|
| ಅಣು ಒಪ್ಪಂದ ರಾಷ್ಟ್ರದ ಹಿತಾಸಕ್ತಿಯ ಪರವಾಗಿದೆ: ಕಲಾಂ |
| ನವದೆಹಲಿ, ಶುಕ್ರವಾರ, 4 ಜುಲೈ 2008 ( 09:30 IST ) | |
ಭಾರತ-ಅಮೆರಿಕ ಅಣು ಒಪ್ಪಂದ ದೇಶದ ಹಿತಾಸಕ್ತಿ ಪರವಾಗಿದ್ದು, ಈ ವಿಷಯವಾಗಿ ನಿರ್ಣಯ ತೆಗೆದುಕೊಳ್ಳುವಾಗ ರಾಜಕೀಯಗಿಂತ ಮಿಗಿಲಾಗಿ ರಾಷ್ಟ್ರೀಯ ಹಿತಾಸಕ್ತಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಭಾರತದ ಮಾಜಿ ರಾಷ್ಟ್ರಪತಿ ಮತ್ತು ವಿಜ್ಞಾನಿ ಎ ಪಿ ಜೆ ಅಬ್ದುಲ್ ಕಲಾಂ ಸಮಾಜವಾದಿ ಪಕ್ಷದ ನಾಯಕರುಗಳಿಗೆ ಕಿವಿ ಮಾತು ಹೇಳಿದ್ದಾರೆ.
ಯುಎನ್‌ಪಿಎ ಸಭೆಯ ಬಳಿಕ ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಮತ್ತು ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಕಲಾಂ ನಿವಾಸಕ್ಕೆ ಭೇಟಿ ನೀಡಿದ್ದರು. ಯುಎನ್‌ಪಿಎ ಸಭೆಯಲ್ಲಿ ಅಣು ಒಪ್ಪಂದ ವಿಷಯವಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಮುನ್ನ ತಜ್ಞರು ಮತ್ತು ಖ್ಯಾತ ವಿಜ್ಞಾನಿಗಳ ಅಭಿಪ್ರಾಯವನ್ನು ಕೋರಲು ನಿರ್ಧರಿಸಲಾಗಿತ್ತು.
ಕಲಾಂ ಜತೆಗೆ ಒಂದು ತಾಸಿಗಿಂತಲೂ ಹೆಚ್ಚಿನ ಸಭೆ ನಡೆಸಿದ ಬಳಿಕ ಯಾದವ್ ವರದಿಗಾರರಲ್ಲಿ, ಮಾಜಿ ರಾಷ್ಟ್ರಪತಿ ತಮಗೆ ಈ ಅಣು ಒಪ್ಪಂದ ಭಾರತದ ಹಿತಾಸಕ್ತಿಯಲ್ಲಿದೆ ಎಂಬುದಾಗಿ ಹೇಳಿದರು ಎಂದು ತಿಳಿಸಿದರು.
ಕಲಾಂ ಜತೆಗಿನ ತಮ್ಮ ಚರ್ಚೆಯನ್ನು ತಾವು ಯುಎನ್‌ಪಿಎ ನಾಯಕರುಗಳಿಗೆ ತಿಳಿಸಲಿದ್ದು, ಕಲಾಂ ಓರ್ವ ಪ್ರಖ್ಯಾತ ಹಾಗೂ ಗೌರವಾನ್ವಿತ ವಿಜ್ಞಾನಿಯಾಗಿದ್ದು, ದೇಶದ ಅಣು ತಂತ್ರಜ್ಞಾನದ ಪಿತಾಮಹರಾಗಿದ್ದಾರೆ ಎಂದು ವಿವರಿಸಿದರು.
ಸಮಾಜವಾದಿ ಪಕ್ಷ ವ್ಯಕ್ತಪಡಿಸಿದ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಕಛೇರಿ ಕಳೆದ ರಾತ್ರಿ ಹೊರಡಿಸಿದ್ದ ಹೇಳಿಕೆಯನ್ನು ಮುಲಾಯಂ ಮತ್ತು ಅಮರ್ ಸಿಂಗ್ ಕಲಾಂ ಎದುರಿಗಿಟ್ಟಿದ್ದರು.
ಇದನ್ನು ಓದಿದ ಕಲಾಂ, ರಾಷ್ಟ್ರೀಯ ಹಿತಾಸಕ್ತಿ ರಾಜಕಾರಣ ಹಾಗೂ ರಾಜಕೀಯ ಪಕ್ಷಗಳಿಗಿಂತ ಮಿಗಿಲಾಗಿದೆ ಎಂಬುದಾಗಿ ತಿಳಿಸಿದರು ಎಂದು ಅಮರ್ ಸಿಂಗ್ ಹೇಳಿದರು. ತಾನು ರಾಜಕೀಯದಲ್ಲಿಲ್ಲ ಆದರೆ ತಾನು ದೀರ್ಘ ಕಾಲದವರೆಗೆ ಅಣು ತಂತ್ರಜ್ಞಾನವಾಗಿ ಕೆಲಸ ಮಾಡಿದ್ದೇನೆ. ದೇಶಕ್ಕೆ ಶುದ್ದ ಅಣು ಇಂಧನದ ಅಗತ್ಯವಿದೆ ಎಂಬುದಾಗಿ ಕಲಾಂ ಅವರಿಗೆ ತಿಳಿಸಿದ್ದಾರೆ.
ಈ ಒಪ್ಪಂದ ಕಾರ್ಯರೂಪಕ್ಕೆ ಬಂದರೆ ಭಾರತದ ಪರಮಾಣು ಪರೀಕ್ಷೆ ಹಕ್ಕು ಕುಂಠಿತವಾಗುವ ಬಗೆಗಿನ ಸಮಾಜವಾದಿ ಪಕ್ಷದ ಅತಂಕಕ್ಕೆ ಕಲಾಂ, ಒಂದು ವೇಳೆ ತಮ್ಮ ನೆರೆ ರಾಷ್ಟ್ರವಾದ ಪಾಕ್ ಮತ್ತು ಚೀನಾ ಅಣು ಅಸ್ತ್ರವನ್ನು ಮಾಡಿದರೆ, ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಒಪ್ಪಂದವನ್ನು ರದ್ಧು ಗೊಳಿಸುವ ಅಧಿಕಾರ ಹೊಂದಿರುವೆವು ಎಂದು ತಿಳಿ ಹೇಳಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ. |
| |
|
|
|
|
|
|
|