|
| ಜುಲೈ 9ರಂದು ಪ್ರಧಾನಿ ಸಿಂಗ್, ಬುಷ್ ಭೇಟಿ |
| ನವದೆಹಲಿ, ಶುಕ್ರವಾರ, 4 ಜುಲೈ 2008 ( 17:28 IST ) | |
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಜಿ-8 ಶೃಂಗಸಭೆ ನೇಪಥ್ಯದಲ್ಲಿ ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರನ್ನು ಜುಲೈ 9ರಂದು ಭೇಟಿ ಮಾಡಿ, ಪರಮಾಣು ಒಪ್ಪಂದ ಕುರಿತ ಪ್ರಗತಿಯನ್ನು ಚರ್ಚಿಸುವರೆಂದು ನಿರೀಕ್ಷಿಸಲಾಗಿದೆ. ಪ್ರಧಾನಮಂತ್ರಿಗಳ ಮೂರು ದಿನಗಳ ಭೇಟಿ ಕುರಿತು ವರದಿಗಾರರಿಗೆ ವಿವರಣೆ ನೀಡಿದ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ ಮೆನನ್, ಚರ್ಚೆಯ ಬಗ್ಗೆ ವಿವರಗಳನ್ನು ನೀಡಲಿಲ್ಲ.
ಆದರೆ ಸರ್ಕಾರ ಒಪ್ಪಂದದ ಅನುಷ್ಠಾನಕ್ಕೆ ಮುಂದೆಸಾಗುವುದು ಎಂದು ಹೇಳಿ ಅದಕ್ಕೆ ಕಾಲಮಿತಿ ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದರು. ನಾವು ಆದಷ್ಟು ಬೇಗ ಒಪ್ಪಂದದ ಬಗ್ಗೆ ಮುನ್ನಡೆಯುತ್ತೇವೆ. ಒಂದೊಮ್ಮೆ ನಾವು ಐಎಇಎ ಸಂಪರ್ಕಿಸುವ ನಿರ್ಧಾರ ಕೈಗೊಂಡ ಬಳಿಕ ನಿಮಗೆ ತಿಳಿಸುತ್ತೇವೆ ಎಂದು ಅವರು ಹೇಳಿದರು.
ಪರಮಾಣು ಪೂರೈಕೆ ರಾಷ್ಟ್ರಗಳ ಗುಂಪಿನ ಜತೆ ಭಾರತ ಸಂಪರ್ಕದಲ್ಲಿದ್ದು, ಸಾದ್ಯವಾದಷ್ಟು ಬೇಗ ಒಪ್ಪಂದದ ಪ್ರಕ್ರಿಯೆ ಮುನ್ನಡೆಸುತ್ತೇವೆ ಎಂದು ಹೇಳಿದ ಮೆನನ್, ಹೊಕೈಡೊ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಅನೇಕ ವಿಶ್ವನಾಯಕರು ಎನ್‌ಎಸ್‌ಜಿ ಸದಸ್ಯರು ಎಂದು ನುಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ. |
| |
|
|
|
|
|
|
|