|
| ಹೊಸವರ್ಷಕ್ಕೆ ರಾಷ್ಟ್ರದ ಗಣ್ಯರ ಶುಭಹಾರೈಕೆ |
| ನವದೆಹಲಿ (ಏಜೆನ್ಸಿ), ಸೋಮವಾರ, 31 ಡಿಸೆಂಬರ್ 2007 ( 19:32 IST ) | |
ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿಯವರುಗಳು ಹೊಸ ವರ್ಷದ ಸಂದರ್ಭದಲ್ಲಿ ರಾಷ್ಟ್ರದ ಜನತೆಗೆ ಶುಭ ಹಾರೈಸಿದ್ದು, ಹೊಸ ಸವಾಲುಗಳನ್ನು ಸ್ವೀಕರಿಸಲು ಸನ್ನದ್ಧರಾಗಿ ಎಂಬ ಸಂದೇಶವನ್ನು ನೀಡಿದ್ದಾರೆ.
ಹೊಸ ವರ್ಷವು ಸರ್ವರಿಗೂ ಶಾಂತಿ, ಅಭ್ಯುದಯ ಮತ್ತು ಸಂತೋಷವನ್ನು ತರಲಿ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹಾರೈಸಿದ್ದಾರೆ.
ರಾಷ್ಟ್ರದ ಉತ್ತಮತೆಗಾಗಿ ಕಾರ್ಯಪ್ರವೃತ್ತರಾಗಲು ಹಾಗೂ ನಿರ್ಗತಿಕರು ಮತ್ತು ಸವಲತ್ತು ವಂಚಿತರಿಗೆ ಸಹಾಯ ಮಾಡುವ ಮೂಲಕ ವಿಶ್ವವನ್ನು ಉತ್ತಮವಾಗಿಸಲು ಅಲ್ಪಕಾಣಿಕೆ ನೀಡಲು ರಾಷ್ಟ್ರಪತಿಗಳು ಈ ಸಂದರ್ಭದಲ್ಲಿ ಜನತೆಗೆ ಕರೆ ನೀಡಿದ್ದಾರೆ.
ಹೊಸ ವರ್ಷದ ಉದಯದ ವೇಳೆ ಹೊಸ ಭರವಸೆ ಮತ್ತು ಹೊಸ ನಿರೀಕ್ಷೆಗಳೊಂದಿಗೆ, ಹೊಸ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಿರುವಂತೆ ಜನತೆಗೆ ಉಪರಾಷ್ಟ್ರಪತಿ ಮೊಹಮ್ಮದ್ ಅನ್ಸಾರಿ ಕರೆ ನೀಡಿದ್ದಾರೆ.
ಹೊಸ ವರ್ಷದ ಶುಭಾಷಯ ಕೋರಿದ ಪ್ರಧಾನಿ ಮನಮೋಹನ್ ಸಿಂಗ್, ಯಶಸ್ಸು, ಸಾಧನೆಗಳು ಮತ್ತು ತಪ್ಪುಗಳ ಮೂಲಕ ಕಳೆದು ಹೊದ ವರ್ಷದ ಅವಲೋಕನಕ್ಕೆ ಇದು ಸಕಾಲ ಎಂದು ಹೇಳಿದ್ದಾರಲ್ಲದೆ, ಹೊಸ ಗುರಿಗಳನ್ನು ಹೂಡಲು ಇದು ನಮಗೆ ಅವಕಾಶವನ್ನು ಒದಗಿಸುತ್ತದೆ ಎಂದು ನುಡಿದರು.
ಹೊಸ ವರ್ಷವು ಜಗತ್ತಿನಾದ್ಯಂತ ಜನರಿಗೆ, ಭದ್ರತೆ, ಅಭ್ಯುದಯ ಮತ್ತು ಶಾಂತಿಯನ್ನು ತರಲಿ ಎಂದು ಸಿಂಗ್ ಹಾರೈಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ. |
| |
|
|
|
|
|
|
|