|
| ಯುಪಿಎಗೆ ಎಸ್‌ಪಿಯ ಬಾಹ್ಯ ಬೆಂಬಲ |
| ನವದೆಹಲಿ, 5 ಜುಲೈ 2008 ( 08:51 IST ) | |
ಕೇಂದ್ರದಲ್ಲಿನ ರಾಜಕೀಯ ಶಕ್ತಿಗಳ ಮರು ಹೊಂದಾಣಿಕೆ ಎಂಬಂತೆ ಕಾಂಗ್ರೆಸ್ ಒಪ್ಪಂದವೊಂದಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದು, ಇದರ ಪ್ರಕಾರ ಸಮಾಜವಾದಿ ಪಕ್ಷ (ಎಸ್‌ಪಿ) ಮನಮೋಹನ್ ಸಿಂಗ್ ಸರಕಾರಕ್ಕೆ ಬಾಹ್ಯ ಬೆಂಬಲ ನೀಡಲಿದೆ.
ವಾರಗಳ ಕಾಲ ನಡೆದ ಭಾರಿ ರಾಜಕೀಯ ಚೌಕಾಶಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎಸ್‌ಪಿ ನಾಯಕರಾದ ಮುಲಾಯಂ ಸಿಂಗ್ ಮತ್ತು ಅಮರ್ ಸಿಂಗ್‌ರ ನಡುವಿನ ಸಭೆಯ ಮೂಲಕ ಅಂತ್ಯಗೊಂಡಿತು. ಎರಡೂ ಪಕ್ಷಗಳು ತಮ್ಮ ಕಹಿ ಅನುಭವಗಳನ್ನು ಬದಿಗೊತ್ತಿ ಅಂತಿಮ ನಿರ್ಣಯಕ್ಕೆ ಬಂದವು. ಇದಕ್ಕೂ ಮುಂಚೆ ಎಸ್‌ಪಿ ನಾಯಕರು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‌ರನ್ನು ಭೇಟಿಯಾಗಿದ್ದರು.
ಲೋಕಸಭೆಯಲ್ಲಿ 39 ಸದಸ್ಯ ಬಲವನ್ನು ಹೊಂದಿರುವ ಎಸ್‌ಪಿ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆಯನ್ನು ಮಾಡದಿದ್ದರೂ, ಕಾಂಗ್ರೆಸ್ ಸಕಾಲಿಕ ಬೆಂಬಲ ಮತ್ತು ರಾಷ್ಟ್ರೀಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬೆಂಬಲ ನೀಡಿದ್ದಕ್ಕಾಗಿ ಎಸ್‌ಪಿಗೆ ಕೃತಜ್ಞತೆ ಸಲ್ಲಿಸುವಲ್ಲಿ ಹೆಚ್ಚಿನ ಸಮಯ ವ್ಯಯಗೊಳಿಸಲಿಲ್ಲ. ಇದರಿಂದ ಕಾಂಗ್ರೆಸ್‌ಗೆ ಎಡಪಕ್ಷವನ್ನು ಕೈಬಿಟ್ಟು ವಿವಾದಿತ ಭಾರತ-ಅಮೆರಿಕ ಅಣು ಒಪ್ಪಂದದತ್ತ ಮುನ್ನಡೆಯಲು ಸಾಧ್ಯವಾಗುತ್ತದೆ.
ಸಮಾಜವಾದಿ ಪಕ್ಷದ ಬೇಡಿಕೆ ಪಟ್ಟಿ ಊಹಾಪೋಹಗಳ ನಡುವೆ ಉಳಿದಿದ್ದರೂ, ಅದು ಕೇಂದ್ರ ಸಂಪುಟದಲ್ಲಿ ಸೇರುವ ಯಾವುದೇ ಯೋಚನೆ ಹೊಂದಿಲ್ಲ.
ತಮ್ಮ ಪಕ್ಷ ಕೇಂದ್ರ ಸಂಪುಟದಲ್ಲಿ ಯಾವುದೇ ಸ್ಥಾನವನ್ನು ಬಯಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಅಮರ್ ಸಿಂಗ್, ತಾವು ಇಲ್ಲಿ ಯಾವುದೇ ಸಂಪುಟಕ್ಕೆ ಸೇರ್ಪಡೆಗೊಳ್ಳಲು ಬಂದವರಲ್ಲ. ತಮ್ಮ ಎಲ್ಲಾ ರಾಜಕೀಯ ರಾಷ್ಟ್ರೀಯ ಹಿತದೃಷ್ಟಿಯ ಪರವಾಗಿದೆ ಎಂದು ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮ್ಮ ಸಾಮರ್ಥ್ಯದ ಬಗ್ಗೆ ಇಂದು ನೀವು ಹೆಚ್ಚು ಭರವಸೆಯಿಂದಿರುತ್ತೀರಿ.ಮುಖ್ಯ ಕೆಲಸವೊಂದರ ಪ್ರಯತ್ನದಲ್ಲಿ ನಿಮಗೆ ಹೆತ್ತವರ ನೆರವು ದೊರೆಯಲಿದೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮತ್ತು ನಿಮಗೆ ಮಾನಸಿಕ ನಿರಾಳತೆ ನೀಡುತ್ತವೆ. ಮಿತ್ರರ ಸಹಕಾರವೂ ದೊರೆಯಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಪೈರಸಿ ಮಾಡುವವರನ್ನು ವಿರುದ್ಧ ಗೂಂಡಾ ಕಾಯ್ದೆ ಅಡಿ ಬಂಧಿಸಬೇಕೆಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ವಾಣಿಜ್ಯ ಮಂಡಳಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ |
| |
|
|
|
|
|
|
|