|
| ಜಮ್ಮು: 6 ತಾಸು ಕರ್ಪ್ಯೂ ತೆರವು |
| ಜಮ್ಮು, ಮಂಗಳವಾರ, 8 ಜುಲೈ 2008 ( 15:32 IST ) | |
ಅಧಿಕಾರಿಗಳು ಜಮ್ಮು, ಕತ್ವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ 6 ತಾಸುಗಳ ಕಾಲ ನಿಷೇಧಾಜ್ಞೆಯನ್ನು ತೆರವುಗೊಳಿಸಿದ್ದರೆ, ಮಿಶ್ರಿವಾಲಾ, ಮುತಿ, ಸತ್ವಾರಿ, ನಗ್ರೊಟಾ, ಪರಡೆ, ಕೆನಲ್ ರಸ್ತೆ, ಕತುವಾ, ಸಾಂಬಾ ಮತ್ತು ಗಂಗ್ಯಾಲ್‌ಗಳಲ್ಲಿ ಪ್ರತಿಭಟನೆಗಳು ಮುಂದುವರಿಯಿತು.
ಸೂಕ್ಷ್ಮ ಪ್ರದೇಶವಾದ ಭಾದೇರ್ವಾ ಹೊರತು ಪಡಿಸಿ, ಇತರ ಸ್ಥಳಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ನಿಷೇಧಾಜ್ಞೆಯನ್ನು ತೆರವು ಗೊಳಿಸಲಾಯಿತು. ವಿವಿಧ ಪ್ರದೇಶಗಳಲ್ಲಿ ಬ್ಯಾಂಕು, ಅಂಗಡಿ ಮತ್ತು ಮಾರುಕಟ್ಟೆಗಳು ಕೆಲ ವಹಿವಾಟು ನಡೆಸಿದವು. ರಸ್ತೆಯಲ್ಲಿ ಲಘು ವಾಹನ ಸಂಚಾರ ಕಂಡುಬಂದಿತು.
ಅದಾಗ್ಯೂ, ಭೂ ವರ್ಗಾವಣೆ ವಿಷಯವಾಗಿ ಪ್ರತಿಭಟನೆಗಳು ಮುಂದುವರಿದಿದ್ದು, ಪ್ರತಿಭಟನಾಕಾರರು ರಾಜ್ಯಪಾಲ ವೋಹ್ರಾ, ಪಿಡಿಪಿ ಮುಖ್ಯಸ್ಥ ಮುಪ್ತಿ ಮೊಹಮ್ಮದ್ ಸಯೀದ್ ಮತ್ತು ನಿರ್ಗಮನ ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್‌ರ ಪ್ರತಿಕೃತಿಯನ್ನು ಸುಟ್ಟು ಹಾಕಿದರು.
ಸಂಘರ್ಷ ಸಮಿತಿಯ 35 ಸದಸ್ಯರ ಗುಂಪು ವೋಹ್ರಾರ ವಾಜಾ ಮತ್ತು ಅಮರ್ನಾಥ್ ದೇವಸ್ಥಾನ ಮಂಡಳಿಗೆ ಭೂಮಿ ಮರಳಿಸುವಂತೆ ಆಗ್ರಹಿಸಿದವು. ತಾವು ಈ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ. ತಮ್ಮ ಬೇಡಿಕೆಯನ್ನು ಈಡೇರಿಸುವವರೆಗೆ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ಸಮಿತಿ ಮುಖ್ಯಸ್ಥ ಲಿಲಾ ಕರನ್ ತಿಳಿಸಿದ್ದಾರೆ.
ಸರಕಾರವನ್ನು ತರಾಟೆಗೆ ತೆಗೆದುಕೊಂಡ ಸರ್ವ ಪಕ್ಷ ವಲಸೆ ಸಹಕಾರ ಸಮಿತಿ, ಕಾಶ್ಮೀರ ಕಣಿವೆಯಲ್ಲಿ ಹಜ್ ಮನೆಗೆ ನೀಡಲಾದ ರಾಜ್ಯ ಸರಕಾರದ 15 ಎಕ್ರೆ ಭೂಮಿಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿತು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು. |
| |
|
|
|
|
|
|
|