ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಬೆಂಬಲ ವಾಪಸ್‌ಗೆ ಎಡಪಕ್ಷ ಸಮನ್ವಯ ಸಮಿತಿ ಸಭೆ
ನವದೆಹಲಿ, ಶುಕ್ರವಾರ, 4 ಜುಲೈ 2008   ( 11:15 IST )
ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಬಗ್ಗೆ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುವ ವಿಧಿವಿಧಾನ ರೂಪಿಸಲು ಎಡಪಕ್ಷಗಳು ತನ್ನ ಸಮನ್ವಯ ಸಮಿತಿ ಸಭೆಯನ್ನು ಕರೆದಿರುವ ನಡುವೆ, ಯುಪಿಎ ಸರ್ಕಾರ ಶುಕ್ರವಾರ ಉಸಿರು ಬಿಗಿಹಿಡಿದಿದೆ. ಆದಾಗ್ಯೂ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಜಿ8 ಶೃಂಗಸಭೆಯಿಂದ ಹಿಂತಿರುಗುವ ಜು.6ರವರೆಗೆ ಪಕ್ಷಗಳು ಬೆಂಬಲ ಹಿಂತೆಗೆದುಕೊಳ್ಳುವುದಿಲ್ಲವೆಂದು ಭಾವಿಸಲಾಗಿದೆ.

ಸರ್ಕಾರ ಪರಮಾಣು ಒಪ್ಪಂದದ ಕಾರ್ಯಗತಕ್ಕೆ ಹಠ ಹಿಡಿದಿರುವುದರಿಂದ ಮತ್ತು ಮಿತ್ರಪಕ್ಷಗಳನ್ನು ಕಡೆಗಣಿಸುತ್ತಿರುವುದರಿಂದ ಬೆಂಬಲ ಹಿಂತೆಗೆತಕ್ಕೆ ವಿಧಿವಿಧಾನ ರೂಪಿಸುವಂತೆ ಎಡಪಕ್ಷಗಳಿಗೆ ಒತ್ತಾಯಿಸುವುದಾಗಿ ಸಿಪಿಐ ಪ್ರಧಾನಕಾರ್ಯದರ್ಶಿ ಪ್ರಕಾಶ್ ಕಾರಟ್ ತಿಳಿಸಿದರು. ಮನಮೋಹನ್ ಸಿಂಗ್ ಜಿ8 ಶೃಂಗಸಭೆಗೆ ತೆರಳುವುದು ಖಚಿತವಾಗಿದ್ದರೆ ಅದು ಪರಮಾಣು ಒಪ್ಪಂದದತ್ತ ಹೆಜ್ಜೆ ಎಂದು ಭಾವಿಸುವುದಾಗಿ ಕಾರಟ್ ನುಡಿದರು.

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಬರ್ಧನ್ ಕೂಡ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದರು. ಪರಮಾಣು ಒಪ್ಪಂದಕ್ಕೆ ಸಂಬಂಧಪಟ್ಟಂತೆ ಎಡಪಕ್ಷಗಳ ನಿಲುವು ಖಚಿತವಾಗಿದ್ದರಿಂದ ಬೆಂಬಲ ಹಿಂತೆಗೆತಕ್ಕೆ ವಿಧಿವಿಧಾನ ರೂಪಿಸಬೇಕೆಂದು ಅವರು ಹೇಳಿದರು. ಸರ್ಕಾರ ಐಎಇಎಯನ್ನು ಸಂಪರ್ಕಿಸಿದ ಕ್ಷಣವೇ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಅವರು ನುಡಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಅಣು ಒಪ್ಪಂದ ರಾಷ್ಟ್ರದ ಹಿತಾಸಕ್ತಿಯ ಪರವಾಗಿದೆ: ಕಲಾಂ
ಚಲಿಸುತ್ತಿದ್ದ ರೈಲಿನಿಂದ ಬಾಲಕನನ್ನು ಎಸೆದ ಟಿಟಿಇ
ಮಾವೋವಾದಿಗಳಿಗೆ ನಿಷೇಧವಿಲ್ಲ-ಬುದ್ದದೇವ್
ಜು.4ರಂದು ಬೆಂಬಲ ಹಿಂತೆಗೆತಕ್ಕೆ ಬರ್ದನ್ ಕರೆ
ಹಿಂಸಾಚಾರಕ್ಕೆ ತಿರುಗಿದ ಬಂದ್‌ ಕರೆ:ಇಬ್ಬರ ಸಾವು
ಪುಲ್ವಾಮಾ: ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರು ಹತ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಲಾರಿ ಮುಷ್ಕರ, ಬಂದ್‌ನಿಂದ ಕಂಗೆಟ್ಟ ಶ್ರೀಸಾಮಾನ್ಯ
ಒಂದು ಕಡೆ ಲಾರೀ ಮುಷ್ಕರ ಇನ್ನೊಂದೆಡೆ ವಿಶ್ವಹಿಂದೂ ಪರಿಷತ್ ಕರೆಕೊಟ್ಟಿರುವ ಬಂದ್‌ನಿಂದಾಗಿ ....
ಸುಪ್ರಿಂಕೋರ್ಟ್ ಮೊರೆಗೆ ಕರವೇ ನಿರ್ಧಾರ
ಜೆಡಿಎಸ್ ಮುಗಿಸಲು ಷಡ್ಯಂತ್ರ: ರೇವಣ್ಣ ಆರೋಪ
ಮನರಂಜನೆ
ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ.
ಮುಂದೆ ಓದಿ|ಮತ್ತಷ್ಟು...