ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಚೀನಾದ ಪರಮಾಣು ಸಬ್‌ಮೆರೀನ್ ಸೂಕ್ಷ್ಮ ಗಮನ
ಮುಂಬೈ(ಏಜೆನ್ಸಿ), ಶುಕ್ರವಾರ, 9 ಮೇ 2008   ( 17:01 IST )
ದಕ್ಷಿಣ ಚೀನಾದ ಭೂಗರ್ಭದ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾದ ಪರಮಾಣು ಜಲಾಂತರ್ಗಾಮಿಗಳನ್ನು ಭಾರತೀಯ ನೌಕಾಪಡೆ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ನೌಕಾಪಡೆ ಸಿಬ್ಬಂದಿ ಮುಖ್ಯಸ್ಥ ಅಡ್ಮೈರಲ್ ಸುರೇಶ್ ಮೆಹ್ತಾ ತಿಳಿಸಿದರು. ಚೀನದ ಪರಮಾಣು ಸಬ್‌ಮೆರೀನ್ ಬಗ್ಗೆ ಭಾರತಕ್ಕೆ ಮುಂಚೆಯೇ ಅರಿವಿತ್ತು ಮತ್ತು ಅದು ಗಮನಾರ್ಹ ಬೆದರಿಕೆಯನ್ನು ಒಡ್ಡುತ್ತಿಲ್ಲ ಎಂದು ನುಡಿದರು.

ದಕ್ಷಿಣ ಚೀನಾ ಸಮುದ್ರದ ಹೈನನ್ ದ್ವೀಪದಲ್ಲಿ ಚೀನಾ ನೌಕಾ ನೆಲೆಯನ್ನು ಅಮೆರಿಕ ವಿಜ್ಞಾನಿಗಳ ಪರಮಾಣು ಅಸ್ತ್ರಗಳ ಕಾವಲುಸಮಿತಿ ಒಕ್ಕೂಟ ಪತ್ತೆಹಚ್ಚಿತ್ತು. ನೌಕಾನೆಲೆ ಭಾರತಕ್ಕೆ ಅತೀ ಸಮೀಪದಲ್ಲಿದೆ ಎಂದು ಮಾಧ್ಯಮಗಳ ವರದಿಯಿಂದ ಈ ಪ್ರದೇಶದಲ್ಲಿ ಅಪಾಯದ ಗಂಟೆ ಬಾರಿಸಿತ್ತು.

ನೌಕೆಗಳು ರಾಷ್ಟ್ರೀಯ ಹಿತಾಸಕ್ತಿಗಳ ಅನ್ವಯ ಕೆಲಸ ಮಾಡುತ್ತವೆ. ಹಿಂದೂಮಹಾಸಾಗರದ ಮೂಲಕ ಚೀನದ ತೈಲ ಸಾಗಣೆಯಾಗುತ್ತದೆ. ಹಿಂದುಮಹಾಸಾಗರದ ಮೂಲಕ ಭಾರತದ ನೌಕಾಮಾರ್ಗದ ವ್ಯಾಪಾರ ಕೂಡ ನಡೆಯುತ್ತದೆ. ಚೀನಾದ ಹಿತಾಸಕ್ತಿಯು ನಮ್ಮ ಹಿತಾಸಕ್ತಿ ರೀತಿಯಲ್ಲಿದೆ ಎಂದು ಅಡ್ಮೈರಲ್ ಮೆಹ್ತಾ ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬಡವಿದ್ಯಾರ್ಥಿಗಳ ನೆರವಿಗೆ ವಿದ್ಯಾರ್ಥಿವೇತನ ಯೋಜನೆ
ಭಾರತ-ಪಾಕ್ ಗಡಿ: ಭಾರಿ ಗುಂಡಿನ ಚಕಮಕಿ
ಕಂದಹಾರ್ ಪ್ರಸಂಗ: ಸೋನಿಯಾಗೆ ಬಿಜೆಪಿ ಪ್ರತ್ಯುತ್ತರ
ಮಹಾರಾಷ್ಟ್ರಕ್ಕೆ ವಲಸಿಗರದ್ದೂ ಕೊಡುಗೆಯಿದೆ: ಪವಾರ್
ಭಾರತ ಅಣು ಒಪ್ಪಂದ ಮುಂದುವರಿಸಿ; ಕಲಾಂ
ರಾಜ್ ಠಾಕ್ರೆಗೆ ನೋಟೀಸ್ ಜಾರಿ
ಗ್ರಹ ಗತಿ
ದೈನಿಕ - ನಿಮ್ಮ ಆಶಾವಾದ ಮತ್ತು ಧನಾತ್ಮಕ ವರ್ತನೆ ಮತ್ತು ಹೆಜ್ಜೆಗಳ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತವೆ. ಮಿತ್ರರು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ ಮತ್ತು ಮಹತ್ವದ ಕೆಲಸವೊಂದು ಪೂರ್ಣಗೊಳ್ಳಲಿದೆ. ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಗಳಿಸುತ್ತೀರಿ. ನೀವೀಗ ಮನಸ್ಸಿನ ಆಶಾವಾದಿ ಚೌಕಟ್ಟಿನಲ್ಲಿದ್ದೀರಿ, ಆದರೆ ಸುವಸ್ತುಗಳಿಗಾಗಿ ನೀವು ದುಂದುವೆಚ್ಚಕ್ಕೆ ಮುಂದಾಗುವ ಸಾಧ್ಯತೆಗಳಿವೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
pti
 
ಸ್ಥಿರ ಸರ್ಕಾರಕ್ಕೆ ಕಾಂಗ್ರೆಸ್‌ಗೆ ಮತ: ಸಿಂಗ್
ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ರಾಜ್ಯ ಮುಂದೆಬರಬೇಕಾದರೆ ಸ್ಥಿರಸರ್ಕಾರದ....
ಅಭಿವೃದ್ಧಿ 20 ವರ್ಷ ಹಿಂದಕ್ಕೆ: ಗುಲಾಂ ನಬಿ
ಬಂಗಾರಪ್ಪ ಅಧ್ಯಾಯ ಮುಕ್ತಾಯ:ಯಡ್ಡಿ ಭವಿಷ್ಯ
ಮನರಂಜನೆ
ಚಿತ್ರ ಸುದ್ದಿ - ಕೆಲವು ನಟರು ಕನ್ನಡದಿಂದ ಪರಭಾಷಾ ಚಿತ್ರಕ್ಕೆ ನಟಿಸಲು ಹೋದರೆ ಮತ್ತೆ ಕನ್ನಡಕ್ಕೆ ಬರುವುದಿಲ್ಲ. ಉತ್ತಮ ಅವಕಾಶಗಳು ಅಲ್ಲಿ ಸಿಕ್ಕರೆ ಮತ್ತೆ ಅವರು ಕನ್ನಡಕ್ಕೆ ಬರುವುದಿಲ್ಲ. ಉದಾಹರಣೆಗೆ ನಮ್ಮ ಪ್ರಕಾಶ್ ರೈ. ಈಗ ಈ ಸಾಲಿಗೆ ನಮ್ಮ ಸುದೀಪ್ ಸೇರುತ್ತಾರೋ ಎಂಬ ಭಯ ಕನ್ನಡಿಗರನ್ನು ಕಾಡುತ್ತಿದೆ.
ಮುಂದೆ ಓದಿ|ಮತ್ತಷ್ಟು...
Marketplace