ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಕುಟುಂಬದ ಮರ್ಯಾದೆ ಉಳಿಸಲು ಪುತ್ರಿ, ಪ್ರಿಯಕರನ ಹತ್ಯೆ
ನವದೆಹಲಿ(ಏಜೆನ್ಸಿ), ಶನಿವಾರ, 10 ಮೇ 2008   ( 16:46 IST )
ಕುಟುಂಬದ ಮರ್ಯಾದೆ ಉಳಿಸಲು ತನ್ನ ಗರ್ಭವತಿ ಪುತ್ರಿ ಮತ್ತವಳ ಪ್ರಿಯಕರನನ್ನು ಹತ್ಯೆ ಮಾಡಿದ ವ್ಯಕ್ತಿಯೊಬ್ಬ ಅವರ ದೇಹಗಳನ್ನು ಪ್ರದರ್ಶನಕ್ಕಿಟ್ಟು ಗ್ರಾಮಸ್ಥರಿಂದ ಶಹಭಾಸ್‌ಗಿರಿ ಪಡೆದ ಆಘಾತಕಾರಿ ಘಟನೆ ಹರ್ಯಾಣದಲ್ಲಿ ಶುಕ್ರವಾರ ಸಂಭವಿಸಿದೆ.

27 ವರ್ಷ ವಯಸ್ಸಿನ ಜಸ್ಬೀರ್ ಸಿಂಗ್ ಮತ್ತು ಅವನ ಬಾಲ್ಯದ ಗೆಳತಿ, 6 ತಿಂಗಳು ಗರ್ಭಿಣಿಯಾದ ಸುನಿತ ಜಾಟ್ ಸಮುದಾಯದ ಪ್ರಾಬಲ್ಯವಿರುವ ಕರ್ನಾಲ್ ಗ್ರಾಮಕ್ಕೆ ಸೇರಿದವರಾಗಿದ್ದು, ಒಂದೇ ಗ್ರಾಮಕ್ಕೆ ಸೇರಿದವರು ಒಡಹುಟ್ಟಿದವರೆಂದು ಆ ಗ್ರಾಮ ಪರಿಗಣಿಸುತ್ತಿದೆ. ಸುನಿತಾ ವಿವಾಹವಾದ ಬಳಿಕವೂ ಅವರಿಬ್ಬರು ಅಕ್ರಮ ಸಂಬಂಧವನ್ನು ಗೌಪ್ಯವಾಗಿ ಮುಂದುವರಿಸಿದ್ದರು.

ಕಳೆದ ವರ್ಷ ತನ್ನ ಪತಿಗೆ ವಿಚ್ಛೇದನ ನೀಡಿದ ಸುನಿತಾ ಜಸ್ಬೀರ್ ಜತೆ ವಾಸಿಸಲು ಆರಂಭಿಸಿದಳು. ಸುನಿತಾ ಕುಟುಂಬ ಆಕೆ ಗರ್ಭಿಣಿ ಎನ್ನುವುದನ್ನು ತಿಳಿದ ಕೂಡಲೇ ದಂಪತಿಯನ್ನು ಥಳಿಸಿ ಸುನಿತಾ ಕುಟುಂಬ ಕೊಂದಿದೆಯೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹತ್ಯೆ ಮಾಡಿದ ಬಳಿಕ ಕುಟುಂಬವು ಯುವ ಪ್ರೇಮಿಗಳ ದೇಹಗಳನ್ನು ಮನೆಯ ಹೊರಗೆ ಎಸೆದು ಕುಟುಂಬ ಮತ್ತು ಸಮುದಾಯದ ಇಚ್ಛೆಗೆ ವಿರುದ್ಧವಾಗಿ ಹೋದರೆ ಸಹಿಸುವುದಿಲ್ಲ ಎಂದು ಗ್ರಾಮಸ್ಥರ ಮೆಚ್ಚುಗೆ ನಡುವೆ ಸಂದೇಶ ಮುಟ್ಟಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬಿಎಸ್‌ಪಿ ಸೇರಿದ ಅಖಿಲೇಶ್ ದಾಸ್
ವ್ಯಕ್ತಿಯೊಬ್ಬನ ಹತ್ಯೆ: ರೂಪದರ್ಶಿ ಬಂಧನ
ವಿಫಲ ಪ್ರಧಾನಿ: ಬುದ್ಧದೇವ್
ರೈಸ್- ಪ್ರಣಬ್ ಮಾತುಕತೆ
ನ್ಯಾಯಮೂರ್ತಿಗಳಿಗೆ ವಿ.ವಿಮಾನ: ಸು ಕೋ. ವಜಾ
ಆಸ್ತಿ ಪ್ರಕರಣ: ಮಾಯಾವತಿ ಸು.ಕೋ. ಮೊರೆ
ಗ್ರಹ ಗತಿ
ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಅಳಿವು ಉಳಿವಿನ ಹೋರಾಟಕ್ಕೆ ಸಜ್ಜು
ಕರ್ನಾಟಕ ರಾಜಕೀಯದಲ್ಲಿ ವಂಶಪಾರಂಪರ್ಯ ಆಡಳಿತಕ್ಕೆ ನಾಂದಿ ಹಾಡಿದ ದೇವೇಗೌಡರ ಕುಟುಂಬ...
ನಿರ್ಭೀತಿಯಿಂದ ಮತ ಚಲಾಯಿಸಲು ಸಲಹೆ
ದಕ್ಷಿಣ ಭೂಪಟದಲ್ಲಿ ಬಿಜೆಪಿ ಅಧಿಕಾರ: ಸುಷ್ಮಾ ಸ್ವರಾಜ್
ಮನರಂಜನೆ
ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ
ಮುಂದೆ ಓದಿ|ಮತ್ತಷ್ಟು...
Marketplace