|
| ಬಿಕ್ಕುಗಳ ವೇಷ ಧರಿಸಿದ ಚೀನಾ ಸೈನಿಕರು |
| ನವದೆಹಲಿ(ಏಜೆನ್ಸಿ), ಶನಿವಾರ, 29 ಮಾರ್ಚ್ 2008 ( 17:01 IST ) | |
ಬಿಕ್ಕುಗಳ ವೇಷ ಧರಿಸಿದ ಚೀನಾ ಸೈನಿಕರು ತಾಯಿನಾಡಿನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆಂದು ಧಾರ್ಮಿಕ ನಾಯಕ ದಲೈಲಾಮಾ ಶನಿವಾರ ಆರೋಪಿಸಿದ್ದಾರೆ.
ಟಿಬೆಟ್‌ನಲ್ಲಿ ಮಾ.10ರಿಂದ ಉಂಟಾಗಿರುವ ಕ್ಷೋಬೆಯಲ್ಲಿ ಸತ್ತವರ ಸ್ಮರಣಾರ್ಥ ಪ್ರಾರ್ಥನೆಗೆ ವಿವಿಧ ಧರ್ಮಗಳ ಧಾರ್ಮಿಕ ನಾಯಕರ ಜತೆ ದಲೈಲಾಮಾ ನವದೆಹಲಿಯ ರಾಜ್‌ಘಾಟ್‌ನ ಮಹಾತ್ಮ ಗಾಂಧಿ ಸಮಾಧಿ ಬಳಿ ಸೇರಿದ್ದರು. ಬುದ್ಧನ ಉಪದೇಶಗಳು ಮತ್ತು ಧ್ಯಾನದ ಬಗ್ಗೆ ಕೋರ್ಸ್ ತೆಗೆದುಕೊಳ್ಳಲು ತಾವು ನವದೆಹಲಿಗೆ ಆಗಮಿಸಿದ್ದು, ಲಾಸಾ ವಿದ್ಯಮಾನದಿಂದ ಮನಸ್ಸು ಕಲಕಿಯೆಂದು ಹೇಳಿದರು.
1959ರಲ್ಲಿ ತಾವು ಭಾರತಕ್ಕೆ ಗಡೀಪಾರಾದ ವಿದ್ಯಮಾನದಿಂದ ಉಂಟಾದ ಅನುಭವದಂತೆ ಈಗಲೂ ಸಹ ಅದೇ ರೀತಿಯ ಅನುಭವವಾಗಿದೆ. ಟಿಬೆಟನ್ನರು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆಂಬ ಭಾವನೆ ಸೃಷ್ಟಿಸಲು ಚೀನಾ ತನ್ನ ಯೋಧರನ್ನು ಬೌದ್ಧ ಬಿಕ್ಕುಗಳ ಸೋಗಿನಲ್ಲಿ ಕಳಿಸಿದ್ದಾರೆಂದು ಅವರು ಆರೋಪಿಸಿದರು. ಒಂದು ಚಿತ್ರದಲ್ಲಿ ಲಾಮಾ ಕತ್ತಿಯನ್ನು ಹಿಡಿದಿದ್ದಾರೆ. ಆದರೆ ಅದು ಸಾಂಪ್ರದಾಯಿಕ ಟಿಬೆಟ್ ಕತ್ತಿಯಲ್ಲ. ಕೆಲವು ನೂರು ಸೈನಿಕರು ಬಿಕ್ಕುಗಳ ರೀತಿಯಲ್ಲಿ ಉಡುಪು ಧರಿಸಿದ್ದಾರೆಂದು ದಲೈಲಾಮಾ ಹೇಳಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಮಿಲನ ಚಿತ್ರದ ಯಶಸ್ವಿ ಜೋಡಿಗಳಾದ ನಟ ಪುನೀತ್ ರಾಜ್ ಕುಮಾರ್ ಮತ್ತು ನಿರ್ದೇಶಕ ಪ್ರಕಾಶ್ ಮತ್ತೊಮ್ಮೆ ಜೊತೆಯಾಗಿದ್ದಾರೆ. ಹೋಂ ಪ್ರೊಡಕ್ಷನಿನಲ್ಲಿ ನಿರ್ಮಾಣವಾಗುತ್ತಿರುವ ವಂಶಿ ಚಿತ್ರದಲ್ಲಿ ಅವರು ಮತ್ತೊಮ್ಮೆ ಫ್ಯಾಮಿಲಿ ಹುಡುಗನಾಗಿ ಅಭಿನಯಿಸಲಿದ್ದಾರೆ. |
| |
|
|
|
|
|
|
|