ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಐಎಇಎ : ಜುಲೈ 7ರೊಳಗೆ ಸ್ಪಷ್ಟನೆಗೆ ಎಡಪಕ್ಷ ಗಡುವು
ನವದೆಹಲಿ, ಶುಕ್ರವಾರ, 4 ಜುಲೈ 2008   ( 15:18 IST )
ಪರಮಾಣು ಸುರಕ್ಷತೆ ಒಪ್ಪಂದಕ್ಕಾಗಿ ಐಎಇಎಯನ್ನು ಸಂಪರ್ಕಿಸುವ ಬಗ್ಗೆ ಸರ್ಕಾರ ಜುಲೈ 7ರೊಳಗೆ ಸ್ಪಷ್ಟಪಡಿಸಬೇಕು ಎಂದು ಎಡಪಕ್ಷಗಳು ಯುಪಿಎಗೆ ಅಂತಿಮ ಗಡುವನ್ನು ನೀಡಿದೆ. ಗಗನಮುಖಿಯಾಗಿರುವ ಬೆಲೆಗಳಿಗೆ ಕಡಿವಾಣ ಹಾಕುವಲ್ಲಿ ಯುಪಿಎ ಸರ್ಕಾರದ ವೈಫಲ್ಯವನ್ನು ಬಯಲಿಗೆಳೆಯಲು ರಾಷ್ಟ್ರವ್ಯಾಪಿ ಚಳವಳಿ ಹೂಡಿ, ಪರಮಾಣು ಒಪ್ಪಂದದ ಬಗ್ಗೆ ಜನತೆಗೆ ತಮ್ಮ ನಿಲುವನ್ನು ವಿವರಿಸುವುದಾಗಿ ಎಡಪಕ್ಷಗಳು ತಿಳಿಸಿವೆ.

ಎಲ್ಲ ಎಡಪಕ್ಷಗಳ ಸಭೆ ಇಲ್ಲಿ ನಡೆದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಿಪಿಎಂ ಪ್ರಧಾನಕಾರ್ಯದರ್ಶಿ ಪ್ರಕಾಶ್ ಕಾರಟ್, ಎಡಪಕ್ಷಗಳ ಪ್ರಶ್ನೆಗಳೊಂದಿಗೆ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಅವರಿಗೆ ಪತ್ರ ಕಳಿಸುವುದಾಗಿ ಅವರು ನುಡಿದರು.ಸುರಕ್ಷತೆ ಒಪ್ಪಂದವನ್ನು ಅಂತಿಮಗೊಳಿಸಲು ಐಎಇಎಗೆ ಯಾವಾಗ ತೆರಳುತ್ತೀರೆಂದು ನಾವು ಸರ್ಕಾರವನ್ನು ಕೇಳಿದ್ದೇವೆ.

ಅವರು ಜು.7ರೊಳಗೆ ನಮಗೆ ಮಾಹಿತಿ ನೀಡಬೇಕು. ಎಲ್ಲ ನಾಲ್ಕು ಎಡಪಕ್ಷಗಳ ಪ್ರಧಾನಕಾರ್ಯದರ್ಶಿಗಳು ಪತ್ರಕ್ಕೆ ಅಂಕಿತ ಹಾಕಿದ್ದಾರೆ ಎಂದು ಕಾರಟ್ ಹೇಳಿದರು.ಸರ್ಕಾರದ ವೈಫಲ್ಯಗಳ ಬಗ್ಗೆ ಎಡಪಕ್ಷಗಳು ಜು.14ರಿಂದ ಆಂದೋಳನ ಆರಂಭಿಸಲಿವೆ ಎಂದು ಹೇಳಿದ ಅವರು, ರಾಷ್ಟ್ರದಲ್ಲಿ ಕೋಮುವಾದಿ ಪಕ್ಷಗಳು ತಲೆಎತ್ತಲು ಬಿಡುವುದಿಲ್ಲ ಎಂದು ಹೇಳಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಎಡಪಕ್ಷಗಳ ಬೆಂಬಲವಿರದಿದ್ದರೂ ಸರಕಾರ ಸುಭದ್ರ-ಪಾಸ್ವಾನ್
ಹಣದುಬ್ಬರದಿಂದ ಸೇನಾ ಯೋಜನೆಗೆ ಧಕ್ಕೆ -ಕಪೂರ್
ಆರ್‌ಜೆಡಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ
ಜಮ್ಮು: ವಿಎಚ್‌ಪಿಯಿಂದ ಬಂದ್ ವಿಸ್ತರಣೆ
ಕಾಯ್ದೆ ಉಲ್ಲಂಘನೆ:2 ರಿಲಯನ್ಸ್ ವಿಮಾನಗಳ ವಶ
ಶೀಘ್ರ ಬೆಂಬಲಿಸದ ಸಮಾಜವಾದಿ: ಯುಪಿಎ ನಿರಾಸೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಲಾರಿ ಮುಷ್ಕರ, ಬಂದ್‌ನಿಂದ ಕಂಗೆಟ್ಟ ಶ್ರೀಸಾಮಾನ್ಯ
ಒಂದು ಕಡೆ ಲಾರೀ ಮುಷ್ಕರ ಇನ್ನೊಂದೆಡೆ ವಿಶ್ವಹಿಂದೂ ಪರಿಷತ್ ಕರೆಕೊಟ್ಟಿರುವ ಬಂದ್‌ನಿಂದಾಗಿ ....
ಸುಪ್ರಿಂಕೋರ್ಟ್ ಮೊರೆಗೆ ಕರವೇ ನಿರ್ಧಾರ
ಜೆಡಿಎಸ್ ಮುಗಿಸಲು ಷಡ್ಯಂತ್ರ: ರೇವಣ್ಣ ಆರೋಪ
ಮನರಂಜನೆ
ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ.
ಮುಂದೆ ಓದಿ|ಮತ್ತಷ್ಟು...