ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಶೀಘ್ರ ಬೆಂಬಲಿಸದ ಸಮಾಜವಾದಿ: ಯುಪಿಎ ನಿರಾಸೆ
ನವದೆಹಲಿ, 4 ಜುಲೈ 2008   ( 12:18 IST )
ಸಮಾಜವಾದಿ ಪಕ್ಷ ಕಾಂಗ್ರೆಸ್‌ಗೆ ಶೀಘ್ರದಲ್ಲೇ ಬೆಂಬಲ ನೀಡುವುದೆಂದು ನೆಚ್ಚಿಕೊಂಡಿದ್ದ ಕಾಂಗ್ರೆಸ್ ಆಸೆ ನೀರುಪಾಲಾಗಿದೆ. ಯುಎನ್‌ಪಿಎಯ ಮಿತ್ರಪಕ್ಷಗಳ ಜತೆ ಐಕ್ಯತೆ ಪ್ರದರ್ಶಿಸಿದ ಲಕ್ಷಣಗಳು ಕಂಡುಬಂದರೂ ಕಾಂಗ್ರೆಸ್ ಜತೆ ಒಪ್ಪಂದ ಕುದುರಿಸುವ ಹಂತದಲ್ಲಿ ಸಮಾಜವಾದಿ ಪಕ್ಷವಿದೆ. ಏತನ್ಮಧ್ಯೆ ಎಡಪಕ್ಷಗಳು ಕೂಡ ಮನಮೋಹನ್ ಸಿಂಗ್ ಸರ್ಕಾರಕ್ಕೆ ಅನಿವಾರ್ಯ ವಿಚ್ಛೇದನ ನೀಡುವುದನ್ನು ವಿಳಂಬಿಸುತ್ತಿದೆ.

ಭಾರತ-ಅಮೆರಿಕ ಪರಮಾಣು ಒಪ್ಪಂದದ ಬಗ್ಗೆ ತಾವು ಐಕ್ಯತೆಯಿಂದ ಇರುವುದಾಗಿ ಯುಎನ್‌ಪಿಎ ನಾಯಕರ ಸಮ್ಮುಖದಲ್ಲಿ ಸಮಾಜವಾದಿ ಪಕ್ಷದ ಧುರೀಣ ಅಮರ್ ಸಿಂಗ್ ಹೇಳಿದರು. ಆದರೆ ಅದೇ ಗಳಿಗೆಯಲ್ಲಿ ಕೋಮುವಾದವು ಅಣ್ವಸ್ತ್ರಕ್ಕಿಂತ ಅಪಾಯಕಾರಿ ಎಂದು ಹೇಳುವ ಮ‌ೂಲಕ ಯುಪಿಎಗೆ ಬೆಂಬಲಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ವಿರೋಧಿ ಪಕ್ಷಗಳ ಕೂಟವಾದ ಯುಎನ್‌ಪಿಎ, ಪರಮಾಣು ಒಪ್ಪಂದಕ್ಕೆ ನಿಖರ ಅನುಮೋದನೆ ನೀಡುವುದೆಂದು ನಿರೀಕ್ಷಿಸಲಾಗಿಲ್ಲ.

ತನ್ನ ನಾಲ್ಕು ಗಂಟೆಗಳ ಸಭೆಯಲ್ಲಿ ಸಮಾಜವಾದಿ ಪಕ್ಷವು ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲವನ್ನು ಬಹಿರಂಗವಾಗಿ ಘೋಷಿಸದಂತೆ ತಡೆಯಲು ಯುಎನ್‌ಪಿಎ ಪಕ್ಷಗಳು ಯಶಸ್ವಿಯಾದವು. ಈ ಕುರಿತು ರಾಷ್ಟ್ರೀಯ ಚರ್ಚೆಯಾಗಬೇಕೆಂದು ಕೋರಿದ ಯುಎನ್‌ಪಿಎ ನಾಯಕರು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ಭೇಟಿಯಾಗಿ ತಮ್ಮ ಸಂಶಯ ನಿವಾರಣೆಗೆ ಪರಮಾಣು ಒಪ್ಪಂದದ ಬಗ್ಗೆ ಸ್ಪಷ್ಟನೆ ಕೇಳಿದರು.

