ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಬಿಎಸ್‌ಪಿ ಸೇರಿದ ಅಖಿಲೇಶ್ ದಾಸ್
ನವದೆಹಲಿ (ಏಜೆನ್ಸಿ), ಶನಿವಾರ, 10 ಮೇ 2008   ( 15:35 IST )
ಮಾಜಿ ಉಕ್ಕು ಕೇಂದ್ರ ರಾಜ್ಯ ಸಚಿವ ಮತ್ತು ವಾರದ ಆದಿಯಲ್ಲಿ ಕಾಂಗ್ರೆಸ್‌ಗೆ ರಾಜನಾಮೆ ನೀಡಿದ್ದ ಅಖಿಲೇಶ್ ದಾಸ್ ಶನಿವಾರದಂದು ಬಹುಜನ್ ಸಮಾಜವಾದಿ ಪಕ್ಷ (ಬಿಎಸ್‌ಪಿ)ವನ್ನು ಸೇರಿಕೊಂಡಿದ್ದಾರೆ.

ಮುಖ್ಯಸ್ಥೆ ಮಾಯಾವತಿ ಉಪಸ್ಥಿತಿಯೊಂದಿಗೆ ದಾಸ್ ಬಿಎಸ್‌ಪಿ ಪಕ್ಷವನ್ನು ಸೇರಿಕೊಂಡರು. ಅವರನ್ನು ಬಿಎಸ್‌ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ.

ಕಳೆದ ತಿಂಗಳ ಸಂಪುಟ ವಿಸ್ತರಣೆಯಲ್ಲಿ ತಮ್ಮನ್ನು ಕೈಬಿಟ್ಟಿದ್ದರಿಂದ ಅಸಮಾಧಾನಕ್ಕೊಳಗಾದ ಮಾಜಿ ಕಾಂಗ್ರೆಸ್ ಎಂಪಿ ದಾಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದರು. ದಾಸ್ ರಾಜ್ಯಸಭೆ ಸ್ಥಾನಕ್ಕೂ ರಾಜಿನಾಮೆ ನೀಡಿದ್ದಾರೆ.

ಹಿರಿಯ ನಾಯಕತ್ವವನ್ನು ನಿರಂತರವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂದು ದೂರಿ ಅವರು ಪಕ್ಷವನ್ನು ತೊರೆದಿದ್ದರು. ರಾಹುಲ್ ಗಾಂಧಿ ಕೇಂದ್ರಿತ ಗಮನವು ಸಂಬಂಧಿತ ನಾಯಕರುಗಳಿಗೆ ಪಕ್ಷದ ಹಿತದೃಷ್ಠಿಯಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಅವರು ಆರೋಪಿಸಿದ್ದರು.

ರಾಹುಲ್ ಗಾಂಧಿ ಸಂಪೂರ್ಣ ಕಾಂಗ್ರೆಸನ್ನು ನಿಯಂತ್ರಿಸುತ್ತಿದ್ದು, ಆದ್ದರಿಂದ ಅವರು ಸಂಪೂರ್ಣ ದೇಶವನ್ನು ನಿಯಂತ್ರಿಸುತ್ತಿದ್ದಾರೆ ಎಂದು ದಾಸ್ ಹೇಳಿದ್ದರು.

ಅಖಿಲೇಶ್ ಉತ್ತರ ಪ್ರದೇಶದ ವಿಶೇಷವಾಗಿ ಅಮೇಥಿಯ ಸಕ್ರಿಯ ರಾಜಕಾರಣಿಯಾಗಿದ್ದಾರೆ. ಅವರ ರಾಜಿನಾಮೆಯಿಂದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸ್ವಲ್ಪಮಟ್ಟಿನ ಹಿನ್ನಡೆ ಪಡೆಯಲಿದೆ.

1990ರ ಆದಿಯಲ್ಲಿ ತಮ್ಮ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ದಾಸ್, ಲಕ್ನೋದ ಅತ್ಯಂತ ಯುವ ಮೇಯರ್ ಆದರು. ಮುಂದಿನ ದಿನಗಳಲ್ಲಿ ಪಕ್ಷದೊಳಗೆ ಬೆಳೆಯುತ್ತಾ ಬಂದು, ಕಾಂಗ್ರೆಸ್‌ನ ಅಗ್ರ ನಾಯಕರಾಗಿದ್ದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವ್ಯಕ್ತಿಯೊಬ್ಬನ ಹತ್ಯೆ: ರೂಪದರ್ಶಿ ಬಂಧನ
ವಿಫಲ ಪ್ರಧಾನಿ: ಬುದ್ಧದೇವ್
ರೈಸ್- ಪ್ರಣಬ್ ಮಾತುಕತೆ
ನ್ಯಾಯಮೂರ್ತಿಗಳಿಗೆ ವಿ.ವಿಮಾನ: ಸು ಕೋ. ವಜಾ
ಆಸ್ತಿ ಪ್ರಕರಣ: ಮಾಯಾವತಿ ಸು.ಕೋ. ಮೊರೆ
ಮುಂಬೈ ಗಲಭೆ: ಶಿವಸೇನೆಯ 6 ಮಂದಿ ಖುಲಾಸೆ
ಗ್ರಹ ಗತಿ
ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಅಳಿವು ಉಳಿವಿನ ಹೋರಾಟಕ್ಕೆ ಸಜ್ಜು
ಕರ್ನಾಟಕ ರಾಜಕೀಯದಲ್ಲಿ ವಂಶಪಾರಂಪರ್ಯ ಆಡಳಿತಕ್ಕೆ ನಾಂದಿ ಹಾಡಿದ ದೇವೇಗೌಡರ ಕುಟುಂಬ...
ನಿರ್ಭೀತಿಯಿಂದ ಮತ ಚಲಾಯಿಸಲು ಸಲಹೆ
ದಕ್ಷಿಣ ಭೂಪಟದಲ್ಲಿ ಬಿಜೆಪಿ ಅಧಿಕಾರ: ಸುಷ್ಮಾ ಸ್ವರಾಜ್
ಮನರಂಜನೆ
ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ
ಮುಂದೆ ಓದಿ|ಮತ್ತಷ್ಟು...
Marketplace