|
| ಇಬ್ಬರು ಶಾಸಕರ ಅಮಾನ್ಯತೆಗೆ ಸುಪ್ರೀಂಕೋರ್ಟ್ ಪುರಸ್ಕಾರ |
| ನವದೆಹಲಿ(ಏಜೆನ್ಸಿ), ಗುರುವಾರ, 7 ಫೆಬ್ರವರಿ 2008 ( 12:19 IST ) | |
ಚಾಲಕನಿರುವ ಕಾರು, ಸೀಮಿತವಲ್ಲದ ಕರೆಗಳೊಂದಿಗೆ ಫೋನ್ ಬಳಕೆ ಮತ್ತು ಆಪ್ತ ಸಹಾಯಕ ಮುಂತಾದ ಸವಲತ್ತುಗಳು ಪರಿಹಾರ ಭತ್ಯೆಗಳಾಗಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಲಾಭದಾಯಕ ಹುದ್ದೆ ಅಡಿಯಲ್ಲಿ ಇಬ್ಬರು ಗೋವಾ ಶಾಸಕರ ಅಮಾನ್ಯತೆಯನ್ನು ಪುರಸ್ಕರಿಸಿದೆ.
ಲಾಭದಾಯಕ ಹುದ್ದೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಶಾಸಕರ ಅಮಾನ್ಯತೆಯನ್ನು ಪುರಸ್ಕರಿಸಿದ ಮುಂಬೈ ಹೈಕೋರ್ಟ್ ತೀರ್ಪಿನ ವಿರುದ್ಧ ಶಾಸಕರು ಸಲ್ಲಿಸಿದ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್, ನ್ಯಾಯಮೂರ್ತಿಗಳಾದ ದಲ್ವೀರ್ ಭಂಡಾರಿ ಮತ್ತು ಡಿ.ಕೆ.ಜೈನ್ ತಿರಸ್ಕರಿಸಿತು.
ಶಾಸಕರಾದ ದಯಾನಂದ ಮಂಡ್ರೇಕರ್ ಗೋವಾ ಖಾದಿ ಮತ್ತು ಗ್ರಾಮ ಕೈಗಾರಿಕೆ ಮಂಡಳಿ ಅಧ್ಯಕ್ಷರಾಗಿದ್ದರು ಮತ್ತು ಸಿಯೊಲಿಂ ಮತ್ತು ವಾಸ್ಕೊ-ಡಾ-ಗಾಮಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದ ಇನ್ನೊಬ್ಬರು ಪರಿಶಿಷ್ಟ ಜಾತಿ ಮತ್ತು ಇತರೆ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರಿಂದ ಅವರ ಮಾನ್ಯತೆಗಳನ್ನು ರದ್ದುಮಾಡಲಾಗಿತ್ತು.
ತಾವು ಯಾವುದೇ ವೇತನ ಅಥವಾ ಭತ್ಯೆ ಪಡೆಯುತ್ತಿರಲಿಲ್ಲ ಮತ್ತು ಪರಿಹಾರ ಭತ್ಯೆಗಳ ರೂಪದಲ್ಲಿ ಕೆಲವು ಸೌಲಭ್ಯಗಳನ್ನು ಪಡೆದಿದ್ದಾಗಿ ಅನರ್ಹ ಶಾಸಕರು ವಾದ ಮಂಡಿಸಿದ್ದರು. ಪರಿಹಾರ ಭತ್ಯೆಯೆಂದರೆ ಅಧಿಕಾರಸ್ತರು ಕರ್ತವ್ಯ ನಿರ್ವಹಣೆಯಲ್ಲಿ ವೆಚ್ಚಮಾಡುವ ಹಣ ಎಂದು ಖಾದಿ ಮಂಡಳಿ ಮತ್ತು ಪರಿಶಿಷ್ಟ ನಿಗಮಕ್ಕೆ ಸಂಬಂಧಿಸಿದ ನಿಯಮಗಳನ್ನು ವ್ಯಾಖ್ಯಾನಿಸುತ್ತಾ ಸುಪ್ರೀಂಕೋರ್ಟ್ ತಿಳಿಸಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೇಶ - ಪುರುಷರಿಗೆ ವಿವಾಹವಾಗುವ ಕನಿಷ್ಠ ವಯಸ್ಸನ್ನು 18ಕ್ಕೆ ಇಳಿಸಬೇಕು ಮತ್ತು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವತಿಯರ ವಿವಾಹವನ್ನು ಅಕ್ರಮ ಎಂದು ಘೋಷಿಸುವಂತೆ ಭಾರತದ ಕಾನೂನು ಆಯೋಗ ಶಿಫಾರಸು ಮಾಡಿದೆ. ಸರ್ಕಾರ ಕಾನೂನುಗಳಿಗೆ |
| |
|
|
|
|
 | | File |
| | |
| |
|
|
|
|
|
| ಆಟೋಟ - ಮಾನಸಿಕವಾಗಿ ಕುಗ್ಗಿ ಹೋಗಿರುವ ಆಸ್ಟ್ರೇಲಿಯಾದ ವೇಗದ ಬೌಲರ್ ಶಾನ್ ಟೈಟ್ ಬೆಂಬಲಕ್ಕೆ ಇಡೀ ತಂಡವೇ ಒಂದಾಗಿ ನಿಂತಿದೆ ಎಂದು ಆಸ್ಟ್ರೇಲಿಯಾದ ಇನ್ನೊರ್ವ ಆಟಗಾರ ಮೈಕೆಲ್ ಹಸ್ಸಿ ತಿಳಿಸಿದ್ದಾರೆ. |
| |
|
|
|
|
|
|
|