|
| ನ್ಯಾಯಮೂರ್ತಿಗಳಿಗೆ ವಿ.ವಿಮಾನ: ಸು ಕೋ. ವಜಾ |
| ನವದೆಹಲಿ(ಏಜೆನ್ಸಿ), ಶನಿವಾರ, 10 ಮೇ 2008 ( 10:52 IST ) | |
ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ದೇಶದೆಲ್ಲಡೆ ಸಂಚರಿಸಲು, ರಾಷ್ಟ್ರಪತಿಗಳಂತೆ ವಿಶೇಷ ವಿಮಾನಕ್ಕೆ ನಿರ್ದೇಶನ ಕೋರಿ ಸುಪ್ರಿಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರಿಂ ಕೋರ್ಟ್ ನ್ಯಾಯ ಪೀಠವು ವಜಾಗೊಳಿಸಿದೆ.
''ನಾವು ಇದರ ಬಗ್ಗೆ ಚರ್ಚೆಯನ್ನು ಮಾಡಲೂ ಇಚ್ಛಿಸುವುದಿಲ್ಲ'' ಎಂದು ನ್ಯಾಯ ಪೀಠದ ಮುಖ್ಯ ನ್ಯಾಯಮೂರ್ತಿಗಳಾದ ಕೆ.ಜಿ. ಬಾಲಕೃಷ್ಣನ್ ಅವರು ಹೇಳಿದ್ದಾರೆ. ಅದೇ ರೀತಿ ಈ ಅರ್ಜಿಯು ಮುಂದಿನ ನ್ಯಾಯ ಪೀಠಕ್ಕೆ ಹೋಗುವ ಮೊದಲು ಯಾವುದೇ ವಿಚಾರಣೆ ನಡೆಸಲು ನ್ಯಾಯಮೂರ್ತಿಗಳ ಪೀಠವು ಒಪ್ಪಲಿಲ್ಲ.
'ನಯಾಭಾರತಿ' ಎನ್ನುವ ಹೆಸರಿನ ಸರಕಾರೇತರ ಸಂಸ್ಥೆಯೊಂದು, ''ನ್ಯಾಯಮೂರ್ತಿಗಳು ರಾಷ್ಟ್ರಪತಿಯವರಿಗೆ ಪ್ರತಿಜ್ಞಾ ಸ್ವೀಕಾರವನ್ನು ಮಾಡಿಸುತ್ತಾರೆ. ಇದರಿಂದಾಗಿ ನ್ಯಾಯಮೂರ್ತಿಗಳಿಗೆ ರಾಷ್ಟ್ರಪತಿಯವರಿಗೆ ನೀಡುವಂತಹ ವಿಶೇಷ ವಿಮಾನದ ವ್ಯವಸ್ಥೆಯನ್ನು ಮಾಡಬೇಕು. ಮತ್ತು 'ಎಸ್‌ಪಿಜಿ' ಮತ್ತು 'ಜೆಡ್' ರೀತಿಯ ರಕ್ಷಣೆಯನ್ನೂ ಹೈ ಕೋರ್ಟ್ ನ್ಯಾಯಾಧೀಶರಿಗೆ ನೀಡಬೇಕು'' ಎಂದು ಅರ್ಜಿಸಲ್ಲಿಸಿತ್ತು.
ಈ ಅರ್ಜಿಯು ಇದಕ್ಕೆ ಮೊದಲು ಅಲಹಾಬಾದ್ ಹೈಕೋರ್ಟ್‌ನಲ್ಲಿ ತಿರಸ್ಕೃತವಾಗಿದ್ದು, ಇದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಲು ಒಪ್ಪಿರಲಿಲ್ಲ. ಇದನ್ನು ಪ್ರಶ್ನಿಸಿದ ಎನ್‌ಜಿಓ, ಈ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೆಂದು ಪರಿಗಣಿಬೇಕು. ಅದರ ಮೂಲಕ ಸ್ವತಂತ್ರ ನ್ಯಾಯಾಂಗ ಮತ್ತು ನ್ಯಾಯಾಧೀಶರ ರಕ್ಷಣೆಗೆ ಒತ್ತು ನೀಡಬೇಕೆಂದು ಮೇಲ್ಮನವಿ(ಎಸ್ಎಲ್‌ಪಿ) ಸಲ್ಲಿಸಿತ್ತು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ |
| |
|
|
|
|
|
|
|