಸ್‌ಗೆ ತೆರೆಎಳೆದಿರುವ ಎಡಪಕ್ಷಗಳು ಯುಪಿಎಗೆ ಬೆಂಬಲ ಹಿಂತೆಗೆತವನ್ನು ಮಂಗಳವಾರ ಪ್ರಕಟಿಸಿರುವ ನಡುವೆ ಕಾಂಗ್ರೆಸ್ ತಮ್ಮ ಸರ್ಕಾರಕ್ಕೆ ಬೆದರಿಕೆಯಿಲ್ಲವೆಂದು ಹೇಳಿದೆ. ಮನಮೋಹನ್ ಸಿಂಗ್ ಅವರು ತಮ್ಮ ಸರ್ಕಾರ ಅತೀ ಶೀಘ್ರದಲ್ಲೇ ಐಎಇಎಯನ್ನು ಸಂಪರ್ಕಿಸುತ್ತದೆಯೆಂದು ಘೋಷಿಸಿದಬಳಿಕ ಆತಂಕಿತವಾಗಿರುವ ಎಡಪಕ್ಷಗಳು ಸರ್ಕಾರಕ್ಕೆ ಬೆಂಬಲ ವಾಪಸಾತಿಗೆ ಸಮಯ ಕೂಡಿಬಂದಿದೆಯೆಂದು ಹೇಳಿದೆ.

ಸಿಪಿಎಂ, ಸಿಪಿಐ, ಫಾರ್ವರ್ಡ್ ಬ್ಲಾಕ್ ಮತ್ತು ಆರ್‌ಎಸ್‌ಪಿ ಸೇರಿದಂತೆ ನಾಲ್ಕು ಪಕ್ಷಗಳು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಬುಧವಾರ ಬೆಳಿಗ್ಗೆ ಭೇಟಿ ಮಾಡಿ ತಮ್ಮ ಬೆಂಬಲ ವಾಪಸಾತಿ ಪತ್ರವನ್ನು ಸಲ್ಲಿಸಲಿದ್ದಾರೆ ಎಂದು ಸಿಪಿಎಂ ಪ್ರಧಾನಕಾರ್ಯದರ್ಶಿ ಪ್ರಕಾಶ್ ಕಾರಟ್ ಈ ಪಕ್ಷಗಳ ಸುಮಾರು ಒಂದು ಗಂಟೆಯ ಸುದೀರ್ಘ ಸಭೆಯ ಬಳಿಕ ವರದಿಗಾರರಿಗೆ ತಿಳಿಸಿದರು.

ಲೋಕಸಭೆಯಲ್ಲಿ ಬಹುಮತ ಸಾಬೀತಿಗೆ ವಿಶ್ವಾಸ ಮತ ಯಾಚಿಸುವಂತೆ ಪ್ರಧಾನಮಂತ್ರಿಗೆ ಸೂಚಿಸಬೇಕೆಂದು ಎಡಪಕ್ಷಗಳು ರಾಷ್ಟ್ರಪತಿಯನ್ನು ಕೋರಲಿವೆ.ಪ್ರಧಾನಮಂತ್ರಿಗಳ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಪ್ರಸ್ತಾಪಿತ ಯುಪಿಎ-ಎಡಪಕ್ಷಗಳ ಸಮಿತಿಯ ಸಭೆಯಲ್ಲಿ ಭಾಗವಹಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಅವರಿಗೆ ಎಡಪಕ್ಷಗಳು ಬರೆದಿರುವ ಪತ್ರದಲ್ಲಿ ತಿಳಿಸಿದ್ದು, ಪತ್ರದ ಪ್ರತಿಗಳನ್ನು ಮಾಧ್ಯಮಕ್ಕೆ ವಿತರಿಸಲಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸರಕಾರದ ಸ್ಥಿರತೆಗೆ ಧಕ್ಕೆ ಇಲ್ಲ: ಪಿಎಂ
ಎಲ್ಲ ಸದಸ್ಯರು ಸರ್ಕಾರದ ಪರ: ಅಮರ್ ಸಿಂಗ್
ವಿಶ್ವಾಸ ಮತ ಯಾಚನೆ: ಸರ್ಕಾರಕ್ಕೆ ಅಗ್ನಿಪರೀಕ್ಷೆ
ಜಮ್ಮು: 6 ತಾಸು ಕರ್ಪ್ಯೂ ತೆರವು
ಯುಪಿಎ ಸರಕಾರಕ್ಕೆ ಆಪತ್ತು ಇಲ್ಲ: ಕಾಂಗ್ರೆಸ್
ಜಮ್ಮು ಕಾಶ್ಮೀರ: ರಾಷ್ಟ್ರಪತಿ ಆಳ್ವಿಕೆ ನಿರ್ಧಾರ ಇಂದು
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗಣಿಗಾರಿಗೆ ರಾಷ್ಟ್ರೀಕರಣವಾಗಲಿ: ಯಡಿಯ‌ೂರಪ್ಪ
ಗಣಿಗಾರಿಕೆ ರಾಷ್ಟ್ರೀಕರಣ ನಿರ್ಧಾರವನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಯಡಿಯ‌ೂರಪ್ಪ ...
ಪೈರಸಿ ತಡೆಗೆ ಕಠಿಣ ಕ್ರಮಕ್ಕೆ ಮನವಿ
ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ದ್ರೋಹ: ಸಿಂಧ್ಯಾ
ಮನರಂಜನೆ
ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು.
ಮುಂದೆ ಓದಿ|ಮತ್ತಷ್ಟು...