|
| ಮುಂಬಯಿ ಗುರಿ ಇರಿಸಿದ್ದ ಬಂಧಿತ ಉಗ್ರರು
|
| ನವದೆಹಲಿ (ಏಜೆನ್ಸಿ), ಸೋಮವಾರ, 31 ಡಿಸೆಂಬರ್ 2007 ( 19:01 IST ) | |
ಉತ್ತರ ಪ್ರದೇಶದ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಐವರು ಉಗ್ರರು, ಗೇಟ್ ವೇ ಆಫ್ ಇಂಡಿಯಾ ಸೇರಿದಂತೆ ಮುಂಬೈಯ ನಾಲ್ಕು ಜನನಿಬಿಡ ಪ್ರದೇಶಗಳಲ್ಲಿ ಏಕಕಾಲಕ್ಕೆ ಸ್ಫೋಟ ನಡೆಸಲಿಚ್ಚಿಸಿದ್ದರು ಎಂಬ ಅಂಶ ತನಿಖೆಯ ವೇಳೆಗೆ ಹೊರಬಿದ್ದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬಾಂಗ್ಲಾ ಮೂಲದ ನಿಷೇಧಿತ ಹರ್ಕತ್-ಉಲ್-ಜಿಹಾದಿ ಸಂಘಟನೆಯು ಸ್ಫೋಟ ಜರ್ಜರಿತ ಮುಂಬಯಿಯಲ್ಲಿ ಮತ್ತೆ ಸ್ಫೋಟಗಳನ್ನು ನಡೆಸಲು ಸಂಚು ಹೂಡಿತ್ತು ಎಂಬ ಅಂಶವನ್ನು ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ ಬಾರಾಬಂಕಿ, ಜಮ್ಮು ಕಾಶ್ಮೀರದ ದೋಡಾ ಮತ್ತು ಪಶ್ಚಿಮ ಬಂಗಾಲದ 24 ಉತ್ತರ ಪರಗಣಗಳಲ್ಲಿ ಸಿಕ್ಕಿಬಿದ್ದಿರುವ ದುಷ್ಕರ್ಮಿಗಳ ವಿಚಾರಣೆ ವೇಳೆಗೆ ಈ ಅಂಶಗಳು ವ್ಯಕ್ತವಾಗಿವೆ ಎಂದು ಅಧಿಕೃತ ಮೂಲಗಳು ಉಲ್ಲೇಖಿಸಿವೆ.
ಉತ್ತರ ಪ್ರದೇಶದ ಲಕ್ನೋ, ಫೈಜಾಬಾದ್ ಮತ್ತು ವಾರಣಾಸಿಗಳ ನ್ಯಾಯಾಲಯಗಳ ಆವರಣದಲ್ಲಿ ಬಾಂಬ್ ಸ್ಫೋಟಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಐವರನ್ನು ಬಂಧಿಸಲಾಗಿದೆ.
ಉಗ್ರರು ಗೇಟ್ ವೇ ಆಫ್ ಇಂಡಿಯಾ, ಅಂಧೇರಿ, ಒಬೆರಾಯ್ ಹೋಟೆಲ್ ಮತ್ತು ನವಿ ಮುಂಬಯಿಗಳಲ್ಲಿ ಮತ್ತೆ ಸ್ಫೋಟ ನಡೆಸುವ ವಿಚಾರ ಹೊಂದಿದ್ದರು ಎಂಬ ಭಯಾನಕ ಅಂಶ ತನಿಖೆಯ ವೇಳೆಗೆ ಹೊರಬಿದ್ದಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ. |
| |
|
|
|
|
|
|
|