ಏತನ್ಮಧ್ಯೆ ವಿರೋಧಿ ಪಾಳೆಯದಲ್ಲಿ ಯುಪಿಎಗೆ ಬೆಂಬಲ ಹಿಂತೆಗೆದುಕೊಳ್ಳುವ ಬಗ್ಗೆ ಇನ್ನೂ ಗೊಂದಲ ಆವರಿಸಿದೆ. ಪ್ರಧಾನಮಂತ್ರಿ ಜಿ8 ಶೃಂಗಸಭೆಯಿಂದ ಹಿಂತಿರುವ ತನಕ ಬೆಂಬಲ ಹಿಂತೆಗೆತ ವಿಳಂಬಿಸಲು ನಿರ್ಧರಿಸಲಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಯುಪಿಎಗೆ ಎಸ್‌ಪಿಯ ಬಾಹ್ಯ ಬೆಂಬಲ
ಎಡಪಕ್ಷ ನೀಡಿದ್ದ ಗಡುವಿಗೆ ಕಾಂಗ್ರೆಸ್ ತಿರಸ್ಕಾರ
ಜುಲೈ 9ರಂದು ಪ್ರಧಾನಿ ಸಿಂಗ್, ಬುಷ್ ಭೇಟಿ
ಜಮ್ಮು: ನಿಷೇಧಾಜ್ಞೆ ಮುಂದುವರಿಕೆ, ಕತ್ವಾ ಪಟ್ಟಣಕ್ಕೆ ವಿಸ್ತರಣೆ
ಅಮರನಾಥ್ ಭೂ ವಿವಾದ: ಮಧ್ಯಸ್ಥಿಕೆಗೆ ಸು.ಕೋರ್ಟ್ ನಕಾರ
ಪುರಿ:ಕಾಲ್ತುಳಿತಕ್ಕೆ 6 ಭಕ್ತರ ಸಾವು
ಗ್ರಹ ಗತಿ
ದೈನಿಕ - ಮ್ಮ ಸಾಮರ್ಥ್ಯದ ಬಗ್ಗೆ ಇಂದು ನೀವು ಹೆಚ್ಚು ಭರವಸೆಯಿಂದಿರುತ್ತೀರಿ.ಮುಖ್ಯ ಕೆಲಸವೊಂದರ ಪ್ರಯತ್ನದಲ್ಲಿ ನಿಮಗೆ ಹೆತ್ತವರ ನೆರವು ದೊರೆಯಲಿದೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮತ್ತು ನಿಮಗೆ ಮಾನಸಿಕ ನಿರಾಳತೆ ನೀಡುತ್ತವೆ. ಮಿತ್ರರ ಸಹಕಾರವೂ ದೊರೆಯಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಾಹಿತಿಗಳ ವಿರುದ್ಧ ಕುಮಾರಸ್ವಾಮಿ ಕಿಡಿ
ರಾಜ್ಯದಲ್ಲಿ ಸ್ಥಿತಿಗತಿಗಳ ಬಗ್ಗೆ ಕೇಂದ್ರಕ್ಕೆ ಅರಿವು ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ....
ರಾಜ್ಯದ ಸಮಸ್ಯೆ: ದೆಹಲಿಗೆ ಕಾಂಗ್ರೆಸ್ ನಿಯೋಗ
ಪೆಟ್ರೋಲ್ ಕೊರತೆ ಇಲ್ಲ: ಹರತಾಳ್ ಹಾಲಪ್ಪ
ಮನರಂಜನೆ
ಚಿತ್ರ ಸುದ್ದಿ - ಪೈರಸಿ ಮಾಡುವವರನ್ನು ವಿರುದ್ಧ ಗೂಂಡಾ ಕಾಯ್ದೆ ಅಡಿ ಬಂಧಿಸಬೇಕೆಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ವಾಣಿಜ್ಯ ಮಂಡಳಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ
ಮುಂದೆ ಓದಿ|ಮತ್ತಷ್ಟು...