|
| ಬಂತು ಹೊಸ ವರ್ಷ, ಇರಲಿ ಹೊಸ ಹರ್ಷ | |
ಮತ್ತೊಂದು ವರ್ಷವನ್ನು ಹಿಂದಿಕ್ಕಿ, ಇನ್ನೊಂದು ಹೊಸವರ್ಷದ ಹೊಸ್ತಿಲಲ್ಲಿ ನಿಂತಿದ್ದೇವೆ ನಾವು. ಎಲ್ಲೆಡೆ ಶುಭಾಶಯಗಳ ಭರಾಟೆ, ಬಂಧು ಮಿತ್ರರು, ಆಪ್ತರು, ಆತ್ಮೀಯರು, ಪ್ರೀತಿ ಪಾತ್ರರಿಗೆ ಶುಭಹಾರೈಸುವ ತವಕ. ಮಧ್ಯೆ ನೆಟ್‌ವರ್ಕ್ ಜಾಮ್ ಕುಹಕ.
ಈ ಮಧ್ಯೆ ಇದು ನಮ್ಮ ಸಂಸ್ಕೃತಿ ಅಲ್ಲ, ಇದು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ, ನಮ್ಮ ಹೊಸವರ್ಷವೇನಿದ್ದರೂ ಯುಗಾದಿ ಎಂಬ ಕೆಲ ಅಸಮಾಧಾನ.
ಹೊಸವರ್ಷ ಆಚರಣೆ ಏನಿದ್ದರೂ ಕಮರ್ಷಿಯಲ್ ಗಿಮಿಕ್ಸ್ ಅಂತ ಮೂಗು ಮುರಿಯುವವರೂ ಇದ್ದಾರೆ. ಇದು ಅಲ್ಲ ಅಂತ ಅನ್ನುವಂತಿಲ್ಲ. ನಮ್ಮ ಭಾರತ ಹಳ್ಳಿಗಳಿಂದ ತುಂಬಿದ ರಾಷ್ಟ್ರ. ಹಳ್ಳಿಗಳತ್ತ ನಾವೊಮ್ಮೆ ಗಮನ ಹರಿಸೊಣ. ಹಳೆ ವರ್ಷದ ಅಜ್ಜನನ್ನು ಸುಡುವ ಅಥವಾ ಹೊಸವರ್ಷದ ಮಧ್ಯರಾತ್ರಿಯ ಕುಡಿತ-ಕುಣಿತದ ಮೋಜುಗಳು ಅಲ್ಲಿಲ್ಲ. ಎಲ್ಲವೂ ಎಂದಿನಂತೆಯೇ ಶಾಂತ. ಈ ದಿನವೂ ಇತರ ಎಲ್ಲಾ ದಿನಗಳಂತೆಯೇ ಒಂದು ದಿನ ಅಷ್ಟೆ. ಹೆಚ್ಚಿನವರಿಗೆ ತುತ್ತಿನ ಚೀಲ ತುಂಬಿಸುವ ಚಿಂತೆಯೇ ತುಂಬಿರುವಾಗ ನಕಲಿ ಆಚರಣೆಗಳ ಹಂಗು ಅವರಿಗ್ಯಾಕೆ?
ಇರಲಿ, 2008ರ ಹೊಸ್ತಿಲಲ್ಲಿ ನಿಂತಿರುವ ನಾವು 'ಬದುಕಿ, ಬದುಕಲು ಬಿಡಿ' ತತ್ವವನ್ನು ಹಾರೈಸಿಕೊಳ್ಳೋಣ. ಸಾಧ್ಯವಾದಲ್ಲಿ ನೊಂದವರಿಗೆ ಸಾಂತ್ವಾನ ನೀಡುವ ಪ್ರಯತ್ನ ನಮ್ಮೆಲ್ಲರದ್ದಾಗಲಿ. ಉಪಕಾರದ ಹಸ್ತ ಚಾಚಲಾಗದಿದ್ದಲ್ಲಿ, ಕನಿಷ್ಠಪಕ್ಷ ಉಪದ್ರವ ಮಾಡದೇ ಇರುವಂತಾಗಲಿ.
ದ್ವೇಷ, ವಂಚನೆ ಜಾಗದಲ್ಲಿ ಪ್ರೀತಿ, ಸಹಬಾಳ್ವೆ ಮೊಳೆಯಲಿ, ಶಾಂತಿ, ಅಭ್ಯುದಯ, ಸಂತೋಷ ತುಂಬಿರಲಿ ಎನ್ನುತ್ತಾ ಈ ವರ್ಷಕ್ಕೆ ಅಡಿ ಇಡೋಣ.
ನನಗೆ ಶುಭಾಯಶಯ ಕೋರಿ ಬಂದ ಎಸ್ಸೆಮ್ಮೆಸ್ಸೊಂದರ ಹಾರೈಕೆ- ನಡೆ ಮನವೆ ನಾಳೆಗಳಿಗೆ ಸಿಹಿ ನೆನಪ ಬುತ್ತಿ ಜೊತೆಗೆ, ಎಡವಿ ಬಿದ್ದ ಕ್ಷಣವ ಕೊಡವಿ, ಅಡೆತಡೆಗಳ ಎಲ್ಲ ಕೆಡವಿ, ಕಟ್ಟುವ ಸವಿ ಸುಂದರ ಕನಸುಗಳ, ಕಾಯುವ ನನಸಾಗುವ ಆ ಕ್ಷಣಗಳ ಹೊಸ ವರ್ಷ ತರಲಿ ಹರುಷ ಪ್ರತಿ ನಿಮಿಷ
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ. |
| |
|
|
|
|
|
|
|