|
| ಚಲಿಸುತ್ತಿದ್ದ ರೈಲಿನಿಂದ ಬಾಲಕನನ್ನು ಎಸೆದ ಟಿಟಿಇ |
| ರೂರ್ಕೆಲಾ, ಗುರುವಾರ, 3 ಜುಲೈ 2008 ( 17:51 IST ) | |
ಟಿಕೆಟ್ ತಪಾಸಣೆಗಾರ 12 ವರ್ಷ ವಯಸ್ಸಿನ ಬಾಲಕನೊಬ್ಬನನ್ನು ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ಎಸೆದಿದ್ದರಿಂದ ಬಾಲಕ ತನ್ನ ಬಲಗಾಲು ಮತ್ತು ಬಲಕೈ ಕಳೆದುಕೊಂಡ ಹೃದಯವಿದ್ರಾವಕ ಘಟನೆ ನಡೆದಿದೆ. ರೈಲಿನ ಬೋಗಿಗಳನ್ನು ಸ್ವಚ್ಛಗೊಳಿಸುವ ಮೂಲಕ ಜೀವನನಿರ್ವಹಣೆ ಮಾಡುತ್ತಿದ್ದ ಶಂಕರ್ ಸಿಂಗ್ ರೂರ್ಕೆಲಾ ರೈಲ್ವೆ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲೊಂದರಲ್ಲಿ ಕೆಲಸದಲ್ಲಿ ನಿರತನಾಗಿದ್ದಾಗ ಸೀಟಿನ ಅಡಿಯಲ್ಲಿ 50 ರೂ.ಬಿದ್ದಿದ್ದನ್ನು ತೆಗೆದಿರಿಸಿಕೊಂಡ.
ಟಿಟಿಇ ಆ ಹಣವನ್ನು ತನಗೆ ಕೊಡುವಂತೆ ಕೇಳಿದಾಗ ಬಾಲಕ ನಿರಾಕರಿಸಿದ. ಶಂಕರ್ ಮತ್ತು ಟಿಟಿಇ ನಡುವ ಜಗಳ ನಡೆಯುವಷ್ಟರಲ್ಲಿ ರೈಲು ಚಲಿಸಲಾಂಭಿಸಿತು. ಶಂಕರ್ ವಿರುದ್ಧ ಕೋಪೋದ್ರಿಕ್ತನಾದ ಟಿಟಿಇ ಬಾಲಕನ ಕೆನ್ನೆಗೆ ಬಾರಿಸಿ, ಬೋಗಿಯ ಬಾಗಿಲಿಗೆ ಎಳೆದುಕೊಂಡು ಹೋಗಿ ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ನೂಕಿದರೆಂದು ಶಂಕರ್ ಸ್ನೇಹಿತ ನೀಡಿದ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಶಂಕರ್‌ನನ್ನು ಇಸ್ಪಾಟ್ ಜನರಲ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.ಸಾಮಾಜಿಕ ಸಂಘಟನೆ ಜನ ಕಲ್ಯಾಣ ಸಮಿತಿಯ ಸದಸ್ಯರು ಈ ಘಟನೆ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದು, ಟಿಟಿಇಯನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಹೊಸ ವ್ಯಾಪಾರಗಳಿಗೆ ಶುಕ್ರದೆಸೆ. ಸ್ತ್ರೀಯರಿಗೆ ವಸ್ತ್ರಲಾಭ ಸಾಧ್ಯತೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಅದು ಕಾರಂಜಿಯ ಬಗ್ಗೆ ಮಾತನಾಡಲು ನಿರ್ಮಾಪಕ ಎಂ.ಎನ್. ಸುರೇಶ್ ಕರೆದಿದ್ದ ಪತ್ರಿಕಾಗೋಷ್ಠಿ. ಅಲ್ಲಿ ಅವರು ಒಂದಷ್ಟನ್ನು ಹರವಿಕೊಂಡರು. ತಮ್ಮ ಕನಸಿನ ಕಾರಂಜಿಯನ್ನು ಬಣ್ಣಿಸಿದರು. ಹೊಸ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸುವುದು ನನ್ನ ಉದ್ದೇಶ. ಹಣ ಗಳಿಸುವುದು ಮುಂದಿನ |
| |
|
|
|
|
|
|
|