ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಪುಲ್ವಾಮಾ: ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರು ಹತ
ಶ್ರೀನಗರ, ಗುರುವಾರ, 3 ಜುಲೈ 2008   ( 16:22 IST )
ಪಾಕಿಸ್ತಾನ ಮ‌ೂಲದ ಲಷ್ಕರೆ ತೊಯ್ಬಾದ ಮುಖ್ಯ ಕಾರ್ಯನಿರ್ವಾಹಕ ಕಮಾಂಡರ್ ಸೇರಿದಂತೆ ಇಬ್ಬರು ಉಗ್ರಗಾಮಿಗಳು ಗುರುವಾರ ಪುಲ್ವಾಮಾ ಜಿಲ್ಲೆಯಲ್ಲಿ ಸಂಭವಿಸಿದ ಗುಂಡಿನ ಕಾಳಗದಲ್ಲಿ ಹತರಾಗಿದ್ದಾರೆ.

ಸುಳಿವೊಂದರ ಆಧಾರದ ಮೇಲೆ, ಭದ್ರತಾ ಸಿಬ್ಬಂದಿಯ ತಂಡವೊಂದು ಪುಲ್ವಾಮಾ ಗ್ರಾಮದ ನೈನಾ ಬಾಟ್ಪೋರಾ ಗ್ರಾಮದ ಮನೆಯೊಂದರ ಮೇಲೆ ದಾಳಿ ಮಾಡಿತು ಎಂದು ಅಧಿಕೃತ ಮ‌ೂಲಗಳು ತಿಳಿಸಿವೆ. ಉಗ್ರಗಾಮಿಗಳು ಶೋಧ ತಂಡದ ಮೇಲೆ ಗುಂಡನ್ನು ಹಾರಿಸಿದಾಗ ಚಕಮಕಿ ನಡೆದು ಇಬ್ಬರು ಲಷ್ಕರೆ ತೊಯ್ಬಾ ಭಯೋತ್ಪಾದಕರು ಮೃತಪಟ್ಟರು ಎಂದು ಮ‌ೂಲಗಳು ತಿಳಿಸಿದ್ದು, ಗುಂಡಿನ ವಿನಿಮಯ ಅನೇಕ ಗಂಟೆಗಳ ಕಾಲ ನಡೆಯಿತು ಎಂದು ಹೇಳಿವೆ.

ಉಗ್ರಗಾಮಿಯಲ್ಲಿ ಒಬ್ಬನನ್ನು ಲಷ್ಕರೆತೊಯ್ಬಾದ ಮುಖ್ಯ ಕಾರ್ಯನಿರ್ವಾಹಕ ಅಧಿಪತಿ ಅತೀಫ್ ಎಂದು ಗುರುತಿಸಲಾಗಿದೆ ಎಂದು ಮ‌ೂಲಗಳು ತಿಳಿಸಿವೆ. ಇನ್ನೊಬ್ಬ ಉಗ್ರಗಾಮಿಯ ಗುರುತು ಪತ್ತೆಯಾಗಿಲ್ಲ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಆರುಶಿ ಕೊಲೆ: ಮಂಪರು ಪರೀಕ್ಷೆ ವಿರುದ್ಧದ ಅರ್ಜಿ ತಿರಸ್ಕೃತ
ವಿಎಚ್‌ಪಿಯಿಂದ ದೇಶದಾದ್ಯಂತ ಬಂದ್‌ಗೆ ಕರೆ
ಚತ್ತಿಸ್‌ಗಢ್: ಐದು ವಿಶ್ವವಿದ್ಯಾಲಯಗಳು ಮಂಜೂರು
ಪೂಲನ್ ಪ್ರಕರಣ:ಪ್ರಕರಣ ವರ್ಗಾವಣೆಗೆ ಕೋರ್ಟ್ ತಿರಸ್ಕಾರ
ಮೋದಿಗೆ ಅಹ್ವಾನ: ಭಾರತೀಯ ಅಮೆರಿಕನ್‌ರಲ್ಲಿ ಭಿನ್ನಮತ
ಅಣು ಒಪ್ಪಂದ:ಯುಎನ್‌ಪಿಎ ನಿರ್ಣಾಯಕ ಸಭೆ
ಗ್ರಹ ಗತಿ
ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಹೊಸ ವ್ಯಾಪಾರಗಳಿಗೆ ಶುಕ್ರದೆಸೆ. ಸ್ತ್ರೀಯರಿಗೆ ವಸ್ತ್ರಲಾಭ ಸಾಧ್ಯತೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮುಂಗಡಪತ್ರದಲ್ಲಿ ಹಾಲಿಗೆ 2ರೂ. ಸಹಾಯಧನ
ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 2ರೂ. ಸಹಾಯಧನ....
ದೆಹಲಿಗೆ ತೆರಳಿದ ಜೆಡಿಎಸ್ ನಿಯೋಗ
ಲಾರಿ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ
ಮನರಂಜನೆ
ಚಿತ್ರ ಸುದ್ದಿ - ಅದು ಕಾರಂಜಿಯ ಬಗ್ಗೆ ಮಾತನಾಡಲು ನಿರ್ಮಾಪಕ ಎಂ.ಎನ್. ಸುರೇಶ್ ಕರೆದಿದ್ದ ಪತ್ರಿಕಾಗೋಷ್ಠಿ. ಅಲ್ಲಿ ಅವರು ಒಂದಷ್ಟನ್ನು ಹರವಿಕೊಂಡರು. ತಮ್ಮ ಕನಸಿನ ಕಾರಂಜಿಯನ್ನು ಬಣ್ಣಿಸಿದರು. ಹೊಸ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸುವುದು ನನ್ನ ಉದ್ದೇಶ. ಹಣ ಗಳಿಸುವುದು ಮುಂದಿನ
ಮುಂದೆ ಓದಿ|ಮತ್ತಷ್ಟು...