|
| ವಿಶ್ವಾಸ ಮತ ಯಾಚನೆ: ಸರ್ಕಾರಕ್ಕೆ ಅಗ್ನಿಪರೀಕ್ಷೆ |
| ನವದೆಹಲಿ, ಮಂಗಳವಾರ, 8 ಜುಲೈ 2008 ( 16:24 IST ) | |
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಂಡ ಬಳಿಕ ವಿಶ್ವಾಸ ಮತ ಯಾಚನೆಯಲ್ಲಿ ಗೆಲುವು ಗಳಿಸುವಷ್ಟು ಸುರಕ್ಷಿತ ಸಂಖ್ಯಾಬಲವನ್ನು ಹೊಂದಿದೆಯೇ? ಲೋಕಸಭೆಯ ಅರ್ಧದಷ್ಟು ಸದಸ್ಯರ ಸಂಖ್ಯೆ 275 ಆಗಿದ್ದು, ಎಡಪಕ್ಷಗಳ ಬೆಂಬಲ ಕಳೆದುಕೊಂಡು ಯುಪಿಎ ಬಲ 225ಕ್ಕೆ ಕುಸಿಯುತ್ತದೆ. ಸರ್ಕಾರದ ಹೊಸ ಸ್ನೇಹಿತ ಸಮಾಜವಾದಿ ಪಕ್ಷದಲ್ಲಿ 39 ಸದಸ್ಯರಿದ್ದಾರೆ.
ಆದರೆ ಬೇನಿಪ್ರಸಾದ್ ವರ್ಮಾ ಮುಂತಾದ ಅತೃಪ್ತ ಸಂಸದರಿಂದ ಅದರ ಸಂಖ್ಯೆ 35ಕ್ಕೆ ಕುಸಿಯಬಹುದು.ಪಕ್ಷದ ವಿಪ್ ಉಲ್ಲಂಘಿಸಿದ ಸಂಸದರನ್ನು ಅನರ್ಹಗೊಳಿಸಬಹುದು ಎಂದು ಕಾನೂನು ಹೇಳಿದರೂ, ಅವರ ಮತ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಸರ್ಕಾರ 35 ಎಸ್‌ಪಿ ಮತಗಳನ್ನು ಪಡೆದರೆ, ಒಟ್ಟು ಸಂಖ್ಯೆ 260 ದಾಟುತ್ತದೆ ಮತ್ತು ಸುರಕ್ಷಿತ ಗಡಿಯಾದ 272ಕ್ಕೆ 12 ಮತಗಳ ಕೊರತೆಯಾಗುತ್ತದೆ.
ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳದ ಮೂವರು ಸಂಸದರು ಬೆಂಬಲ ನೀಡಿದರೆ, ಸರ್ಕಾರಕ್ಕೆ ಬಲಾಬಲ ಪರೀಕ್ಷೆಯಲ್ಲಿ ದಡಮುಟ್ಟಲು 9 ಮತಗಳ ಕೊರತೆ ಕಾಣುತ್ತದೆ. ದೇವೇಗೌಡರ ಪಕ್ಷ ಜೆಡಿಎಸ್ ಇಬ್ಬರು ಸಂಸದರ ಬೆಂಬಲದ ಭರವಸೆ ನೀಡಿದೆ. ಹೀಗಾಗಿ ಸರ್ಕಾರಕ್ಕೆ 265 ಮತಗಳು ಸಿಕ್ಕಿದರೂ ಇನ್ನೂ 7 ಮತಗಳ ಕೊರತೆ ಬೀಳುತ್ತದೆ.ವಿಶ್ವಾಸ ಮತಯಾಚನೆಯಲ್ಲಿ ಗೆಲ್ಲುವುದು ಸರ್ಕಾರಕ್ಕೆ ಅಗ್ನಿಪರೀಕ್ಷೆಯಾಗಿದ್ದು, ಅನೇಕ ರಾಜಕೀಯ ಪಕ್ಷಗಳು ಮತ್ತು ಸಣ್ಣ ಪಕ್ಷಗಳನ್ನು ಓಲೈಸಬೇಕಾಗುತ್ತದೆ.
ಅವರಲ್ಲಿ 7 ಪಕ್ಷೇತರರು ನಿರ್ಣಾಯಕರೆನಿಸಬಹುದು. ದಾದ್ರಾ ಮತ್ತು ನಗರಹವೇಲಿಯ ಬಿಎನ್‌ಪಿ, ಉತ್ತರಪ್ರದೇಶದ ಎನ್‌ಎಲ್‌ಪಿ, ಸಿಕ್ಕಿಂನ ಎಸ್‌ಡಿಎಫ್ ಮತ್ತು ಮಿಜೋರಾಂನ ಎಂಎನ್‌ಎಫ್ ಎಲ್ಲವೂ ಒಬ್ಬ ಸಂಸದನನ್ನು ಹೊಂದಿದೆ. ಅಂತಿಮವಾಗಿ ಸರ್ಕಾರ ತೃಣಮೂಲ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾಂಗ್ರೆಸ್ ಬೆಂಬಲವನ್ನೂ ನೆಚ್ಚಿಕೊಂಡಿದೆ. ಎರಡು ಪಕ್ಷದಳಲ್ಲಿ ಒಟ್ಟು 3 ಸಂಸತ್ ಸದಸ್ಯರಿದ್ದಾರೆ. ಅವರ ಬೆಂಬಲದೊಂದಿಗೆ ಸರ್ಕಾರವು ಬಹುಮತದ ಗಡಿಯಾದ 278ರಿಂದ 280ನ್ನು ಮುಟ್ಟಬಹುದು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು. |
| |
|
|
|
|
|
|
|