|
| ಎಡಪಕ್ಷ ನೀಡಿದ್ದ ಗಡುವಿಗೆ ಕಾಂಗ್ರೆಸ್ ತಿರಸ್ಕಾರ |
| ನವದೆಹಲಿ, ಶುಕ್ರವಾರ, 4 ಜುಲೈ 2008 ( 18:48 IST ) | |
ಸರ್ಕಾರ ಭಾರತ-ಅಮೆರಿಕ ಪರಮಾಣು ಒಪ್ಪಂದವನ್ನು ಕಾರ್ಯಗತಗೊಳಿಸುತ್ತದೆಯೇ ಎಂದು ಸ್ಪಷ್ಟಪಡಿಸುವಂತೆ ಎಡರಂಗ ನೀಡಿದ್ದ ಗಡುವನ್ನು ಕಾಂಗ್ರೆಸ್ ಪಕ್ಷ ತಿರಸ್ಕರಿಸಿದೆ. ಸಾರ್ವಬೌಮ ಸರ್ಕಾರಗಳು ಅಥವಾ ರಾಜಕೀಯ ಪಕ್ಷಗಳು ಗಡುವಿಗೆ ಒಳಪಡುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಗ್ವಿ ತಿಳಿಸಿದರು.
ಭಾರತ ನಿರ್ದಿಷ್ಟ ಸುರಕ್ಷತೆ ಒಪ್ಪಂದಗಳನ್ನು ಕುರಿತು ಅಂತಾರಾಷ್ಟ್ರೀಯ ಅಣು ಶಕ್ತಿ ಸಂಸ್ಥೆಯ ಮುಂದೆ ತೆರಳಲು ಸರ್ಕಾರ ಇಚ್ಛಿಸಿದೆಯೇ ಎಂದು ಜು.7ರೊಳಗೆ ತಿಳಿಸುವಂತೆ ಎಡಪಕ್ಷಗಳು ಸರ್ಕಾರಕ್ಕೆ ಗಡುವನ್ನು ಹೇರಿತ್ತು. ಗಗನಮುಖಿಯಾಗಿರುವ ಬೆಲೆಗಳಿಗೆ ಕಡಿವಾಣ ಹಾಕುವಲ್ಲಿ ಯುಪಿಎ ಸರ್ಕಾರದ ವೈಫಲ್ಯವನ್ನು ಬಯಲಿಗೆಳೆಯಲು ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡು, ಪರಮಾಣು ಒಪ್ಪಂದದ ಬಗ್ಗೆ ಜನತೆಗೆ ತಮ್ಮ ನಿಲುವನ್ನು ವಿವರಿಸುವುದಾಗಿ ಎಡಪಕ್ಷಗಳು ತಿಳಿಸಿದ್ದವು.
ಎಲ್ಲ ಎಡಪಕ್ಷಗಳ ಸಭೆ ಇಲ್ಲಿ ನಡೆದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಿಪಿಎಂ ಪ್ರಧಾನಕಾರ್ಯದರ್ಶಿ ಪ್ರಕಾಶ್ ಕಾರಟ್, ಎಡಪಕ್ಷಗಳ ಪ್ರಶ್ನೆಗಳೊಂದಿಗೆ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಅವರಿಗೆ ಪತ್ರ ಕಳಿಸುವುದಾಗಿ ಅವರು ನುಡಿದರು.ಸುರಕ್ಷತೆ ಒಪ್ಪಂದವನ್ನು ಅಂತಿಮಗೊಳಿಸಲು ಐಎಇಎಗೆ ಯಾವಾಗ ತೆರಳುತ್ತೀರೆಂದು ನಾವು ಸರ್ಕಾರವನ್ನು ಕೇಳಿದ್ದೇವೆ ಎಂದು ತಿಳಿಸಿದ್ದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ. |
| |
|
|
|
|
|
|
|